ಶಿವಮೊಗ್ಗ: ಪ್ರತಿಯೊಬ್ಬರು ಮೊಬೈಲ್ನಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದು, ಮೊಬೈಲ್ ವ್ಯಸನದಿಂದ ಮಾನವೀಯ ಸಂಬಂಧಗಳು ದೂರವಾಗುತ್ತಿವೆ ಎಂದು ಡಿವೈಎಸ್ಪಿ ಸಂಜೀವ್ಕುಮಾರ್ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕುಟುಂಬ ಮಿಲನ ಸಭೆಯಲ್ಲಿ ಕಾರ್ಯಕ್ರಮದಲ್ಲಿ ಸೈಬರ್ ಕ್ರೈಂ ಹಾಗೂ ರಸ್ತೆ ಸುರಕ್ಷತೆ ಜಾಗೃತಿ ಬಗ್ಗೆ ಮಾತನಾಡಿ, ಯುವಜನತೆ ಗಾಂಜಾ ಹಾಗೂ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಸಂಸ್ಕಾರದ ಕೊರತೆ ಎದ್ದು ಕಾಣಿಸುತ್ತಿದೆ. ಎಂದು ತಿಳಿಸಿದರು.

ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಗೌರವ ಕಡಿಮೆಯಾಗುತ್ತಿದೆ. ಪಾಶ್ಚಾತ್ಯ ಶೈಲಿಯ ಅತಿ ಅನುಕರಣೆ ನಿಮ್ಮ ಸಂಸ್ಕೃತಿಯನ್ನು ನಾಶಗೊಳಿಸುತ್ತಿದೆ. ರೋಟರಿ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವುದರ ಮುಖಾಂತರ ಮಾನವೀಯ ಸೇವೆ ಹಾಗೂ ಭಾರತೀಯ ಸಂಸ್ಕೃತಿಗೆ ಮರಳಬೇಕು ಎಂದು ಹೇಳಿದರು.

ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಚಾಲನಾ ಪರವಾನಿಗೆ ಪಡೆದು ವಾಹನ ಚಲಾಯಿಸಬೇಕು. ಅತಿ ವೇಗ ಹಾಗೂ ಮದ್ಯಪಾನ ಸೇವಿಸಿ ವಾಹನ ಚಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.
ವಿದ್ಯಾವಂತರು ಸೈಬರ್ ಕ್ರೈಂಗೆ ಆಕರ್ಷಿತರಾಗದೆ ಅತ್ಯಂತ ಜಾಗರೂಕತೆಯಿಂದ ಇರಬೇಕು. ಈಗಾಗಲೇ ಸಾಕಷ್ಟು ಅಪರಾಧಗಳು ಸೈಬರ್ ಕ್ರೈಂನಿಂದ ನಡೆದಿದ್ದು, ಪ್ರತಿನಿತ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿವೆ. ಮೋಸ ಹೋಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ನೆಪ್ಚೂನ್ ಕಿಶೋರ್ ಮಾತನಾಡಿ, ಸ್ನೇಹ, ಸೇವೆ, ಪ್ರೀತಿಯಿಂದ ರೋಟರಿ ಸಂಸ್ಥೆ ಪ್ರಪಂಚಾದ್ಯಂತ. ತನ್ನದೇ ಆದ ಛಾಪು ಮೂಡಿಸಿದೆ. ರೋಟರಿ ಸಂಸ್ಥೆಗೆ ಹೆಚ್ಚು ಹೆಚ್ಚು ಸದಸ್ಯರು ಸೇರುವುದರ ಮುಖಾಂತರ ಸಂಸ್ಥೆಯನ್ನು ಬಲಗೊಳಿಸೋಣ. ಇದರಿಂದ ಹೆಚ್ಚು ಸೇವಾ ಕಾರ್ಯಗಳನ್ನು ಮಾಡಲು ಸಾಕಾರವಾಗುತ್ತದೆ ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಧನಂಜಯ್ ರಾಂಪುರ, ಡಾ. ಗುಡದಪ್ಪ ಕಸಬಿ, ಡಾ. ರವಿಕಿರಣ್, ಶ್ರೀಕಾಂತ್, ಪ್ರೊ. ಜಗದೀಶ್, ಎಂ.ಪಿ.ನಾಗರಾಜ್, ಎ.ಒ.ಮಹೇಶ್, ಡಾ. ಅವಿನಾಶ್, ಅರುಣ್ ದೀಕ್ಷಿತ್, ಆರ್.ಮನೋಹರ್, ರಘುರಾಜ್, ಆದಿಮೂರ್ತಿ, ಸತೀಶ್ ಚಂದ್ರ, ಇನ್ನರ್ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಎಂ.ಎಲ್.ಪ್ರತಾಪ್, ಆರ್.ಆರ್.ದಿಲೀಪ್, ಕಾಸಲಾ ಸುರೇಂದ್ರ, ಸಂಜೀವ್ ಶೆಟ್ಟಿ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.