ಶಿವಮೊಗ್ಗ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಸ್ಐಆರ್ ನೈಜ ಮತ್ತು ಉತ್ಕøಷ್ಟ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಒಂದು ಸಮಗ್ರ ಪ್ರಕ್ರಿಯೆ ಆಗಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಎಸ್ಐಆರ್ ಪ್ರಜಾಪ್ರಭುತ್ವದ ಮಾರಣಹೋಮ ಎಂದು ಕರೆದಿರುವುದಕ್ಕೆ ರಾಷ್ಟ್ರಭಕ್ತರ ಬಳಗದ ಪ್ರಮುಖರು, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಉಗ್ರವಾಗಿ ಖಂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ನಡೆಯುವುದು ಕಾಂಗ್ರೆಸ್ಗೆ ಬೇಡವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕಾಂಗ್ರೆಸ್ನ ಓಟ್ ಬ್ಯಾಂಕ್ಗಳಾದ ಕೆಲವು ದೇಶದ್ರೋಹಿ ಮುಸಲ್ಮಾನರು ಎರಡು-ಮೂರು ಕಡೆ ಮತದಾರರಾಗಿದ್ದುಕೊಂಡು ಮತ ಚಲಾಯಿಸುವುದು ಇದರಿಂದ ತಪ್ಪುತ್ತದೆ ಎಂಬ ಆತಂಕ ಹಾಗೂ ನಕಲಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿರುವ ಬಾಂಗ್ಲಾ ನುಸುಳುಕೋರರ ಮತಗಳು ಕಾಂಗ್ರೆಸ್ಗೆ ಲಭಿಸುವುದಿಲ್ಲ ಎಂಬ ಕಾಂಗ್ರೆಸ್ಗೆ ಕಾಡುತ್ತಿದೆ ಎಂದರು.

ಎಸ್ಐಆರ್ನಿಂದ ಬಿಜೆಪಿಗೆ ಅನುಕೂಲವಾಗಲಿದೆ. ಈ ಪ್ರಕ್ರಿಯೆಯಿಂದ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜಾತಿಯವರ ಹೆಸರನ್ನು ಕೈಬಿಡುವ ಹುನ್ನಾರ ನಡೆದಿದೆ ಎಂದು ಹೇಳುತ್ತಿರುವ ಸಿದ್ಧರಾಮಯ್ಯನವರು ಕೇರಳ ಮತ್ತು ತಮಿಳುನಾಡಿನ ಫಲಿತಾಂಶದ ಬಗ್ಗೆ ಏಕೆ ಮಾತನಾಡುತ್ತಿಲ್ಲ ? ಮತದಾರರ ಪಟ್ಟಿಯಲ್ಲಿ ಯಾವುದೇ ಜಾತಿ ಮತ್ತು ಧರ್ಮದ ಹೆಸರನ್ನು ಕಲೆ ಹಾಕುವುದಿಲ್ಲ. ಹಾಗಿದ್ದಾಗ ಇವರನ್ನು ಹೇಗೆ ಕೈಬಿಡಲು ಸಾಧ್ಯ ಎಂಬ ಕನಿಷ್ಠ ಜ್ಞಾನ ಕೂಡ ಸಿದ್ಧರಾಮಯ್ಯನವರಿಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರಿ ಅಧಿಕಾರಿಗಳೇ ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುತ್ತಿದ್ದು, ತಮ್ಮದೇ ಸರ್ಕಾರಕ್ಕೆ ತಮ್ಮ ನೌಕರರ ಮೇಲೆ ನಂಬಿಕೆ ಇಲ್ಲವಾಯಿತೇ ಎಂಬ ಅನುಮಾನ ಕಾಡುತ್ತಿದೆ.

1951ರಿಂದ ಭಾರತದಲ್ಲಿ 2002ರವರೆಗೆ 9 ಬಾರಿ ಎಸ್ಐಆರ್ ನಡೆದಿದ್ದು ಆಗ ಅಧಿಕಾರದ್ದಲ್ಲಿದ್ದ ಕಾಂಗ್ರೆಸ್ ಪಕ್ಷ ಇದರ ದುರುಪಯೋಗಪಡಿಸಿಕೊಂಡು ಆಡಳಿತ ನಡೆಸಿತ್ತೇ ಎಂಬ ಅನುಮಾನ ಕಾಡುತ್ತಿದೆ ಎಂದರು.

ಜವಾಬ್ದಾರಿಯುತ ನಾಗರೀಕರು ನಿಮ್ಮ ಸುತ್ತಮುತ್ತಲು ಅನುಮಾನಾಸ್ಪದ ಬಾಂಗ್ಲಾ ನುಸುಳುಕೋರ ವ್ಯಕ್ತಿಗಳಿದ್ದರೆ ಮತದಾರರ ಪಟ್ಟಿಯಲ್ಲಿ ಸೇರದಂತೆ ನಿಗಾವಹಿಸಿ. ಮನೆ ಮಾಲೀಕರು ತಮ್ಮ ಬಾಡಿಗೆದಾರರ ಹಿನ್ನಲೆಯಲ್ಲಿ ಪರಿಶೀಲಿಸಿ ಬಾಡಿಗೆ ಕೊಡಬೇಕು. ಶಿವಮೊಗ್ಗದಲ್ಲಿ ನಡೆಯುವ ಎಸ್ಐಆರ್ ಪ್ರಕ್ರಿಯೆಗೆ ರಾಷ್ಟ್ರಭಕ್ತರ ಬಳಗ ಸಂಪೂರ್ಣ ಬೆಂಬಲ ನೀಡಲಿದ್ದು, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮತದಾರರಿಗೆ ಎನ್ಯೂಮರೇಷನ್ ಫಾರಂ ಭರ್ತಿಮಾಡಲು ಬಿಎಲ್ಓಗಳೊಂದಿಗೆ ಕೈಜೋಡಿಸಲಿದ್ದಾರೆ. ಬಿಎಲ್ಎಗಳು ಪ್ರತಿ ಮನೆಗೆ ಬರುತ್ತಾರೆ. ಅವರ ಜೊತೆ ನಿಮ್ಮ ಕಾರ್ಯಕರ್ತರನ್ನು ಕೂಡ ಕಳುಹಿಸಿ ಎಂದು ಕಾಂಗ್ರೆಸ್ಸಿಗರಿಗೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮೋಹನ್ಜಾದವ್, ಮಾಜಿ ಮೇಯರ್ ಸುವರ್ಣಾಶಂಕರ್, ಬಾಲು, ಶಿವಾಜಿ, ರಾಜಣ್ಣ, ಕೆಂಪಮ್ಮ, ಕುಬೇರಪ್ಪ ಮೊದಲಾದವರಿದ್ದರು.