filter: 0; fileterIntensity: 0.0; filterMask: 0; hdrForward: 0; highlight: false; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 33;






ಶಿವಮೊಗ್ಗ,ಆ.16: ಶಿವಮೊಗ್ಗ ನಗರ ಡಿವಿಷನ್ ವೀರಶೈವ ವಿದ್ಯಾರ್ಥಿ ನಿಲಯ (ಎನ್.ಡಿ.ವಿ.ಹಾಸ್ಟೆಲ್) ಇದೀಗ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ರೂಪ ಪಡೆಯಲು ಸಜ್ಜಾಗಿದೆ. ಹಳೆಯ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷ ಣಿಕ ಹಾಗೂ ವಸತಿ ಅಗತ್ಯ ಗಳನ್ನು ಗಮನದಲ್ಲಿಟ್ಟುಕೊಂಡು ಸುಮಾರು ೯ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡ ಭವ್ಯ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದ್ದು ಉದ್ಘಾಟ ನೆಗೆ ಕ್ಷಣಗಣನೆ ಆರಂಭವಾಗಿದೆ.
ಮಲೆನಾಡು ಭಾಗದ ವಿದ್ಯಾರ್ಥಿ ಗಳಿಗೆ ವಿದ್ಯಾಭ್ಯಾಸ ಅವಕಾಶ ಕಲ್ಪಿಸುವ ದೂರದೃಷ್ಟಿಯಿಂದ ಈ ವಿದ್ಯಾರ್ಥಿ ನಿಲಯದ ಪರಂಪರೆ ಆರಂಭಗೊಂಡಿತ್ತು. ೧೯೧೬ರಲ್ಲಿ ಶಿವಮೊಗ್ಗದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಚಾಲನೆ ದೊರೆತ್ತಿದ್ದು, ಗ್ರಾಮೀಣ ಹಾಗೂ ದೂರದ ಪ್ರದೇಶಗಳಿಂದ ನಗರಕ್ಕೆ ವಿದ್ಯಾಭ್ಯಾಸ ಕ್ಕಾಗಿ ಆಗಮಿಸುತ್ತಿದ್ದ ವಿದ್ಯಾರ್ಥಿ ಗಳಿಗೆ ಇದು ಆಶ್ರಯದ ನೆಲೆಯಾಯಿತು.
ಈ ವಿಷಯದಲ್ಲಿ ಅನಂತಪುರ ಮಠದ ಮಹಾಸ್ವಾಮಿಗಳಾದ ಶ್ರೀ ಮನ್ನಿರಂಜನ ಜಗದ್ಗುರು ಅವರು ಶಿವಮೊಗ್ಗದಲ್ಲಿ ಒಂದು ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಬೇಕೆಂದು, ಅಲ್ಲದೆ ಅದರ ಪೋಷಣೆಗಾಗಿ ಒಂದು ಫಂಡನ್ನು ಶೇಖರಿಸ ಬೇಕೆಂದು ಬಹು ದಿನಗಳಿಂದ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಾ ಬಂದಿ ದ್ದರು. ಅಂದಿನ ಮೈಸೂರು ಮಹಾ ರಾಜರ ಸರ್ಕಾರ ಆ ವರ್ಷದ ಬಜೆಟ್ನಲ್ಲಿ ಹಿಂದುಳಿದ ಜನಾಂಗದ ಪ್ರೋತ್ಸಾಹಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು ಮಾಡಿತ್ತು. ಆಗಿನ ಕಾಲಕ್ಕೆ ಅದೊಂದು ದೊಡ್ಡ ಮೊತ್ತ ವಾಗಿದ್ದು, ಸರ್ವರ ಸಮ್ಮೇಳನವನ್ನು ಸಂಘಟಿಸಿ, ೨೩-೯-೧೯೧೬ರಂದು ಆನಂತಪುರದ ಶ್ರೀ ಮನ್ನಿರಂಜನ ಜಗದ್ಗುರು ಲಿಂಗ ಮಹಾಸ್ವಾಮಿ ಗಳಾವರ ಅಧ್ಯಕ್ಷತೆಯಲ್ಲಿ ಸಭೆ ಸೇರಿಸಿ, ನಗರ ಡಿವಿಜನ್ ವೀರಶೈವ ವಿದ್ಯಾವರ್ಧಕ ಸಂಘ ವನ್ನು ಸ್ಥಾಪಿಸಿ ಅದರ ಮೂಲಕ ಕಾರ್ಯಾ ನಿರ್ವಹಿಸಲು ನಿರ್ಧರಿಸಲಾಯಿತು.

ಈ ಸಂಸ್ಥೆಯ ಬೆಳವಣಿಗೆಯಲ್ಲಿ ಸಮಾಜದ ಅನೇಕ ದಾನಿಗಳ ಕೊಡುಗೆ ಸ್ಮರಣೀಯ. ಖ್ಯಾತ ರಂಗಕರ್ಮಿ ಗುಬ್ಬಿ ವೀರಣ್ಣನವರು ಶಿವಮೊಗ್ಗದಲ್ಲಿ ನಾಟಕ ಪ್ರದರ್ಶಿಸಿ ಬಂದ ಆದಾಯವನ್ನು ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ ನೀಡಿದ್ದ ರೆಂಬುದು ಸಂಸ್ಥೆಯ ಸೇವಾ ಪರಂಪರೆಗೆ ಸಾಕ್ಷಿಯಾಗಿದೆ.
ಅಂದಿನ ಡೆಪ್ಯುಟಿ ಸೂಪ ರಿಂಟೆಂಡೆಂಟ್ ಸಿದ್ಧರಾಮಣ್ಣ ಶಿವಮೊಗ್ಗದ ಹೃದಯಭಾಗವಾದ ಹಳೆ ತಾಲ್ಲೂಕು ಕಚೇರಿ ರಸ್ತೆಯ ಪಕ್ಕದಲ್ಲಿ ವಿದ್ಯಾರ್ಥಿ ನಿಲಯಕ್ಕೆ ನಿವೇ ಶನ ನೀಡಿದ್ದರಿಂದ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಯಿತು.

ಗಣ್ಯರನ್ನು ರೂಪಿಸಿದ ವಸತಿ ನಿಲಯ :
ಮೈಸೂರು ಪ್ರಾಂತ್ಯದ ಸಚಿವ ಎಲ್. ಸಿದ್ದಪ್ಪ, ಮಾಜಿ ಸಚಿವ ಎಚ್. ಸಿದ್ದಯ್ಯ, ಖ್ಯಾತ ನ್ಯಾಯವಾದಿ ಎಚ್. ಲಿಂಗಪ್ಪ, ಮಾಜಿ ವಿಧಾನಸಭೆ ಸ್ಪೀಕರ್ ಹಾಗೂ ಸಚಿವರಾಗಿದ್ದ ಹೆಚ್.ಎಸ್.ರುದ್ರಪ್ಪ, ಸಾಹಿತಿ ಹೆಚ್. ತಿಪ್ಪೇರುದ್ರಸ್ವಾಮಿ, ಖ್ಯಾತ ಪತ್ರಕರ್ತ ಪಿ.ಲಂಕೇಶ್ ಹಾಗೂ ಪ್ರೊ.ನಂಜುಂಡಪ್ಪ ಸೇರಿದಂತೆ ಹಲವು ಗಣ್ಯರ ವಿದ್ಯಾಭ್ಯಾಸದ ನೆನಪು ಈ ಸಂಸ್ಥೆಯೊಂದಿಗೆ ಬೆಸೆದುಕೊಂಡಿದೆ.
ಪ್ರಸ್ತುತ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಗಳವರ ಮಾರ್ಗದರ್ಶನದಲ್ಲಿ ಸಂಸ್ಥೆ ಮುನ್ನಡೆಯುತ್ತಿದ್ದು, ಮಾಜಿ ಸಂಸದ ಆಯನೂರು ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸ್ಥ ಮಂಡಳಿ ಸಭೆಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಿ ಸಮಾಜದ ಪ್ರಮುಖರು, ವಿದ್ಯಾಪ್ರೇಮಿಗಳು ಹಾಗೂ ದಾನಿಗಳ ಸಹಕಾರ ಪಡೆಯಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಹಾಸ್ಟೆಲ್ ಆಧುನಿಕರಣಕ್ಕೆ ೫ ಕೋಟಿ ರೂ. ಅನುದಾನ ನೀಡಿದ್ದನ್ನು ಸ್ಮರಿಸಬಹುದು.

ನೂತನ ಕಟ್ಟಡದಲ್ಲಿ ವಿಶಾಲ ಗ್ರಂಥಾಲಯ, ಪ್ರಾರ್ಥನಾ ಹಾಲ್, ಪ್ರಸಾದ ನಿಲಯ, ಆಧುನಿಕ ಅಡುಗೆ ಮನೆ ಹಾಗೂ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿದೆ.