ಶಿವಮೊಗ್ಗ,ಸೆ.29:
ಮೈಸೂರು ಯಾರ್ಡ್’ನಲ್ಲಿ ಸುರಕ್ಷತಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೆಳಗಿನ ರೈಲುಗಳ ಸಂಚಾರದಲ್ಲಿ ರದ್ದು, ಭಾಗಶಃ ರದ್ದು, ಮಾರ್ಗ ಬದಲಾವಣೆ, ಮರು ವೇಳಾಪಟ್ಟಿ ಹಾಗೂ ಸಂಚಾರ ನಿಯಂತ್ರಣ ಮಾಡಲಾಗುತ್ತಿದೆ. ಅವುಗಳ ವಿವರಗಳು ಈ ಕೆಳಗಿನಂತಿವೆ
ರದ್ದು:
ದಿನಾಂಕ 02.10.2026 ರಂದು ಹೊರಡಬೇಕಿದ್ದ ರೈಲು ಸಂಖ್ಯೆ 56232 ಎಸ್ಎಮ್’ವಿಟಿ ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲಿನ ಸಂಚಾರ ರದ್ದುಗೊಳಿಸಲಾಗಿದೆ
ದಿನಾಂಕ 03.10.2026 ರಂದು ಹೊರಡಬೇಕಿದ್ದ ರೈಲು ಸಂಖ್ಯೆ 56266 ಮೈಸೂರು–ಅರಸೀಕೆರೆ ಪ್ಯಾಸೆಂಜರ್ ಮತ್ತು ರೈಲು ಸಂಖ್ಯೆ 56202 ಮೈಸೂರು–ಚಾಮರಾಜನಗರ ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಭಾಗಶಃ ರದ್ದು:
ದಿನಾಂಕ 02.10.2026 ರಂದು ಹೊರಡುವ ರೈಲು ಸಂಖ್ಯೆ 66553 ಕೆಎಸ್ಆರ್ ಬೆಂಗಳೂರು–ಅಶೋಕಪುರಂ ಮೆಮು ರೈಲು ಪಾಂಡವಪುರ–ಅಶೋಕಪುರಂ ನಡುವೆ ಭಾಗಶಃ ರದ್ದಾಗಲಿದ್ದು, ಈ ರೈಲು ಅಶೋಕಪುರಂದ ಬದಲಿಗೆ ಪಾಂಡವಪುರದಲ್ಲಿಯೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.
ದಿನಾಂಕ 03.10.2026 ರಂದು ಹೊರಡುವ ರೈಲು ಸಂಖ್ಯೆ 66554 ಅಶೋಕಪುರಂ–ಕೆಎಸ್ಆರ್ ಬೆಂಗಳೂರು ಮೆಮು ರೈಲು ಅಶೋಕಪುರದ ಬದಲಿಗೆ ಪಾಂಡವಪುರದಿಂದಲೇ ತನ್ನ ನಿಗದಿತ ಸಮಯದಲ್ಲಿ ಹೊರಡಲಿದೆ. ಅಶೋಕಪುರಂ ಮತ್ತು ಪಾಂಡವಪುರ ನಡುವಿನ ಸೇವೆಯು ಭಾಗಶಃ ರದ್ದುಗೊಳ್ಳಲಿದೆ.
ದಿನಾಂಕ 03.10.2026 ರಂದು ಹೊರಡುವ ರೈಲು ಸಂಖ್ಯೆ 66579 ಕೆಎಸ್ಆರ್ ಬೆಂಗಳೂರು–ಅಶೋಕಪುರಂ ಮೆಮು ರೈಲು ಪಾಂಡವಪುರ–ಅಶೋಕಪುರಂ ನಡುವೆ ಭಾಗಶಃ ರದ್ದಾಗಲಿದ್ದು, ಈ ರೈಲು ಅಶೋಕಪುರದ ಬದಲಿಗೆ ಪಾಂಡವಪುರದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.
ದಿನಾಂಕ 02.10.2026 ರಂದು ಹೊರಡುವ ರೈಲು ಸಂಖ್ಯೆ 66580 ಅಶೋಕಪುರಂ–ಕೆಎಸ್ಆರ್ ಬೆಂಗಳೂರು ಮೆಮು ರೈಲು ಅಶೋಕಪುರದ ಬದಲಿಗೆ ಪಾಂಡವಪುರದಿಂದಲೇ ತನ್ನ ನಿಗದಿತ ಸಮಯದಲ್ಲಿ ಹೊರಡಲಿದೆ. ಅಶೋಕಪುರಂ ಮತ್ತು ಪಾಂಡವಪುರ ನಡುವಿನ ಸೇವೆಯು ಭಾಗಶಃ ರದ್ದುಗೊಳ್ಳಲಿದೆ.

ದಿನಾಂಕ 03.10.2026 ರಂದು ಹೊರಡುವ ರೈಲು ಸಂಖ್ಯೆ 56281 ಚಾಮರಾಜನಗರ–ತುಮಕೂರು ಪ್ಯಾಸೆಂಜರ್ ರೈಲು ಚಾಮರಾಜನಗರ–ಮೈಸೂರು ನಡುವೆ ಭಾಗಶಃ ರದ್ದಾಗಲಿದ್ದು, ಚಾಮರಾಜನಗರದ ಬದಲಿಗೆ ಮೈಸೂರಿನಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಮಾರ್ಗ ಬದಲಾವಣೆ:
ದಿನಾಂಕ 02.10.2026 ರಂದು ಹೊರಡುವ ರೈಲು ಸಂಖ್ಯೆ 16585 ಎಸ್ಎಮ್’ವಿಟಿ ಬೆಂಗಳೂರು–ಮುರುಡೇಶ್ವರ ಎಕ್ಸ್’ಪ್ರೆಸ್ ಕೆಎಸ್ಆರ್ ಬೆಂಗಳೂರು–ನೆಲಮಂಗಲ–ಶ್ರವಣಬೆಳಗೊಳ–ಹಾಸನ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು, ಕೃಷ್ಣರಾಜನಗರ ಮತ್ತು ಹೊಳೆನರಸೀಪುರ ನಿಲ್ದಾಣಗಳಲ್ಲಿ ಈ ರೈಲಿಗೆ ನಿಗದಿಪಡಿಸಿದ್ದ ನಿಲುಗಡೆ ಇರುವುದಿಲ್ಲ.
ದಿನಾಂಕ 02.10.2026 ರಂದು ಹೊರಡುವ ರೈಲು ಸಂಖ್ಯೆ 16586 ಮುರುಡೇಶ್ವರ–ಎಸ್ಎಮ್’ವಿಟಿ ಬೆಂಗಳೂರು ಎಕ್ಸ್’ಪ್ರೆಸ್ ಹಾಸನ–ಶ್ರವಣಬೆಳಗೊಳ–ನೆಲಮಂಗಲ–ಕೆಎಸ್ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಹೊಳೆನರಸೀಪುರ, ಕೃಷ್ಣರಾಜನಗರ, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ಈ ರೈಲಿಗೆ ನಿಗದಿಪಡಿಸಿದ್ದ ನಿಲುಗಡೆ ಇರುವುದಿಲ್ಲ.
ರೈಲುಗಳ ಮರು ವೇಳಾಪಟ್ಟಿ:
ದಿನಾಂಕ 03.10.2026 ರಂದು ಹೊರಡುವ ರೈಲು ಸಂಖ್ಯೆ 16552 ಅಶೋಕಪುರಂ–ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್’ಪ್ರೆಸ್ ರೈಲು ಅಶೋಕಪುರಂನಿಂದ 65 ನಿಮಿಷ ತಡವಾಗಿ ಹೊರಡಲಿದೆ.

ದಿನಾಂಕ 03.10.2026 ರಂದು ಹೊರಡುವ ರೈಲು ಸಂಖ್ಯೆ 20663 ಮೈಸೂರು–ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್’ಪ್ರೆಸ್ ಮೈಸೂರಿನಿಂದ 15 ನಿಮಿಷ ತಡವಾಗಿ ಹೊರಡಲಿದೆ.
ದಿನಾಂಕ 03.10.2026 ರಂದು ಹೊರಡುವ ರೈಲು ಸಂಖ್ಯೆ 16215 ಮೈಸೂರು–ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್ ಮೈಸೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.

ದಿನಾಂಕ 03.10.2026 ರಂದು ಹೊರಡುವ ರೈಲು ಸಂಖ್ಯೆ 20676 ಮೈಸೂರು–ಬೆಳಗಾವಿ ಎಕ್ಸ್’ಪ್ರೆಸ್ ಮೈಸೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.
ದಿನಾಂಕ 03.10.2026 ರಂದು ಹೊರಡುವ ರೈಲು ಸಂಖ್ಯೆ 16206 ಮೈಸೂರು–ತಾಳಗುಪ್ಪ ಎಕ್ಸ್’ಪ್ರೆಸ್ ಮೈಸೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.
ದಿನಾಂಕ 03.10.2026 ರಂದು ಹೊರಡುವ ರೈಲು ಸಂಖ್ಯೆ 16208 ಮೈಸೂರು–ಯಶವಂತಪುರ ಎಕ್ಸ್’ಪ್ರೆಸ್ ಮೈಸೂರಿನಿಂದ 60 ನಿಮಿಷ ತಡವಾಗಿ ಹೊರಡಲಿದೆ.
ರೈಲು ಸಂಚಾರ ನಿಯಂತ್ರಣ:
- ದಿನಾಂಕ 03.10.2026 ರಂದು ಹೊರಡುವ ರೈಲು ಸಂಖ್ಯೆ 56201 ಚಾಮರಾಜನಗರ–ಮೈಸೂರು ಪ್ಯಾಸೆಂಜರ್ ರೈಲು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.