ಶಿವಮೊಗ್ಗ, ಜು.10: ಕೋವಿಡ್ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಕೊರೊನಾ ವಾರಿಯರ್ಸ್ ಗೆ ಸ್ವಂತ ಊರಿನ ಮೂವರು ಉರೆಲ್ಲೆಲ್ಲಾ ಕೊರೊನಾ ಬಂದಿದೆ ಎಂದು ಸುಳ್ಳು ಸುದ್ದಿ ಹರಡಿ ಈಗ ಕೇಸು ಹಾಕಿಸಿಕೊಂಡಿರುವ ಘಟನೆ ವರದಿಯಾಗಿದೆ.
ಭದ್ರಾವತಿ ತಾ. ಹನುಮಂತಾಪುರ ನಿವಾಸಿ ಹಾಗೂ ತಾಲ್ಲೂಕು ನೇತ್ರಾಧಿಕಾರಿ ರುದ್ರೇಶ್ ಅವರ ಬಗ್ಗೆ ಅದೇ ಊರಿನ ಮೂವರು ಸುಳ್ಳು ಸುದ್ದಿ ಹರಡಿದ್ದಾರೆ. ಈ ಮೂವರಲ್ಲಿ ಗ್ರಾಮಪಂಚಾಯಿತಿ ಸದಸ್ಯರೊಬ್ಬರಿರುವುದು ದುರಂತದ ಸಂಗತಿ.
ರುದ್ರೇಶ್ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಕೊರೊನಾ ಬಂದಿದೆ ಎಂದು ಸುಳ್ಳು ಸುದ್ದಿ ಹರಡಿದ್ದರ ಬಗ್ಗೆ ಆಕ್ರೋಶಗೊಂಡ ರುದ್ರೇಶ್ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.
ಡಿಹೆಚ್ ಓ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೊರೊನಾ ಬಂದಿಲ್ಲ. ಅನಗತ್ಯ ಗಾಬರಿ ಬೇಡ ಎಂದಿರುವುದಲ್ಲದೇ ಸುಳ್ಳು ಮಾಹಿತಿ ಹಂಚಿದ ಮೂವರ ವಿರುದ್ದ ಕ್ರಮಕೈಗೊಳ್ಳಲು ಸ್ಥಳೀಯ ಪೊಲೀಸರಿಗೆ ದೂರು ನೀಡುವಂತೆ ಪಿಡಿಓಗೆ ಸೂಚಿಸಿದ್ದಾರೆ.
ಹೊಳೆಹೊನ್ನೂರಿಗೆ ಕಾಲಿಟ್ಟ ಕೊರೊನಾ?
ಇಂದು ಬೆಳಿಗ್ಗೆ ಭದ್ರಾವತಿ ತಾ. ಹೊಳೆಹೊನ್ನೂರು ನಿಜಕ್ಕೂ ಥಂಡಾ ಹೊಡೆದಿದೆ. ಬೆಳಿಗ್ಗೆ ಪೇಟೆ ಬೀದಿಯಲ್ಲಿ ಪೊಲೀಸರು, ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಓರ್ವರಿಗೆ ಕೊರೊನಾ ಬಂದಿದೆ ಎನ್ನಲಾಗಿದ್ದು ಕೋವಿಡ್ ಆಸ್ಪತ್ರೆಗೆ ಕರೆತರುವ ಅಂಬ್ಯುಲೆನ್ಸ್ ಸಿದ್ದವಿತ್ತು.