ಶಿವಮೊಗ್ಗ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ಅಡಿಕೆ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಗುಟ್ಕಾ, ಪಾನ್ ಮಸಾಲ ಒಂದು ವ?ದವರೆಗೆ ನಿ?ಧಿಸಿದೆ. ಏಕಾಏಕಿಯಾಗಿ ಸರ್ಕಾರ ಈ ನಿರ್ಧಾರಕೈಗೊಂಡಿದೆ. ರೈತರ ಹಿತದೃಷ್ಟಿಯನ್ನು ಇಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿತ್ತು. ತಂಬಾಕು, ನಿಕೋಟಿನ್ ಮೊದಲಾದವನ್ನು ನಿ?ಧಿಸುವುದರಲ್ಲಿ ತಕರಾರು ಇಲ್ಲ. ಆದರೆ, ಅಡಕೆ ಬೆಳೆಗಾರರಿಗೆ ಅನ್ಯಾಯವಾಗುವಂತಹ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದರು.

ಅಡಿಕೆ ಬೆಳೆ ಪ್ರದೇಶ ವಿಸ್ತರಣೆಯಾಗುತ್ರಿದೆ. ಆದರೆ ನೂರಾರು ರೋಗಗಳಿಂದ ಇಳುವರಿ ಕಡಿಮೆಯಾಗಿದೆ. ಇದರಿಂದಾಗಿ ಮಲೆನಾಡು ರೈತರು ಸಂಕ?ಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಮತೋಲನ ಚಿಂತನೆ ನಡೆಸಬೇಕಿತ್ತು ಎಂದರು.

ಹೊರ ದೇಶದಿಂದ ಕಳ್ಳಮಾರ್ಗದಲ್ಲಿ ಅಡಿಕೆ ಬರುವುದನ್ನು ತಡೆಯುವಂತೆ ಆರಗ ಜ್ಞಾನೇಂದ್ರ ನೇತೃತ್ವದ ತಂಡ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಯುಪಿಎ ಅಧಿಕಾರದಲ್ಲಿ ಇದ್ದಾಗ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂದು ಅಫಿಡವಿಟ್ ನೀಡಿತ್ತು. ಸಿಗರೇಟ್ ಲಾಬಿಗೆ ಈ ಸರ್ಕಾರ ಮಣಿದಿದೆ. ದುರುದ್ದೇಶದಿಂದ ಅಡಿಕೆಗೆ ಹೊಡೆತ ಕೊಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಿದೆ. ತಾತ್ಕಾಲಿಕವಾಗಿ ನಿ?ಧ ಮಾಡಿ ಹೊಡೆತ ನೀಡಲಾಗಿದೆ. ಮಹಾರಾ?ದಲ್ಲಿ ಲಾರಿ ಸೀಜ್ ಮಾಡಿ ಬೆಲೆ ಕುಸಿತಕ್ಕೆ ಕಾರಣವಾಗಿತ್ರು ಎಂದು ದೂರಿದರು.

ಈ ಸರ್ಕಾರ ಬಾರ್ ಲೈಸನ್ಸ್ ನೀಡುತ್ತಿದೆ. ಸಿಎಲ್ ೭ ಪರವಾನಿಗೆ ಹೆಚ್ಚು ನೀಡುತ್ರಿದೆ. ಅಡ್ಡ ದಾರಿಯಲ್ಲಿ ಆದಾಯ ಪಡೆಯಲು ಸರ್ಕಾರ ಮುಂದಾಗಿದೆ. ಇಪ್ಪತ್ತು ನಾಲ್ಕು ಗಂಟೆಯಲ್ಲಿ ಈ ಆದೇಶ ವಾಪಸ್ ಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಸರ್ಕಾರ ಈ ಆದೇಶವನ್ನು ಪ್ರತಿ?ಯಾಗಿ ತೆಗೆದುಕೊಳ್ಳದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಅಶೋಕ್ ನಾಯ್ಕ ಎಸ್ ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಎಸ್. ದತ್ತಾತ್ರಿ, ಮಾಲತೇಶ್, ಸಿದ್ದಲಿಂಗಪ್ಪ, ಗಣೇಶ್ ಬಿಳಕಿ, ಕುಮಾರ್ ನಾಯ್ಡು, ಸಿಂಗನಹಳ್ಳಿ ಸುರೇಶ್, ಮೋಹನ್ ರೆಡ್ಡಿ, ಎಸ್. ಚಂದ್ರಶೇಖರ್, ಮಂಜುನಾಥ್ ಎನ್., ಮುಂತಾದವರು ಉಪಸ್ಥಿತರಿದ್ದರು.