ಶಿವಮೊಗ್ಗ, ಜು.10:
ಇಲ್ಲಿನ ಆರ್.ಎಂ.ಎಲ್. ನಗರದ ಬಳಿಯ ಮೊಬೈಲ್ ಟವರೊಂದರ ಮೇಲೆರಿದಾತ ಕೆಳಗೆ ಬಿದ್ದು ಸಾವು ಕಂಡ ಘಟನೆ ಇಂದು ಮುಂಜಾನೆ ನಡೆದಿದೆ.
ಸುಮಾರು ಇಪ್ಪತೈದು ವರುಷ ವಯಸ್ಸಿನ ಯುವಕನೋರ್ವ ಆರ್ ಎಂ ಎಲ್ ನಗರದ ಎರಡನೇ ಹಂತದ ಟವರ್ ಹತ್ತಿ ಬಿದ್ದದ್ದೇಕೇ…, ಅದೂ ಸದ್ದಿಲ್ಲದ ಬೆಳಗಿನ ಜಾವದ ಸುಮಾರು 3 ರಿಂದ 5 ಗಂಟೆಯೊಳಗೆ ಎಂಬ ಅನುಮಾನ ಕಾಡುತ್ತಿದೆ.
ಟವರ್ ನ ಸುಮಾರು ನೂರು ಅಡಿ ಮೇಲಿಂದ ಕೆಳಗೆ ಬಿದ್ದು ಸಾವುಕಂಡಿದ್ದಾನೆನ್ನಲಾದ ಯುವಕ ಯಾರೆಂದು ಇಲ್ಲಿಯವರೆಗೂ ಗುರುತು ಪರಿಚಯವಾಗಿಲ್ಲ.
- ಅನುಮಾನಗಳು:
- ಕುಡಿದು ಟವರ್ ಹತ್ತಿ ಬಿದ್ದಿರಬಹುದೇ…?
- ಕಳ್ಳತನ ಮಾಡಲು ಹೋಗಿ ಕಾಲು ಜಾರಿ ಅಥವಾ ವಿದ್ಯುತ್ ಅವಘಡಕ್ಕೆ ತುತ್ತಾಗಿರಬಹುದೇ?
- ಟವರ್ ರಿಪೇರಿಗೆ ಹೋಗಿರಬಹುದೆ.
- ಕೊಲೆ ಏನಾದರೂ ನಡೆದಿರಬಹುದೇ..?
ಈ ಅನುಮಾನಗಳ ಮಾತು ಸ್ಥಳೀಯರಿಂದ ಕೇಳಿಬಂದಿದೆ.
ಸ್ಥಳಕ್ಕೆ ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ಶಂಕರಮೂರ್ತಿ ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲಿಸಿದ್ದಾರೆ.