ಶಿವಮೊಗ್ಗ,ಜು.11 : ತಾಲ್ಲೂಕಿನ ಹೊಳಲೂರು ಹೋಬಳಿ ಸುತ್ತಮುತ್ತ ಅದರಲ್ಲೂ ಹಾಡೋನಹಳ್ಳಿ ಬಳಿಯ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದ ಒಂದು ಕರಡಿಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಈ ಹಿಂದೆ ತಾಲ್ಲೂಕಿನ ಹಾಡೋನಹಳ್ಳಿ ಹಾಗೂ ಹೊಳಲೂರು ಸಮೀಪದಲ್ಲಿ ಅರಣ್ಯ ಇಲಾಖೆ ಕರಡಿಗಳನ್ನು ಹಿಡಿಯಲು ಕರಡಿಗಳು ಓಡಾಡುವ ಜಾಗಗಳನ್ನು ಗುರುತಿಸಿ ಬೋನ್ಗಳನ್ನು ಇರಿಸುವ ಕೆಲಸ ಮಾಡಿದ್ದರು.
ಕಾಡಿನಿಂದ ನಾಡಿಗೆ ಬಂದಿರುವ ಕರಡಿಗಳನ್ನು ಹಿಡಿಯಲು ಸೂಕ್ತ ವ್ಯವಸ್ಥೆಯನ್ನು ಮಾಡಿದ್ದರೂ ಜನರ ಆತಂಕ ದೂರವಾಗಿರಲಿಲ್ಲ. ಜನ ಹೊರಬರದೆ ಕರಡಿಗಳನ್ನು ಹಿಡಿಯುವಿಕೆಗೆ ಸಹಕರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಬೋನಿಗೆ ಬಿದ್ದ ಕರಡಿಯನ್ನು ಶಿವಮೊಗ್ಗದ ಲಯನ್ ಸಫಾರಿಗೆ ತೆಗೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಿ ಸಂರಕ್ಷಣೆ ಮಾಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹೊಳಲೂರು ಗ್ರಾಮದ ಮುಖಂಡರು ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೋರಿದರು.

ಆಪರೇಷನ್ ಕಾರ್ಯಚರಣೆ ವೇಳೆ ಶಂಕರ ವಲಯದ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ್ ಜೆ, ಡಿವೈಆರ್ ಎಫ್ ಒ ವಸಂತ್ ಕುಮಾರ್, ಬೀಟ್ ಪಾರೆಸ್ಟರ್ ಕೊಟ್ರೇಶ್ ದಾನಮ್ಮನವರ್ , ಸೇರಿದಂತೆ ಹಲವರು ಭಾಗಿಯಾಗಿದ್ದರು.