ಶಿವಮೊಗ್ಗ,ಆ,1: ಶಾಲಾ ಇಲಾಖೆ,ಉಪನಿರ್ದೇಶಕರ ಕಛೇರಿ,ಶಿವಮೊಗ್ಗ ಇಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಎಂ ಮತ್ತು ವಾಹನ ಚಾಲಕರಾದ ಬಿ. ಪುಟ್ಟಸ್ವಾಮಿ ಯವರು ಜುಲೈ 31-7-2026 ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದರು. ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಅಭಿನಂದನಾ ಸಮಾರಂಭದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ರಾ. ಹ.ತಿಮ್ಮೇನಹಳ್ಳಿ, ಕಾರ್ಯದರ್ಶಿ ಕೆ. ಜಿ. ಮಠಪತಿ, ನಿವೃತ್ತ ಧೈಹಿಕ ಶಿಕ್ಷಣ ಅಧಿಕಾರಿ ಬಿ. ಹೆಚ್. ನಿರಂಜನ್ ಮೂರ್ತಿ, ಶಿಕ್ಷಣ ಸಂಯೋಜಕರಾದ ಮೋಹನ್ ಡಿ., ಕನ್ನಡ ಶಿಕ್ಷಕರಾದ ಡಾ. ಬಸವರಾಜಪ್ಪ, ಮೂರ್ತಿ ನಾಯ್ಕ, ಪ್ರೆಮಕುಮಾರ್ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.