ಶಿವಮೊಗ್ಗ: ನಗರದ ಕೋಟೆ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ ಈಗ ಬಿ ಗ್ರೇಡ್ ನಲ್ಲಿದೆ. ಅದನ್ನು ಎ ಗ್ರೇಡ್ಗೆ ತೆಗೆದುಕೊಂಡು ಹೋಗಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನ ಸಮಿತಿಯ ನೂತನ ಅಧ್ಯಕ್ಷ ಕೆ. ದೇವೇಂದ್ರಪ್ಪ ಹೇಳಿದರು.

ಅವರು ಇಂದು ಕೋಟೆ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, “ದೇವಸ್ಥಾನದ ಶಿμÁ್ಟಚಾರ ಪಾಲನೆ ಮಾಡಲಾಗುವುದು. ಪಾವಿತ್ರ್ಯತೆ ಕಾಪಾಡಲಾಗುವುದು. ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗೆ ಬದ್ಧವಾಗಿದ್ದೇವೆ” ಎಂದರು.

ಸುಮಾರು 400 ವರ್ಷಗಳ ಇತಿಹಾಸವಿರುವ ತುಂಗಾ ನದಿ ದಡದಲ್ಲಿರುವ ಈ ಪುಣ್ಯಕ್ಷೇತ್ರವು ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಕೋಟೆ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನವು ದೇವರ ಶಕ್ತಿಯ ದೇವಸ್ಥಾನವಾಗಿದ್ದು, ಭಕ್ತಿಯಿಂದ ಬೇಡಿ ಬರುವ ಎಲ್ಲಾ ಭಕ್ತರ ಸಂಕಲ್ಪಗಳನ್ನು ಈಡೇರಿಸುವ ಅದ್ಭುತ ಕೇಂದ್ರವಾಗಿದೆ ಎಂದು ತಿಳಿಸಿದರು.

ದೇವಸ್ಥಾನವನ್ನು ಬಿ. ಗ್ರೇಡ್ ನಿಂದ ಎ. ಗ್ರೇಡ್ ಗೆ ತರುವುದು ತಮ್ಮ ಮೊದಲ ಆದ್ಯತೆಯಾಗಿದೆ. ದೇವಸ್ಥಾನದ ಎಲ್ಲಾ ಆದಾಯ-ವೆಚ್ಚದ ಲೆಕ್ಕವನ್ನು ಪಾರದರ್ಶಕವಾಗಿ ಇಡಲಾಗುವುದು. ದಾನಿಗಳ ಹಣವನ್ನು ಮೊಬೈಲ್ ಮೂಲಕ ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ಬಳಸಲಾಗುವುದು ಎಂದು ಹೇಳಿದರು.

ದೇವಸ್ಥಾನದ ಪವಿತ್ರತೆ ಮತ್ತು ಶಿμÁ್ಟಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಯುವಜನರನ್ನು ಒಳಗೊಂಡ ಹೊಸ ಸಮಿತಿಯನ್ನು ರಚಿಸಿ, ದೇವಸ್ಥಾನದ ಆವರಣದಲ್ಲಿ ಭಕ್ತಿ ಮತ್ತು ಚೈತನ್ಯ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ದಾನಿಗಳ ಸಹಕಾರದಿಂದ ಸೇವಾ ಕಾರ್ಯಗಳನ್ನು ಹೆಚ್ಚಿಸಲಾಗುವುದು. ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ನೀಡಿ ಗೌರವ ಸಮಾರಂಭ ನಡೆಸಲಾಗುವುದು ಎಂದರು.
ಇಲ್ಲಿನ ಪ್ರಧಾನ ಅರ್ಚಕರಿಗೆ ಕಳೆದ ಮೂರು ವರ್ಷಗಳಿಂದ ಸರ್ಕಾರ ಗೌರವಧನ ನೀಡಿಲ್ಲ. ಅದನ್ನು ಕೂಡಲೇ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.