ಜೂನ್ 08:: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅನ್ನಭಾಗ್ಯ ಯೋಜನೆಯಡಿ 2026ರ ಮೇ ಮತ್ತು ಜೂನ್ ಮಾಹೆಗಳ ಅನ್ನಭಾಗ್ಯ ಪಡಿತರವನ್ನು ಜೂನ್ 2026ರ ಮಾಹೆಯಲ್ಲಿ ವಿತರಣೆ ಮಾಡಲು ಸರ್ಕಾರವು ಆದೇಶಿಸಿದೆ.

ಅಂತ್ಯೋದಯ ಅನ್ನ ಯೋಜನೆಯಡಿ ಪಡಿತರ ಚೀಟಿಗೆ ಒಂದರಿಂದ ಮೂರು ಜನ ಸದಸ್ಯರಿಗೆ ಹಂಚಿಕೆ ಇರುವುದಿಲ್ಲ. ನಾಲ್ಕು ಸದಸ್ಯರಿಗೆ -10 ಕೆಜಿ, ಐದು ಸದಸ್ಯರಿಗೆ -30 ಕೆಜಿ., ಆರು ಸದಸ್ಯರಿಗೆ -50 ಕೆಜಿ., ಏಳು ಸದಸ್ಯರಿಗೆ -70 ಕೆಜಿ., ಎಂಟು ಸದಸ್ಯರಿಗೆ -90 ಕೆಜಿ., ಒಂಭತ್ತು ಸದಸ್ಯರಿಗೆ -110ಕೆಜಿ ಹಾಗೂ ಹತ್ತು ಸದಸ್ಯರಿಗೆ -130 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ಹಾಗೂ ಆದ್ಯತಾ ಪಡಿತರ ಚೀಟಿಗೆ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಯಂತೆ ಉಚಿತವಾಗಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಪಡಿತರ ಚೀಟಿದಾರರು ಆಹಾರ ಧಾನ್ಯವನ್ನು ಪಡೆಯುವಾಗ ಮೇ ಮತ್ತು ಜೂನ್ ರ ಮಾಹೆಯ ಹಂಚಿಕೆಗಳಿಗೆ ಒಂದು ಬಾರಿ ಕಡ್ಡಾಯವಾಗಿ ಬಯೋ ನೀಡಿ, ಪ್ರತಿ ದಿನ ಬೆಳಗ್ಗೆ 6.00 ರಿಂದ ರಾತ್ರಿ 10.00ರವರೆಗೆ ಪಡಿತರ ವಿತರಣೆಗೆ ಸರ್ವರ್ ಲಭ್ಯಗೊಳಿಸಿರುವುದರಿಂದ ಜೂ. 30 ರೊಳಗಾಗಿ ಪಡಿತರ ಪಡೆಯುವುದು. ಪಡಿತರ ವಿತರಣೆ ಸಂಬAಧ ಯಾವುದೇ ದೂರುಗಳಿದ್ದಲ್ಲಿ ಕೇಂದ್ರ ಸಹಾಯವಾಣಿ 1967 ಕ್ಕೆ ಕರೆ ಮಾಡಿ ಅಥವಾ ಹತ್ತಿರದ ಆಹಾರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದಾಗಿದೆ.