ಸೊರಬ : ಪಟ್ಟಣದ ಸೇರಿ ತಾಲೂಕಿನಲ್ಲಿ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಇಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಲವರು ಮನೆಯಲ್ಲಿಯೇ ಬೆಳ್ಳಿಯ ನಾಗರಮೂರ್ತಿ ಹಾಗೂ ಬೇರೆ ಕಡೆಯಿಂದ ತಂದಂತಹ ಹುತ್ತದ ಮಣ್ಣಿನ ನಾಗರಮೂರ್ತಿ ಗಳಿಗೆ ಹಾಲೆರೆದರು. ಪಟ್ಟಣದ ಚಿಕ್ಕಪೇಟೆಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಪಕ್ಕ ಹಾಗೂ ಸೊಪ್ಪಿನ ಕೆರಿಯ ದುರ್ಗಾಂಬ ದೇವಸ್ಥಾನ ಹಿಂಬಾಗದ ಹಾಗೂ ಪ್ರಸಿದ್ಧಿತ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಮರುರ್ ರಸ್ತೆ , ಹೀರೇಶಕುನದ ಸಾಗರ ರಸ್ತೆ ಕಾನ್ಕೇರಿಯ ನಾಗರಕಟ್ಟೆ ಸೇರಿದಂತೆ ವಿವಿಧಡೆ ಅರಳಿಮರದ ಅಡಿಯಲ್ಲಿರುವ ನಾಗರಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.


ಹಿಂದೂ ಮುಸ್ಲಿಂ ದೇವರಾಧನೆಯ ಸ್ಥಳವಾದ ಶ್ರೀ ಕಾಳಿಂಗೇಶ್ವರ ದೇವಾಲಯದಲ್ಲಿ ನಾಗರಪಂಚಮಿಯ ದಿನ ಅಂಗವಾಗಿ ಸಹಸ್ರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನ ಹಿಂಬಾಗದ ನಾಗರಮೂರ್ತಿಗಳಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಈ ಗ್ರಾಮದಲ್ಲಿ ಉರುಗ ಗಳ ಸಂಖ್ಯೆ ಹೆಚ್ಚಿದ್ದು ಪ್ರತಿ ಗ್ರಾಮದ ಮನೆ ಹೊಲಗದ್ದೆ ಎನ್ನದೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ.

ಸಾಮಾನ್ಯ ಆದರೆ ಇದುವರೆಗೂ ಯಾರನ್ನು ಕಚ್ಚಿಲ್ಲ ಹಾಗೂ ಯಾರು ಹಾವನ್ನು ಕೊಂದಿಲ್ಲ ಇಲ್ಲಿನ ದೇವರಿಗೆ ಹರಕೆ ಹೊತ್ತ ಸುತ್ತ ಮುತ್ತಲಿನ ತಾಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಹರಕೆ ಹೊತ್ತು ನಾಗರ ಪಂಚಮಿ ಎಂದು ಹರಕೆ ಒಪ್ಪಿಸುವುದು ರೂಢಿಯಾಗಿದೆ.

ಕಾಳಿಂಗೇಶ್ವರ ದೇವಸ್ಥಾನ ಮುಂಭಾಗದ ಬೇವಿನ ಮರಕ್ಕೆ ಹಾಗೂ ಕಾಲಿಂಗ್ ಕಾಳಿಂಗೇಶ್ವರ ದೇವರಿಗೆ ಅರ್ಚನೆ ಮಾಡಿಸಿ ತದನಂತರ ಇಬ್ರಾಹಿಂ ಸ್ವಾಮಿ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.. ಈ ಒಂದು ಸಂದರ್ಭದಲ್ಲಿ ಹೊಸ ಉಡಗೆ ತೊಟ್ಟು ಭಕ್ತರು ದೇವರಿಗೆ ಹಾಲು ಎಳ್ಳು ಉಂಡೆ ಶೇಂಗಾ ಉಂಡೆ ರವೆ ಉಂಡೆ ಪಾಯಸ ಸಿಹಿಯಗಳನ್ನು ಚಿತ್ರಾನ್ನ ಹಲವು ಭಕ್ಷ ಗಳನು ನೈವಿದ್ಯವಾಗಿ ಸಮರ್ಪಿಸಿದರು.

