



ಶಿವಮೊಗ್ಗ,ಆ.16:
ಸ್ವಾತಂತ್ಯ್ರೋತ್ಸವದಂದು ಜನ ಮತ್ತು ಪೊಲೀಸರ ಮದ್ಯ ಪ್ರೀತಿಯ ವಾತಾವರಣ ವೃದ್ದಿಸುವ ಕಾರ್ಯವನ್ನು ಶಿವಮೊಗ್ಗ ಎಸ್ಪಿ ಅವರ ಇಡೀ ಪೊಲೀಸ್ ತಂಡ ಮಾಡುತ್ತಿರುವುದು ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳ ಆವರಣದಲ್ಲಿ, ಪೊಲೀಸ್ ಠಾಣೆಗೆ ಆಗಮಿಸುವ ಸಾರ್ವಜನಿಕರು ಕುಳಿತುಕೊಳ್ಳಲು ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾಗಿರುವ ಸಮಾಧಾನ ಕಟ್ಟೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ., ಐಪಿಎಸ್ ಅವರು ಉದ್ಘಾಟಿಸಿದರು.
ಸಾರ್ವಜನಿಕರು ಪೊಲೀಸ್ ಠಾಣೆಗೆ ಆಗಮಿಸಿದ ಸಂದರ್ಭದಲ್ಲಿ ಉತ್ತಮ ಹಾಗೂ ಅನುಕೂಲಕರ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸಮಾಧಾನ ಕಟ್ಟೆಯನ್ನು ನಿರ್ಮಿಸಲಾಗಿದೆ.

ಈ ಸಂದರ್ಭದಲ್ಲಿ ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸಂಜೀವ್ ಕುಮಾರ್ , ಪೊಲೀಸ್ ಉಪಾಧೀಕ್ಷಕರು, ದೇವರಾಜ್ ಟಿ.ವಿ., ಪೊಲೀಸ್ ಇನ್ಸ್ಪೆಕ್ಟರ್, ಶಿವಮೊಗ್ಗ ಸಂಚಾರ ವೃತ್ತ; ಪೊಲೀಸ್ ಉಪನಿರೀಕ್ಷಕರು, ಪೂರ್ವ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಹಾಗೂ ಠಾಣೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.

