ಶಿವಮೊಗ್ಗ; ಜೂನ್ 08:: ಶಿವಮೊಗ್ಗ ನಗರದ ಅಬ್ಬಲಗೆರೆ ಹುಣಸೋಡು ಗ್ರಾಮದ ವಾಸಿ ಶ್ರೀನಿವಾಸ ಇವರು ತಮ್ಮ ಪತ್ನಿ ಕಾವ್ಯರವರಿಗೆ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾಗಿ 2023ರಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿಗಳು ಪ್ರಕರಣದ

ತನಿಖೆ ನಡೆಸಿ 2024ರಲ್ಲಿ 2ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿರುತ್ತಾರೆ. ಸಾಕ್ಷಿ

ವಿಚಾರಣೆ ನಡೆಸಿ ಪರಸ್ಪರ ವಾದವನ್ನು ಆಲಿಸಿದ ನ್ಯಾಯಾಧೀಶರಾದ ಸಿದ್ಧರಾಜು ಎನ್.ಕೆ. ಇವರು ಆರೋಪಿ ಶ್ರೀನಿವಾಸರಿಗೆ ಕಲಂ.: 498(ಎ) ಐಪಿಸಿ ಅಪರಾಧಕ್ಕೆ ಮೂರು ವರ್ಷ ಸಾದಾ ಸಜೆ ಶಿಕ್ಷೆ ಹಾಗೂ ಹತ್ತು ಸಾವಿರ ರೂ.ಗಳ ದಂಡವನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.
ಅಭಿಯೋಜನೆಯ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಿ.ಕೆ. ಕಿರಣ್ಕುಮಾರ್ ವಾದ ಮಂಡಿಸಿದ್ದರು.