ಶಿವಮೊಗ್ಗ: ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇ?ನ್ ವತಿಯಿಂದ ಆ.೨೨ ಮತ್ತು ೨೩ ರಂದು ಶಿವಮೊಗ್ಗ ಓಪನ್ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಶಿವಮೊಗ್ಗ ವಿನೋದ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪಂದ್ಯಾವಳಿಗಳು ಆ. ೨೨ ರಂದು ಬೆಳಿಗ್ಗೆ ೧೦ ಗಂಟೆಗೆ ನೆಹರು ಒಳಾಂಗಣ

ಕ್ರೀಡಾಂಗಣದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೆ ನಗರದ ಗಣ್ಯರು, ರಾಜಕಾರಣಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಎರಡು ದಿನದ ಪಂದ್ಯಗಳು ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೆ ನಡೆಯಲಿವೆ ಎಂದರು.

ಈ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅಮೇರಿಕಾ, ಶ್ರೀಲಂಕಾ, ನೇಪಾಳ ಮತ್ತು ಗಬಾನ್ ದೇಶಗಳ ಕ್ರೀಡಾಪಟುಗಳು ಸೇರಿದಂತೆ ದೇಶದ ೮ ರಾಜ್ಯಗಳಿಂದ ೧೫೦೦ ಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ ವಿಶೇ?ವಾಗಿ ಶಿವಮೊಗ್ಗದಿಂದಲೂ ಕೂಡ ೨೦೦ ಸ್ಥಳೀಯ ಕ್ರೀಡಾಪಟುಗಳು

ಭಾಗವಹಿಸಲಿದ್ದಾರೆ. ಅಮೇರಿಕಾದ ಗ್ರಾ??ಂಡ್ ಮಾಸ್ಟರ್ ಫೆರ್ರಿ ಎಫ್.ಮೌಲೆ ಈ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಆಗಮಿಸುತ್ತಾರೆ ಎಂದರು.