ಶಿವಮೊಗ್ಗ ಹಿಂದೂ ಮಹಾ ಮಂಡಳಿಯಿಂದ ಪ್ರತಿಷ್ಠಾಪಿಸಿದ್ದ 82ನೇ ಗಣಪತಿ ರಾಜಬೀದಿ ಉತ್ಸವ ವಿಜೃಂಭಣೆಯಿಂದ ನಡೆದಿದ್ದು ಇದಕ್ಕೆ ಕಾರಣಕರ್ತರಾದ ಎಲ್ಲಾ ಸಾರ್ವಜನಿಕರು ಜಿಲ್ಲಾ ಪೆÇಲೀಸ್ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಎಲ್ಲಾ ಸಂಘಟನೆ ಗಳಿಗೂ ಹಾರ್ದಿಕವಾಗಿ ಹೃದಯ ತುಂಬಿ ಕೃತಜ್ಞತೆ ಸಲ್ಲಿಸುವುದಾಗಿ ಶಿವಮೊಗ್ಗ ನಗರ ಶಾಸಕ ಹಾಗೂ ಮಹಾಮಂಡಳಿಯ ಸಹಕಾರ್ಯದರ್ಶಿ ಎಸ್ ಎನ್ ಚನ್ನಬಸಪ್ಪ ಹೇಳಿದ್ದಾರೆ.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷವೂ ವೈಭವತೆ ಹೆಚ್ಚಾಗುತ್ತಿದೆ. ಉತ್ಸವದ ಗಾತ್ರ ಹೆಚ್ಚಾಗಿದೆ. ಭಕ್ತಾದಿಗಳು ಹಿಂದೂ ಸಮಾಜ ಹಿಂದೂ ಸರೋವರದಲ್ಲಿ ಮಿಂದ ಅನುಭವವಾಗಿದೆ. ಮೊನ್ನೆ ನಡೆದ ಉತ್ಸವಕ್ಕೆ ಈ ಬಾರಿ ಲಕ್ಷಾಂತರ ಜನ ಆಗಮಿಸಿದ್ದು ಯಾರಿಗೂ ಆಹಾರ ನೀರು ಕೊರತೆಯಾಗದಂತೆ ಎಲ್ಲರೂ ಕೈಜೋಡಿಸಿದ್ದಾರೆ. ಸಮೃದ್ಧಿಯಾಗಿ ಪ್ರಸಾದ ವಿತರಣೆಯಾಗಿದೆ. ಇದೊಂದು ವೈಭವಯುತ ಮೆರವಣಿಗೆಯಾಗಿದ್ದು ಯುವಕ ಯುವತಿಯರು ಕುಟುಂಬ ಸಮೇತರಾಗಿ ಇದರಲ್ಲಿ ಪಾಲ್ಗೊಂಡಿದ್ದರು ಎಂದರು.

ಅನಂತ ಚತುರ್ದಶಿಯಂದು ಗಣೇಶ ಬಿಡುತ್ತಾರೆ ಎಂಬ ವಾಡಿಕೆ ಇದ್ದು ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಅನೇಕರು ಪಾಲ್ಗೊಂಡಿದ್ದು ಈ ಉತ್ಸವ ಜನರ ಭಾವನೆಯಾಗಿ ಪ್ರಕಟಗೊಂಡಿದೆ. ಕೇಸರಿ ಅಲಂಕಾರ ಸಮಿತಿ ವಿಶೇಷವಾಗಿ ತನ್ನ ಕಾರ್ಯ ಮಾಡಿದ್ದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೆÇಲೀಸ್ ಇಲಾಖೆ ಸಹಕಾರ ನೀಡಿದೆ. ರಾಜ್ಯ ಸರ್ಕಾರ ಕೂಡ ಸಂಪೂರ್ಣ ಸಹಕಾರ ನೀಡಿದ್ದು ಒಂದು ಟೀಮ್ ವರ್ಕ್ ಆಗಿ ಈ ಉತ್ಸವ ನಡೆದಿದ್ದು ಪಕ್ಷಬೇಧ ಮರೆತು ರಾಜಕೀಯ ಲವಲೇಶವೂ ಇಲ್ಲದೆ ಎಲ್ಲರೂ ಈ ಹಿಂದೂ ಮಹಾಸಭಾ ಗಣಪತಿಯ ರಾಜಭೀದಿ ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದೆ ಎಂದರು.

ಗೋಪಿ ವೃತ್ತದಲ್ಲಿ ಈ ಉತ್ಸವದ ಭಾಗವಾಗಿಯೇ ವಂದೇ ಮಾತರಂ ಹಾಡಿದ್ದು ಎಲ್ಲರೂ ಧ್ವನಿಗೂಡಿಸಿ ದೇಶಪ್ರೇಮ ಮೆರೆದಿದ್ದಾರೆ. ಇದು ದೇಶದ ಸಂಸ್ಕೃತಿಯ ಉತ್ಸವ ಎಂಬುದು ಸಾಬೀತಾಗಿದೆ. ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಪ್ರಾರಂಭವಾದ ಗಣೇಶೋತ್ಸವ ಹಿಂದುಗಳ ಭಾವನೆಯ ಪ್ರತೀಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನಿಂದ ಆದ ಸಹಕಾರ ನೀಡಿದ್ದಾರೆ. ಎಲ್ಲೂ ಸಣ್ಣ ಅಹಿತಕರ ಘಟನೆಯು ನಡೆಯದೆ ಯಶಸ್ವಿಯಾಗಿದ್ದಕ್ಕೆ ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮಹಾ ಮಂಡಳಿಯ ಅಧ್ಯಕ್ಷರಾದ ಸರಾಫ್ ಶ್ರೀಧರ್ ರಾವ್. ಖಜಾಂಜಿ ಹಾಗು ಸಂಜಾಲಕ ದತ್ತಾತ್ರೇಯ. ರಾಜಶೇಖರ ಆಲಸೆ, ಚೇತನ್ .ನಿರಂಜನ್ ಚಂದ್ರಶೇಖರ್ ಮತ್ತಿತರರು ಇದ್ದರು.