ಶಿವಮೊಗ್ಗ : ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಪೈಪ್ನ ೧೮ ಬಂಡಲುಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಹೊಳೆಹ್ನೊನೂರು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ತಾಲೂಕಿನ ನಾಗತಿ ಬೆಳಗಲು ಗ್ರಾಮದ ರಾಕೇಶ (೩೦) ಬಂಧಿತ. ಈತನಿಂದ ಅಂದಾಜು
೭,೯೨,೦೦೦ ರೂ. ಮೌಲ್ಯದ ೧೮ ಬಂಡಲು ಪೈಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೈಪ್ ಬಂಡಲುಗಳು ಕಳುವಾದ ಬಗ್ಗೆ ಇಂಜಿನಿಯರ್ ಅವಿನಾಶ ಜೂ.೧೧ರಂದು ಹೊಳೆಹೊನ್ನೂರು
ಠಾಣೆಗೆ ದೂರು ನೀಡಿದ್ದರು. ಇದರ ಪತ್ತೆಗಾಗಿ ನೇಮಿಸಲಾಗಿದ್ದ ಪೊಲೀಸರ ವಿಶೇಷ ತಂಡ
ಆರೋಪಿ ಬಂಧಿಸಿದೆ.