ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆ ಅಧಿಕಾರಿಗಳು, ಮತಗಟ್ಟೆ ಮೇಲ್ವಿಚಾರಕರು ಮತ್ತು ಮತಗಟ್ಟೆ ಏಜೆಂಟ್ಗಳಿಗೆ ವಿಶೇಷ ತರಬೇತಿ ಕಾರ್ಯಾಗಾರವನ್ನು ದಿನಾಂಕ 27-06-2026 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐ ಆರ್ ) ಅಂಗವಾಗಿ ಮನೆ ಮನೆಗೆ ಭೇಟಿ ನೀಡುವುದು, ಬಿಎಲ್ ಓ ಆಪ್ ತಂತ್ರಾಂಶದಲ್ಲಿ ಮತದಾರರ ಮಾಹಿತಿಯನ್ನು ನಿಖರವಾಗಿ ದಾಖಲಿಸುವುದು ಹಾಗೂ ಮತದಾರರಿಂದ ಎನ್ಯುಮರೇಷನ್ ಫಾರಂಗಳನ್ನುಭರ್ತಿ ಮಾಡಿಸುವ ಕುರಿತು ಈ ಕಾರ್ಯಾಗಾರದಲ್ಲಿ ಸವಿಸ್ತಾರವಾಗಿ ತರಬೇತಿ ನೀಡಲಾಯಿತು.

ತರಬೇತಿಯ ಪ್ರಮುಖ ಮುಖ್ಯಾಂಶಗಳು:
ಮಾರ್ಗದರ್ಶನ ಮತ್ತು ಪರಿಶೀಲನೆ: ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಸೂಡಾ ಆಯುಕ್ತರಾದ ಮಂಜುನಾಥ್ ಅವರು ತರಬೇತಿ ಕಾರ್ಯವನ್ನು ಖುದ್ದಾಗಿ ವೀಕ್ಷಿಸಿ, ಉಪಸ್ಥಿತರಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಎಲ್ಲಾ ಸಂದೇಹಗಳಿಗೆ ಸೂಕ್ತ ಉತ್ತರದೊಂದಿಗೆ ಗೊಂದಲ ನಿವಾರಿಸಿದರು.

ಮತದಾನ ಜಾಗೃತಿ ಮತ್ತು ಎಸ್ ಐ ಆರ್ 2026 ಸ್ವೀಪ್ ರಾಜ್ಯ ಮಟ್ಟದ ತರಬೇತುದಾರರಾದ ನವೀದ್ ಅಹ್ಮದ್ ಪರ್ವೆಜ್ ಅವರು ‘ಎಸ್.ಐ.ಆರ್ 2026’ ರ ಉದ್ದೇಶಗಳು ಹಾಗೂ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ಬಿಎಲ್ ಓ ಮತ್ತು ಬಿಎಲ್ ಎ ಕರ್ತವ್ಯಗಳು: ಎಸ್ ಐ ಆರ್ ಎಎಲ್ಎಂಟಿ ಆದ ಹನುಮಂತಪ್ಪ ಅವರು ಮತಗಟ್ಟೆ ಅಧಿಕಾರಿಗಳು ಮತ್ತು ಏಜೆಂಟ್ಗಳು ನಿರ್ವಹಿಸಬೇಕಾದ ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ತಂತ್ರಾಂಶದ ಮಾಹಿತಿ: ಶಿವಮೊಗ್ಗ ಮಹಿಳಾ ಪಾಲಿಟೆಕ್ನಿಕ್ನ ಎಎಲ್ಎಂಟಿ ಆದ ಶರತ್ ನಾಯ್ಕ್ ಅವರು ಬಿಎಲ್ ಞೊ ಆಪ್ ‘ತಂತ್ರಾಂಶವನ್ನು ಬಳಸುವ ವಿಧಾನ ಹಾಗೂ ಅದರಲ್ಲಿ ಮಾಹಿತಿ ದಾಖಲಿಸುವ ತಾಂತ್ರಿಕ ಅಂಶಗಳನ್ನು ಪ್ರಾಯೋಗಿಕವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ರಾಜೀವ್, ಸಿಡಿಪಿಓಅಧಿಕಾರಿಗಳು, ಚುನಾವಣಾ ಶಿರಸ್ತೇದಾರರಾದ ಸುರೇಶ್, ಚುನಾವಣಾ ವಿಭಾಗದ ಸಿಬ್ಬಂದಿ ರಾಮು, ಎಸ್ ಐ ಆರ್ ೨೦೨೬ ರಾಜ್ಯ ಮಟ್ಟದ ತರಬೇತುದಾರ ನವೀದ್ ಅಹ್ಮದ್ ಪರ್ವೇಜ್ ಹಾಗೂ ಶಿವಮೊಗ್ಗ ತಾಲ್ಲೂಕು ಕಚೇರಿಯ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
———————