
ಶಿವಮೊಗ್ಗ,ಸೆ.13:
ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ (ರಿ.) ವತಿಯಿಂದ ಪ್ರತಿ ವರುಷದಂತೆ ಈ ಬಾರಿಯೂ ಅಂತರ ಶಾಲಾ ವೇಗದ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್- 2026 ಅನ್ನು ಅ. 17ರಂದು ಶಿವಮೊಗ್ಗದ ಗೋಪಾಳದಲ್ಲಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನ ಸ್ಕೇಟಿಂಗ್ ರಿಂಕ್ನಲ್ಲಿ ಆಯೋಜಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಎಲ್ಲಾ ಶಾಲೆಗಳ ವಿದ್ಯಾರ್ಥಿ ಸ್ಕೇಟರ್ಗಳು ಭಾಗವಹಿಸಿ ತಮ್ಮ ವೇಗ, ಕೌಶಲ್ಯ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಬಹುದು. ಪ್ರವೇಶ ಶುಲ್ಕ 500 ರೂ ಇದ್ದು, ಎಲ್ಲರಿಗೂ ಪ್ರಶಸ್ತಿ ಪತ್ರ ಹಾಗೂ ಗೆದ್ದವರಿಗೆ ಪದಕ ನೀಡಲಾಗುತ್ತದೆ.
ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವುದು, ರೋಲರ್ ಸ್ಕೇಟಿಂಗ್ ಕ್ರೀಡೆಯನ್ನು ಉತ್ತೇಜಿಸುವುದು ಹಾಗೂ ಪ್ರತಿಭಾವಂತ ಸ್ಕೇಟರ್ಗಳಿಗೆ ಉತ್ತಮ ವೇದಿಕೆ ಕಲ್ಪಿಸುವುದು ಈ ಚಾಂಪಿಯನ್ಶಿಪ್ನ ಪ್ರಮುಖ ಉದ್ದೇಶವಾಗಿದೆ.


ರಾಜ್ಯಮಟ್ಟದ ಸ್ಕೇಟರ್ ಗಳ ಆಯ್ಕೆ
ಅ.17 ರ ಬೆಳಿಗ್ಗೆ ಆರು ಗಂಟೆಗೆ ದೇವಕಾತಿಕೊಪ್ಪದ ಕೈಗಾರಿಕಾ ವಲಯದಲ್ಲಿ ರಾಜ್ಯಮಟ್ಟದ ವೇಗದ ರೋಲರ್ ಸ್ಕೇಟರ್ ಗಳ ಆಯ್ಕೆ ನಡೆಯಲಿದೆ.
ಮರುದಿನದ ಅ 18 ರಂದು ಬೆಳಿಗ್ಗೆ ಎಂಟು ಗಂಟೆಗೆ ಶಿವಮೊಗ್ಗದ ಗೋಪಾಲದಲ್ಲಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸ್ಕೇಟಿಂಗ್ ರಿಂಕ್ನಲ್ಲಿ ರಾಜ್ಯಮಟ್ಟದ ರಿಂಕ್ ರೇಸ್ ಸ್ಕೇಟರ್ ಗಳ ಆಯ್ಕೆ ನಡೆಯಲಿದೆ.
ಜಿಲ್ಲೆಯ ಎಲ್ಲಾ ಶಾಲೆಗಳು ಹಾಗೂ ಸ್ಕೇಟಿಂಗ್ ತರಬೇತಿ ಕೇಂದ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಕೇಟರ್ಗಳು ಭಾಗವಹಿಸಬಹುದಾಗಿದೆ.
ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಸ್ಕೇಟರ್ಗಳನ್ನು ಮುಂದಿನ ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಜಿಲ್ಲಾ ತಂಡಕ್ಕೆ ಆಯ್ಕೆ ಮಾಡಲಾಗುವುದು.
ವೇಗದ ರೋಲರ್ ಸ್ಕೇಟಿಂಗ್ ಕ್ರೀಡೆಯನ್ನು ಉತ್ತೇಜಿಸುವುದು, ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸುವುದು ಹಾಗೂ ಅವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಉತ್ತಮ ಅವಕಾಶ ಕಲ್ಪಿಸುವುದು ಈ ಚಾಂಪಿಯನ್ಶಿಪ್ನ ಪ್ರಮುಖ ಉದ್ದೇಶವಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಕೇಟರ್ಗಳು ಕ್ರೀಡಾ ಸ್ಫೂರ್ತಿ, ಶಿಸ್ತು ಮತ್ತು ತಂಡದ ಮನೋಭಾವದಿಂದ ಸ್ಪರ್ಧಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ವಿವರಗಳಿಗೆ ಹಾಗೂ ಹೆಸರು ನೊಂದಾಯಿಸಲು ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಮೊಬೈಲ್ 99020 53200 ಗೆ ಸಂಪರ್ಕಿಸಹುದು.
