ಶಿವಮೊಗ್ಗ,ಜು.11:
ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗೆಂದು ಬರುವ ಇಲ್ಲಿನ ಮೆಗ್ಗಾನ್ ಆಸ್ಪತ್ರೆಗೆ ಇಲ್ಲಿನ ವ್ಯವಸ್ಥೆಯ ಬಗ್ಗೆ ಔಷಧಿ ಕೇಂದ್ರದ ಸಿಬ್ಬಂಧಿಗಳ ಕೊರತೆ ಹಾಗೂ ರೋಗಿಗಳು ಔಷಧಿಗಾಗಿ ಪರದಾಡುತ್ತಿರುವ ವ್ಯವಸ್ಥೆಯ ಬಗ್ಗೆ ಇಲ್ಲಿನ ಅಧಿಕಾರಿಗಳಿಗೆ ಗಮನಕ್ಕೆ ಬಂದಿಲ್ಲವೇ? ಬಂದರೂ ಕೂಡ ಮೌನವಹಿಸಿದ್ದಾರಾ ಎಂಬುದು ಸಾರ್ವಜನಿಕರು, ರೋಗಿಗಳು, ಸಿಬ್ಬಂಧಿಗಳ ಗಂಭೀರ ಪ್ರಶ್ನೆ.

ಔಷಧಿ ಕೇಂದ್ರಗಳನ್ನು ಇನ್ನು ಹೆಚ್ಚಿಸುವ ಕುರಿತ ಅಧಿಕಾರಿಗಳ ಮನವಿಗೆ ಮೆಗ್ಗಾನ್ ನ ಡೀನ್ ಅದಂತಹ ವಿರೂಪಾಕ್ಷಪ್ಪರವರು ಮೌನವಾಗಿದ್ದು ಯಾಕೆ ? ಇಲ್ಲಿನ ವ್ಯವಸ್ಥೆಯ ಬಗ್ಗೆ ಅವರಿಗೆ ಸರಿಯಾಗಿ ಗೊತ್ತಿಲ್ಲವೇ ?
ಅನ್ ಲೈನ್ ಔಷಧಿ ವಿತರಣೆ ವ್ಯವಸ್ಥೆ ಜಾರಿಯಿಂದ ರೋಗಿಗಳು ಸೇರಿದಂತೆ ಔಷಧಿ ಸಿಬ್ಬಂದಿಗಳಿಗೆ ಸಾಕಷ್ಟು ಕಿರಿಕಿರಿ ಉಂಟಾಗಿದೆ ಎಂದು ಇಲ್ಲಿನ ರೋಗಿಗಳು ಹಾಗೂ ಸಿಬ್ಬಂದಿಗಳು ತಿಳಿಸಿದ್ದಾರೆ.

ಇಲ್ಲಿ ಪ್ರತಿನಿತ್ಯ ಅಸ್ಪತ್ರೆಯ ಸರಿಸುಮಾರು ಸಾವಿರಕ್ಕಿಂತ ಹೆಚ್ಚು ರೋಗಿಗಳು ಔಷಧಿಗೆಂದು ಔಷಧಿಕೇಂದ್ರದ ಮುಂದೆ ಸಾಲಾಗಿ ನಿಂತು ಔಷಧಿಗೆಂದು ನಿಲ್ಲುತ್ತಾರೆ ಅದರೇ ಇಲ್ಲಿ ಔಷಧಿ ಕೇಂದ್ರದಲ್ಲಿ ಸಿಬ್ಬಂಧಿಗಳ ಕೊರತೆ ಸಾಕಷ್ಟು ಕಡಿಮೆ ಇದೆ ಎಂಬುದು ರೋಗಿಗಳ ಅರೋಪ
ಕನಿಷ್ಟ ಪಕ್ಷ ಅಸ್ಪತ್ರೆಯ ಇಡೀ ವ್ಯವಸ್ಥೆಯ ಜವಾಬ್ದಾರಿ ಹೊತ್ತ ಅಧಿಕಾರಿಗಳು

ರೋಗಿಗಳಿಗೆ ಔಷಧಿ ವಿತರಣೆ ಮಾಡುವ ಕೇಂದ್ರವನ್ನು ತೆರೆದು ಇಲ್ಲಿ ಸಿಬ್ಬಂದಿಗಳನ್ನು ನೇಮಿಸದೇ ಸರಿಯಾದ ವ್ಯವಸ್ಥೆಯನ್ನು ಸಹ ಮಾಡದೇ ಮುಚ್ಚಿರುವುದು
ಇಲ್ಲಿನ ಸಮಸ್ಯೆಯ ಬಗ್ಗೆ ಅರಿತು ಅದಕ್ಕೆ ಪರಿಹಾರ ಹುಡುಕಬಹುದಲ್ಲವೇ ?
ನಿನ್ನೆ ಮೂರು ಮೂವತ್ತರ ಸರಿ ಸುಮಾರಿಗೆ ಓರ್ವ ಮಹಿಳೆ ಔಷಧಿಗೆಂದು ಸಾಕಷ್ಟು ಸಮಯದವರಿಗೆ ಸಾಲಿನಲ್ಲಿ ನಿಂತು ತಲೆ ತಿರುಗಿಬಿದ್ದಿರುವ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಘಟನೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ?
ಬಂದರೂ ಸಹ ಮೌನವಾಗಿದ್ದಾರಾ ?
ಪ್ರತಿನಿತ್ಯವೂ ಅನೇಕ ಖಾಯಿಲೆಗಳು ಇರುವ ಸಾಕಷ್ಟು ರೋಗಿಗಳು ಔಷಧಿ ಕೇಂದ್ರದ ಮುಂದೆ ನಿಲ್ಲುತ್ತಾರೆ ಅನ್ ಲೈನ್ ವ್ಯವಸ್ಥೆಯಿಂದ ಸರಿಯಾದ ಸಮಯಕ್ಕೆ ಔಷಧಿಗಳು ಕೂಡ ಸಿಗುತ್ತಿಲ್ಲ ಅರೋಗ್ಯದ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ ಎಂಬುದು ಇಲ್ಲಿನ ರೋಗಿಗಳು ಅಳಲು ತೋಡಿಕೊಂಡಿದ್ದಾರೆ

ಔಷಧಿಗೆ ಅನ್ ಲೈನ್ ವ್ಯವಸ್ಥೆ ಜಾರಿಯಾದರೂ ಅದಕ್ಕೆ ತಕ್ಕಂತೆ ಸರಿಯಾದ ವ್ಯವಸ್ಥೆಯನ್ನು ಜಾರಿಗೆ ತನ್ನಿ ರೋಗಿಗಳಿಗೆ ಉತ್ತಮ ಸೇವೆ ಒದಗಿಸಿ ಹಾಗೂ ಔಷಧಿ ಕೇಂದ್ರದ ಸಿಬ್ಬಂಧಿಗಳು ಸೇರಿದಂತೆ ಔಷಧಿ ಕೇಂದ್ರಗಳನ್ನು ಹೆಚ್ಚಿಸಿ ಎಂಬುದು ರೋಗಿಗಳ ಸಾರ್ವಜನಿಕರು ಮೆಗ್ಗಾನ್ ಅಧಿಕಾರಿಗಳಿಗೆ ಅಗ್ರಹಿಸಿದ್ದಾರೆ.