ಟೈಯರ್-2 ನಗರಗಳ ಸಣ್ಣ ಮಾರುಕಟ್ಟೆಗಳಲ್ಲೂ ಎಕ್ಸ್ ಕ್ಲೂಸಿವ್ ಧಿರಿಸುಗಳು, ಅಲಂಕಾರಿಕ ವಸ್ತುಗಳು ಸಿಗುತ್ತಿರುವುದು ಹೆಮ್ಮೆಯ ವಿಷಯ ಎಂದು ತೇಜಸ್ವಿನಿ ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗದ ಜುವೆಲ್ ರಾಕ್ ಹೊಟೆಲ್ ಸಭಾಂಗಣದಲ್ಲಿ 2 ದಿನಗಳ ಕಾಲ ಆಯೋಜಿಸಲಾಗಿರುವ ಅರ್ಬನ್ ಇಂಡಿಯಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ಪ್ರತಿನಿತ್ಯದ ಜೀವನಶೈಲಿಗೆ ಅಗತ್ಯ ಅಲಂಕಾರಿಕ ವಸ್ತುಗಳು ಮತ್ತು ಸೀರೆ, ಧಿರಿಸುಗಳು ಇಲ್ಲಿ ಅಪರೂಪದ್ದಾಗಿವೆ ಎಂದು ಬಣ್ಣಿಸಿದರು. ಇದು ಮೆಟ್ರೋ ನಗರಗಳಲ್ಲಿ ಮಾತ್ರ ಲಭ್ಯವಿರುವ ವಿಶೇಷ ಉತ್ಪನ್ನಗಳ ನಡುವಿನ ಅಂತರವನ್ನು ಶಿವಮೊಗ್ಗದಲ್ಲಿ ಪ್ರದರ್ಶನ ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಇಂತಹ ಪ್ರದರ್ಶನಗಳು ಕೇವಲ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಮಾತ್ರ ಕಾಣಲು ಸಾಧ್ಯವಿದೆ. ಮಹಿಳೆಯರಿಗೆ ಅಗತ್ಯವಾದ ಎಲ್ಲಾ ಉತ್ಪನ್ನಗಳು ಇಲ್ಲಿ ಲಭ್ಯವಿರುವ ಪ್ರದರ್ಶನ ಉದ್ಘಾಟಿಸಿರುವುದು ನನಗೆ ಸಂತಸ ತಂದಿದೆ ಎಂದರು. ಇಲ್ಲಿ ದೇಶದ ಪ್ರಸಿದ್ಧ ಮಾರಾಟಗಾರರು ಮತ್ತು ವಿನ್ಯಾಸಕರನ್ನು ಒಟ್ಟುಗೂಡಿಸುವಂತಹ ಪ್ರದರ್ಶನವಾಗಿದ್ದು, ಕೇವಲ ಪ್ರದರ್ಶನಕ್ಕಿಂತ ಹೆಚ್ಚಾಗಿ, ಅರ್ಬನ್ ಇಂಡಿಯಾ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ, ಸ್ಥಳೀಯ ಕುಶಲಕರ್ಮಿಗಳನ್ನು ಉತ್ತೇಜಿಸುವ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪುನರುಜ್ಜೀವನಗೊಳಿಸುವ ಒಂದು ಆಂದೋಲನವಾಗಿದೆ ಎಂದರು.

ಈ ವೇಳೆ ಅರ್ಬನ್ ಇಂಡಿಯಾ ಸಂಸ್ಥಾಪಕಿ ನಿರಂಜನಿ ರವೀಂದ್ರ, ಶ್ರಾವಣ ಸುಭಾಷ್, ನಯನ ಸೇರಿದಂತೆ ಹಲವರು ಉಪಸ್ಥಿತರಿದ್ದರು.