ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯಲ್ಲಿರುವ ದೀಪಕ್ ಸರ್ವಿಸ್ ಸ್ಟೇಷನ್ನಲ್ಲಿ ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳಿಗಾಗಿ ನೂತನವಾಗಿ ಸ್ಥಾಪಿಸಲಾಗಿರುವ ವಿದ್ಯುತ್ ಚಾಲಿತ ಯಂತ್ರಗಳಿಗೆ ಅಗತ್ಯ ಶಕ್ತಿ ನೀಡುವ ಯಂತ್ರ (Electric Vehicle (EV) Charging Station( ವನ್ನು ಇಂದು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಡಿ.ಹೆಚ್. ಶಂಕರಮೂರ್ತಿ ಅವರು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL), ಮಂಗಳೂರು ರೀಟೇಲ್ ರೀಜನಲ್ ಆಫೀಸ್ನ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕರಾದ ಅರುಣ್ ಬನ್ಸಾಲ್ ಅವರು, ಸೀನಿಯರ್ ಸೇಲ್ಸ್ ಆಫೀಸರ್ ನಿತಿನ್, ಸತ್ಯವತಿ ಶಂಕರಮೂರ್ತಿ, ವಿಧಾನ ಪರಿಷತ್ ಶಾಸಕರು ಹಾಗೂ ದೀಪಕ್ ಸರ್ವಿಸ್ ಸ್ಟೇಷನ್ನ ಪಾಲುದಾರರು ಹಾಗೂ ಶಾಸಕರಾದ ಡಿ.ಎಸ್. ಅರುಣ್, ಡಿ.ಎಸ್. ಕಿರಣ್, ಪ್ರತಿಭಾ ಅರುಣ್, ಶಿವಮೊಗ್ಗ ಜಿಲ್ಲಾ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್, ಶಿವಮೊಗ್ಗ ತಾಲೂಕು ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷರಾದ ರಘು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
