ಪದೇ ಪದೇ ವೇದಾಂತ ಪಾಠ ಕೇಳು ಅಂದ್ರೆ ಹೆಂಗ್ರೀ..?
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 63
- ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಹೇಳುವುದನ್ನು ಹೇಳುವಷ್ಟು ಬಾರಿ ಹೇಳಿದರೆ ಅದು ಎಲ್ಲರಿಗೂ ಒಳ್ಳೆಯದು. ಹೇಳುವವನಿಗೂ ಅರ್ಥವಾಗುತ್ತದೆ. ಪದೇ ಪದೇ ಹೇಳುವ, ವೇದಾಂತ ಉಪದೇಶ ಮಾಡುವ ಮನೋ ಸ್ಥಿತಿಯವರ ನಡುವೆ ಬಹಳಷ್ಟು ಜನ ತಲೆತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂಬುದೇ ಈ ವಾರದ ನೆಗೆಟಿವ್ ಅಂಕಣದ ವಿಷಯ.

ಹೇಳುವಷ್ಟನ್ನು ಹೇಳುವಾಗ ಹೇಳಿದರೆ ಸಾಕು. ಆದರೆ ಸುಖಾ ಸುಮ್ಮನೆ, ಪದೇ ಪದೇ ಹೇಳುತ್ತಾ ಹೋದರೆ ಹೇಳುವವನಿಗೆ ಅದರ ವಿರುದ್ಧ ಕೆಲಸ ಮಾಡುವ ಅದರ ವಿರುದ್ಧ ವರ್ತಿಸುವ ಮನೋಭಾವ ಹೆಚ್ಚುವುದು ಸಹಜವಲ್ಲವೇ? ಇಂತಹ ಅಸಂಬದ್ಧವಾದ ಪುಗಸಟ್ಟೆಯ ಉಪದೇಶಗಳು ಯಾರಿಗೆ ತಾನೇ ಎಷ್ಟರಮಟ್ಟಿಗೆ ಇಷ್ಟವಾಗುತ್ತವೆ ಹೇಳಿ.
ಹೇಳುವುದಕ್ಕೂ ಒಂದು ಇತಿಮಿತಿಗಳಿರಬೇಕು. ಕೇಳುವವನ ಕಿವಿ ಇದೆ ಎಂದು ಸುಖಾ ಸುಮ್ಮನೆ ಹೇಳುತ್ತಲೇ ಹೋದರೆ ಅವನು ವಿರುದ್ದವಾಗುತ್ತಾನೆ ಇಲ್ಲವೇ, ತಲೆ ಚಚ್ಚಿಕೊಂಡು ಹ ಹುಚ್ಚನಂತಾಗುತ್ತಾನೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?

ಕೇಳುತ್ತಾರೆ ಎಂದು ಅನಿಸಿದಾಕ್ಷಣ ಅದನ್ನೇ ಹೇಳುತ್ತಾ ಹೋದರೆ ಕೇಳುವವನ ಸಹನೆ, ವ್ಯಕ್ತಿತ್ವ ಹೇಳುವವನ ವೇದಾಂತದ ವಿರುದ್ಧ ವರ್ತಿಸುತ್ತದೆ ಎಂಬುದನ್ನು ಹೇಳುವ ಎಲ್ಲರೂ ಅರ್ಥಮಾಡಿಕೊಳ್ಳಬೇಕಲ್ಲವೇ?
ಸುಮ್ಮನೆ ವಟವಟ ಎಂದು, ವೇದಾಂತ ಹೇಳುತ್ತಿದ್ದೇನೆ ಎಂದುಕೊಂಡು ಪುಗಸಟ್ಟೆಯಾಗಿ ಬರೀ ಕಥೆ ಹೇಳುತ್ತಿದ್ದಾರೆ. ಅದನ್ನು ಕೇಳುವವನ ಪರಿಸ್ಥಿತಿ ಏನಾಗಬೇಕು ಹೇಳುವವನಿಗೂ ಒಂದು ಮನಸ್ಸಿದೆ. ಆತನಿಗೂ ಒಂದು ವ್ಯಕ್ತಿತ್ವವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಅದು ಹೇಳುವವರ ಮನದಲ್ಲಿ ಮೂಡಬೇಕು. ಹೇಳಿದ್ದನ್ನೇ ಹೇಳೋ ಕಿಸ್ವೈದಾಸ ಎಂಬಂತೆ ಅದೇ ವೇದಾಂತದಲ್ಲಿ ತಮ್ಮ ಜೀವನದ ಒಂದು ಪಾಠದಂತೆ ಹೇಳುತ್ತಲೇ ಹೋದರೆ ಹೇಳುವವರ ಕರ್ಮ ಕಥೆ ಏನಾಗಬೇಕು.

ಹಾಗಾಗಿಯೇ ಪರಸ್ಪರ ಹೊಂದಾಣಿಕೆಯ ಮನೋಧರ್ಮ ಬೆಳೆಯಬೇಕೆಂದರೆ ಮಾತು ಕಡಿಮೆಯಾಗಬೇಕು. ವೇದಾಂತದ ಉಪದೇಶಗಳು ಮಿತಿಯಾಗಿರಬೇಕು. ತೀರಾ ಹಾಳಾಗಿ ಹೋದಾಗ, ಅದಕ್ಕೆ ಹೇಳುವವನ ಪುಗಸಟ್ಟೆಯಾದ ವೇದಾಂತಗಳೇ ಕಾರಣವಾಗಬಹುದಲ್ಲವೇ? ಈ ಸಮಾಜದ ಒಂದು ಮುಖವಾಣಿಗಳಲ್ಲಿ ನಾವು ಇಂತಹ ಕುಟುಂಬಗಳನ್ನು ಅವಲೋಕಿಸುತ್ತೇವೆ.
ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕ ಮಕ್ಕಳಿಗೆ ಹೇಳುವಷ್ಟನ್ನ ಹೇಳಬೇಕು. ಆದರೆ ವೇದಾಂತ ಹೇಳುವುದೇ ಕೆಲಸವಾಗಬಾರದು, ಅದರ ಜೊತೆ ಕಲಿಕೆ, ಪಠ್ಯೇತರ ಚಟುವಟಿಕೆಗಳು ಹೆಚ್ಚಾಗಬೇಕು ಅಲ್ಲವೇ?
ಒಟ್ಟಾರೆ ಹೇಳುವವನು ಕೇಳುವವನ ಮನೋ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಆತನಿಗೆ ಒಂದು ಮಿತಿ ಎಂಬುದು ಇರಬೇಕು ಅಲ್ಲವೇ?