ಶಿವಮೊಗ್ಗ ಕಾಂಗ್ರೆಸ್ ಪಕ್ಷದ ಯುವನೇತಾರ ಹಾಗೂ ಪಕ್ಷದ ಯುವ ಸಂಘಟನೆಯ ಪ್ರಮುಖ ಹೆಚ್ಪಿ ಗಿರೀಶ್ ಅವರನ್ನು ಕಾಂಗ್ರೆಸ್ ಸರ್ಕಾರ ಗುರುತಿಸಿ “ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ” ಯ ಪ್ರಮುಖರನ್ನಾಗಿ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.


ಕಳೆದ 20 ವರ್ಷಕ್ಕೂ ಹೆಚ್ಚುಕಾಲದಿಂದ, ಚಿಕ್ಕ ವಯಸ್ಸಿನಲ್ಲೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಹಾಗೂ ಸೇವಕನಾಗಿ ಕೆಲಸ ಮಾಡಿದ ಗಿರೀಶ್ ಅವರಿಗೆ ಇಂತಹದೊಂದು ಭಾಗ್ಯ

ಲಭಿಸಿರುವುದು ಪಕ್ಷದ ವಲಯದಲ್ಲಿ ಅತ್ಯಂತ ವಿಶ್ವಾಸ ಹಾಗೂ ನಂಬಿಕೆಯನ್ನು ಹುಟ್ಟಿಸಿದೆ.