
ಹುಡುಕಾಟದ ವರದಿ- ಸ್ವಾಮಿ
ಶಿವಮೊಗ್ಗ,ಆ.16:
ಕೇವಲ ಎರಡು ಗಂಟೆ 30 ನಿಮಿಷದೊಳಗೆ ಅತ್ಯಂತ ವ್ಯವಸ್ಥಿತವಾಗಿ ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದು, ಎಲ್ಲರ ಮೆಚ್ಚುಗೆಗೆ, ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ಮೆಚ್ಚುಗೆಗೆ ಕಾರಣವಾಗಿದ್ದು ವಿಶೇಷ.

ಒಂಬತ್ತು ಗಂಟೆಗೆ ಸರಿಯಾಗಿ ಆರಂಭಗೊಂಡ ಕಾರ್ಯಕ್ರಮ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಒಂದು ಕ್ಷಣವೂ ವ್ಯರ್ಥವಿಲ್ಲದೆ ಸುಮಾರು 20 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಒಳಗೊಂಡಂತಿದ್ದ ಇಡೀ ಕ್ರೀಡಾಂಗಣ ಮಂತ್ರಮುಗ್ಧವಾಗಿ ಭಾರತಾಂಬೆಯ ಹಬ್ಬ ಆಚರಿಸಿದ್ದು ಇಡೀ ರಾಜ್ಯದಲ್ಲಿ ಮಾದರಿ ಹಾಗೂ ವಿಶೇಷ ಎನ್ನಬಹುದು. ಮಳೆರಾಯನೂ ಬಿಡುವು ನೀಡಿದ್ದು ಸಾರ್ಥಕ ಎನಿಸಿತು.



ಇದೊಂದು ಇತಿಹಾಸ ಸೃಷ್ಟಿಸುವಂತಹ ಅತಿ ಹೆಚ್ಚು ಮಕ್ಕಳು ಸೇರಿರುವ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮ ವೀಕ್ಷಣೆಗೆ ಸುಮಾರು 18 ಸಾವಿರ ಮಕ್ಕಳು ಬಂದಿದ್ದರು. ನೃತ್ಯ ಪ್ರದರ್ಶನ ಹಾಗೂ ಮಾರ್ಚ್ ಫಾಸ್ಟ್ ಮಾಡಲು ಎರಡೂವರೆ ಸಾವಿರ ಮಕ್ಕಳಿದ್ದರು. ಒಟ್ಟಾರೆ 21000ಸಾವಿರಕ್ಕೂ ಹೆಚ್ಚು ಮಕ್ಕಳು ಕ್ರೀಡಾಂಗಣದಲ್ಲಿ ಸೇರಿದ್ದು ಇತಿಹಾಸದ ದಾಖಲೆಯೇ ಹೌದು. ಇತಿಹಾಸದಲ್ಲಿ ಇದೇ ಮೊದಲ ಬಾರೀ ಇಷ್ಟೊಂದು ಜನ ಮತ್ತು ಮಕ್ಕಳು ದೇಶದ ಹಬ್ಬದಲ್ಲಿ ಪಾಲ್ಗೊಂಡಿತ್ತು ಎನ್ನಬಹುದು


ಅರ್ಥಪೂರ್ಣ ಕಾರ್ಯಕ್ರಮಕ್ಕೆ/ ಮಕ್ಕಳ ಹಬ್ಬವಾಗಲು ಕಾರಣ ಶಿಕ್ಷಣ, ಪೊಲೀಸ್, ಪಾಲಿಕೆ,ಆರೋಗ್ಯ ಹಾಗೂ ವಿಶೇಷವಾಗಿ ಸಂಚಾರಿ ಪೊಲೀಸ್ ಠಾಣೆಯವರ ಪರಿಶ್ರಮ, ಇತರೆ ಎಲ್ಲರ ಪರಿಶ್ರಮವೇ ಕಾರಣ.
ಮಕ್ಕಳನ್ನು ನೆಹರೂ ಕ್ರೀಡಾಂಗಣಕ್ಕೆ ಕರೆದಿರುವ ವಿಷಯದಲ್ಲಿ ಆರ್ ಟಿ ಓ ಕಚೇರಿ ರಸ್ತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಂಡು ಒಳಾಂಗಣ ಕ್ರೀಡಾಂಗಣದ ಮೂಲಕವಾಗಿ ಮಕ್ಕಳನ್ನು ಕ್ರೀಡಾಂಗಣದ ಅಂಗಳದೊಳಗೆ ಕಳುಹಿಸಿದ ಕಾರ್ಯ ವಿಶೇಷವಾಗಿತ್ತು.
ಕ್ರೀಡಾಂಗಣದ ಮುಂದೆ ಸಾರ್ವಜನಿಕರು, ಅಧಿಕಾರಿಗಳು, ರಾಜಕಾರಣಿಗಳು, ಜನ ಪ್ರತಿನಿಧಿಗಳು ಹಾಗೂ ಇತರರ ಅವಕಾಶಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇಡೀ ರಾಜ್ಯದಲ್ಲೇ ಅತ್ಯಂತ ಯಶಸ್ವಿಯಾಗಿ 20 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಹಾಗೂ ಅಲ್ಲಿನ ಇತರ ಉದ್ಯೋಗಿಗಳ ಶ್ರಮ ನಿಜಕ್ಕೂ ಫಲಪ್ರದವಾಗಿದೆ.
ಡಿ ಸಿ ಎಸ್ ಪಿಹಾಗೂ ಸಿಇಒ ಅವರ ಮಾರ್ಗದರ್ಶನಂತೆ ರಮೇಶ್ ಹಾಗೂ ಇತರರು ಕಳೆದ ಹತ್ತು ದಿನಗಳಿಂದ ಎಲ್ಲಾ ಶಾಲೆಗಳನ್ನು ಸಂಪರ್ಕಿಸಿ ಸ್ಪಷ್ಟ ಸೂಚನೆ ಎಂಬಂತೆ ಕ್ರೀಡಾಂಗಣದ ಹಬ್ಬದಲ್ಲಿ ಮಕ್ಕಳನ್ನು ಪಾಲ್ಗೊಳ್ಳುವಂತೆ ಮಾಡುವ ಜವಾಬ್ದಾರಿಯನ್ನು ಶಾಲೆಗೆ ವಹಿಸಿದ್ದರು.
👉ಪ್ರತಿ ಶಾಲೆಯಿಂದ ಇಷ್ಟು ಮಕ್ಕಳು ಬರಬೇಕು ಅಂತ ಹೇಳಿ ಆದೇಶ ಮಾಡಿ ಹಾಕಿ ಕಳಿಸಿದ್ದು ಇಷ್ಟೊಂದು ಮಕ್ಕಳು ಆಗಮಿಸಲು ಕಾರಣ.
👉ನಾಲ್ಕು ಮೀಟಿಂಗ್ ಮಾಡಿದ್ದಾರೆ
👉ಗೂಗಲ್ ಮೀಟ್ ಮಾಡಲಾಗಿದೆ
👉ಪೊಲೀಸ್ ಇಲಾಖೆ ನಾವು ಸೇರಿ ಸಭೆ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಶಿವಮೊಗ್ಗದ ಎಲ್ಲ ಶಾಲೆಗಳ ಸಾಕಷ್ಟು ಮಕ್ಕಳು ನೆಹರು ಕ್ರೀಡಾಂಗಣದಲ್ಲಿ ದೇಶದ ಹಬ್ಬವನ್ನು ಅತ್ಯಂತ ಪ್ರೀತಿಯಿಂದ ಸವಿದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಯರನ್ನು ಸ್ಮರಿಸುವ ಮನೋಭೂಮಿಕೆ ಸೃಷ್ಟಿಯಾಗಿದ್ದು, ವಿಶೇಷವೇ ಹೌದು. ಅವರ ಪ್ರಯತ್ನಗಳಿಗೆ ಉತ್ತರವಾಗಿ ಇಡೀ ರಾಜ್ಯದಲ್ಲಿಯೇ ಅತ್ಯಂತ ಯಶಸ್ವಿ ಕಾರ್ಯಕ್ರಮ ಇಲ್ಲಿ ನಡೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ.


ಮಕ್ಕಳ ಶಾಲಾ ಬಸ್ಸುಗಳನ್ನು ಸಹ ಒಂದೆಡೆ ನಿಲ್ಲುವಂತೆ ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಚಾರಿ ಪೊಲೀಸರು ಮಾಡಿದ್ದು ಜನ ಮೆಚ್ಚುಗೆಗೆ ಪಾತ್ರವಾಯಿತು.
ಅತ್ಯಂತ ವಿಶೇಷವಾಗಿ ಎಲ್ಲಾ ಶಾಲಾ ಕಾಲೇಜುಗಳಿಗೆ ಶಿಕ್ಷಣ ಇಲಾಖೆ ಈ ಮೊದಲೇ ಸ್ಪಷ್ಟ ಸೂಚನೆ ನೀಡಿದ್ದು, ಆರೋಗ್ಯದ ಸಮಸ್ಯೆ ಇರುವವರು ಭಾಗವಹಿಸದಂತೆ ಹಾಗೂ ಉಳಿದ ಮಕ್ಕಳು ವ್ಯವಸ್ಥಿತವಾಗಿ ಶಾಲಾ ಬಸ್ ಮೂಲಕ ಕ್ರೀಡಾಂಗಣ ತಲುಪಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.
ಮಕ್ಕಳು ಕ್ರೀಡಾಂಗಕ್ಕೆ ಬರುವಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಬಗ್ಗೆ ಎಸ್ಪಿ ನಿಖಿಲ್ ಸ್ಪಷ್ಟ ಕ್ರಮಕೈಗೊಂಡಿದ್ದು, ಮೂರು ಬಾಗಿಲುಗಳ ಪ್ರವೇಶವನ್ನು ವ್ಯವಸ್ಥಿತವಾಗಿ ಮಾಡಿಸಿದ್ದು ವಿಶೇಷ, ಎಲ್ಲೆಡೆ ಪೊಲೀಸರ ರಕ್ಷಣೆ ಇರುವಂತೆ ಮಾಡಲಾಗಿತ್ತು.
ಸಂಚಾರಿ ಪೊಲೀಸ್ ಇನ್ಸ್ ಸ್ಪೆಕ್ಟರ್ ದೇವರಾಜ್ ಹಾಗೂ ಅವರ ತಂಡ ಬಿಇಓ ರಮೇಶ ಅವರ ಜೊತೆ ಸೇರಿ
ಮಕ್ಕಳು ಕ್ರೀಡಾಂಗಣದಲ್ಲಿ ಸೇರುವ ಬಗ್ಗೆ ಟ್ರಾಫಿಕ್ ಜಾಮ್ ಆಗದಿರಲಿ. ಮಕ್ಕಳ ತಳ್ಳಾಟ, ನೂಕು ನುಗ್ಗಲಿನ ವ್ಯತ್ಯಾಸ ಆಗದ ರೀತಿಯಲ್ಲಿ ನೂರಕ್ಕೆ ನೂರರಷ್ಟು ಪ್ಲಾನ್ ಮಾಡಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ದೇವರಾಜ್ ಹಾಗೂ ರಮೇಶ್ ಅವರ ತಂಡದ ಪ್ರಯತ್ನ ಮೆಚ್ಚುಗೆಯ ಸಾಧನೆಯೇ ಹೌದು.






ಇದಕ್ಕಾಗಿ ಸಂಚಾರಿ ಪೊಲೀಸ್ ಠಾಣೆ ಶಿವಮೊಗ್ಗ ನಗರದ ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸುವ ಎಲ್ಲಾ ಶಾಲಾ ವಾಹನಗಳು ನಿಲ್ಲುವ ಮತ್ತು ಬರುವ ಸ್ಥಳವನ್ನು ಮೊದಲೇ ಸ್ಪಷ್ಟ ಮಾರ್ಗಸೂಚಿ ಮೂಲಕ ನೀಡಿದ್ದು ವಿಶೇಷವಾಗಿತ್ತು.
ಅಂತೆಯೇ ಶಿಕ್ಷಣ ಇಲಾಖೆ ಶಿವಮೊಗ್ಗದಲ್ಲಿ ಒಂದೊಂದು ವಲಯದ ಮಕ್ಕಳನ್ನು ಕ್ರೀಡಾಂಗಣಕ್ಕೆ ಕರೆತರುವಾಗ ಅದರ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ವಿಶೇಷವಾಗಿ ಸಿಆರ್ಪಿಗಳಿಗೆ ನೀಡಿದ್ದು ಮತ್ತೊಂದು ಅರ್ಥಗರ್ಭಿತ ಎನಿಸುತ್ತದೆ. ಮಹಾನಗರ ಪಾಲಿಕೆ ಸಹಕಾರ ವಿಶೇಷವೇ ಹೌದು.


ನೆಹರು ಕ್ರೀಡಾಂಗಣದ ಬಲಭಾಗ ಪ್ರವೇಶ ದ್ವಾರದ ಮೂಲಕ ಪ್ರವೇಶಿಸಬೇಕಾದ ಕ್ಲಸ್ಟರ್ ವಾರು ಮಕ್ಕಳ ವಿವರವನ್ನು ವ್ಯವಸ್ಥಿತವಾಗಿ ನೀಡಿದ್ದು, ಅದನ್ನು ನೋಡಿಕೊಳ್ಳಲು ಅಧಿಕಾರಿಗಳನ್ನು ಹಾಗೂ ನೌಕರರನ್ನು ನೇಮಿಸಲಾಗಿತ್ತು.
ಅಂತೆಯೇ ಸಂಚಾರಿ ಪೊಲೀಸರು ಈ ವ್ಯವಸ್ಥೆಯನ್ನು ಅತ್ಯಂತ ಸೂಕ್ತ ಮಟ್ಟದಲ್ಲಿ ಮಾಡಿದ್ದು, ಮತ್ತೊಂದು ವಿಶೇಷ.
ಅಂತೆಯೇ ಕಾರ್ಯಕ್ರಮದ ವಿಷಯಕ್ಕೆ ಬಂದರೆ ಕಾರ್ಯಕ್ರಮ ನಿಗದಿತ ಸಮಯದಲ್ಲಿ ಆರಂಭವಾಯಿತು. ಅದನ್ನು ಅತ್ಯಂತ ಸ್ಪಷ್ಟ ಹಾಗೂ ನಿಯಮಿತ ಸಮಯದಲ್ಲಿ ಅತಿ ಹೆಚ್ಚು ಖುಷಿಗಳ ಮೂಲಕ ಆಚರಿಸಿದ್ದು, ಮಕ್ಕಳ ಹಬ್ಬವನ್ನಾಗಿ ಮಾಡಿದ್ದು ವಿಶೇಷ.


ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಸಚಿವರೂ ಆದ ಮಧು ಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯನ್ನು ಆತ್ಮೀಯವಾಗಿ ತಮ್ಮೊಂದಿಗೆ ಕೂರಿಸಿಕೊಂಡು ಪತ್ರಕರ್ತರಿಗೆ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಈ ಮೂವರು ಅಧಿಕಾರಿಗಳಿಗೆ ಹಾಗೂ ಇಡೀ ವ್ಯವಸ್ಥೆಯನ್ನು ನೋಡಿಕೊಂಡ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ನೌಕರರಿಗೆ ವಿಶೇಷವಾಗಿ ಸಂಚಾರಿ ಪೊಲೀಸರಿಗೆ, ಮಹಾನಗರ ಪಾಲಿಕೆ, ಕಂದಾಯ ಇಲಾಖೆಯವರಿಗೆ, ಶಿಕ್ಷಣ ಇಲಾಖೆಗೆ ಅಭಿನಂದನೆ ತಿಳಿಸಿದರು.

2025ರ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಬೆಂಗಳೂರಿನಲ್ಲಿ ಕೇವಲ 40 ನಿಮಿಷದಲ್ಲಿ ನಡೆಸಿದ್ದೆವು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಅಚ್ಚುಕಟ್ಟತನ ಹಾಗೂ ವ್ಯವಸ್ಥೆಯನ್ನು ನೋಡಿ ನಮಗೆ ಮೆಚ್ಚಿಗೆ ಸೂಚಿಸಿದ್ದರು. ಕಳೆದ ಬಾರಿಯ ಶಿವಮೊಗ್ಗದ ಗಣರಾಜ್ಯೋತ್ಸವ ಸಹ ಇದೇ ಮಾದರಿಯಲ್ಲಿ ವ್ಯವಸ್ಥಿತವಾಗಿ ನಡೆಯಿತು ಎಂದರು.
ಇದು ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವ ಹಬ್ಬವಾಗಿತ್ತು. ಈಗ ಮತ್ತೆ ಸಚಿವ ಸ್ಥಾನ ಪಡೆದ ನಂತರ ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ನಡೆಸಿದ ಜಿಲ್ಲಾಡಳಿತಕ್ಕೆ ಹಾಗೂ ಇತರ ಎಲ್ಲಾ ಇಲಾಖೆಗಳಿಗೆ ಮನಪೂರ್ವಕ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ಈ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯನ್ನು ಹುಡುಕುತ್ತಾ ಹೋದರೆ ವಿಶೇಷವಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಪಿ. ಪ್ರಭುಲಿಂಗ ಕವಲಿಕಟ್ಟಿ, ನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎನ್. ಹೇಮಂತ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ, ಶಿಕ್ಷಣ ಇಲಾಖೆ ಹಾಗೂ ಇಡೀ ಜಿಲ್ಲಾಡಳಿತದ ತಂಡ ಕಳೆದ ಹತ್ತು ದಿನಗಳಿಂದ ವ್ಯವಸ್ಥಿತವಾಗಿ ಕಾರ್ಯಕ್ರಮ ಮಾಡಲು ಮುಂದಾಗಿದ್ದೇ ಕಾರಣ.
ಯಶಸ್ವಿ ಮಕ್ಕಳ ಹಬ್ಬದಂತೆ ದೇಶ ಪ್ರೇಮ ಬಿತ್ತಿದ ಕಾರ್ಯಕ್ರಮ ನಡೆಸಿದ ಎಲ್ಲಾ ಇಲಾಖೆಗಳಿಗೆ, ಅಧಿಕಾರಿಗಳಿಗೆ, ನೌಕರರಿಗೆ “ತುಂಗಾತರಂಗ” ದಿನಪತ್ರಿಕೆಯ ಅಭಿವಂದನೆಗಳು.