






ಅಮಾಯಕ ಹುಡ್ಗಿ ಅಂಕಪಟ್ಟಿಗಳ ಸುಟ್ಟರೂ ಸೈಲೆಂಟಾಗಿ ಎಸ್ಕೇಪಾದ ಸೂರ!
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 53
- ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಸಮಾಜದ ಎಲ್ಲ ಸ್ಥರಗಳಲ್ಲಿ ನಾವು ಕೆಲವರ ವ್ಯಕ್ತಿತ್ವವನ್ನು ಅತ್ಯಂತ ಅಮೂಲಾಗ್ರವಾಗಿ ಪರಿಶೀಲಿಸುವ ಅಗತ್ಯವಿದೆ. ಕೆಲವರಿಗೆ ಕದಿಯುವ ಚಟವಿರುತ್ತದೆ. ಕಳ್ಳತನದ ಬದುಕು ಅವರದಾಗಿರುತ್ತದೆ. ಮತ್ತೆ ಕೆಲವರಿಗೆ ತೀರಾ ಹೊಲಸಾಗಿ ಇನ್ನೊಬ್ಬರ ಬಗ್ಗೆ ಮಾತನಾಡುವ ಅನಿವಾರ್ಯತೆ ಇರುತ್ತದೆಯೇನೋ ಎಂಬಂತೆ ಮಾತನಾಡುತ್ತಾರೆ. ಅದೇ ಬಗೆಯಲ್ಲಿ ಅನ್ಯ ಸಂಬಂಧ ಬೆಳೆಸುವ ಕಿರಾತಕ ಮನಸಿನ ವ್ಯಕ್ತಿಗಳನ್ನು ನಾವು ಕಾಣುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ನಾವು ಉಳಿಸಿಕೊಳ್ಳಬೇಕು. ಕೆಲವೆಡೆ ಹತೋಟಿ ಇರಬೇಕು ಎಂಬುದನ್ನೇ ತಿಳಿಸುವ ಈ ವಾರದ ಅಂಕಣ ಕೈ ಬಾಯಿ ಕಚ್ಚೆ ಸರಿ ಇಲ್ಲದ ಮೋಸಗಾರ ಮನಸ್ಸಿನ ಚಿತ್ರಣ ಹಾಗೂ ಅದಕ್ಕೆ ತಿಲಾಂಜಲಿ ಇಡುವ ಯೋಚನೆಯನ್ನು ನೀಡುವುದಾಗಿದೆ.

ಸರ್ವಜ್ಞರ “ಕಚ್ಚೆ ಕೈ ಬಾಯಿಗಳು ಇಚ್ಛೆಯಲ್ಲಿ ಇದ್ದಿಹರೆ, ಅಚ್ಯುತನಪ್ಪ ಅಜನಪ್ಪ ಲೋಕದಲಿ ನಿಶ್ಚಿಂತನಪ್ಪ” ಎಂಬ ವಚನವು, ಮನುಷ್ಯನು ತನ್ನ ಬಟ್ಟೆ (ಕಚ್ಚೆ), ಕೈ ಮತ್ತು ಬಾಯಿಯನ್ನು ಹತೋಟಿಯಲ್ಲಿಟ್ಟುಕೊಂಡರೆ ವಿಷ್ಣು ಮತ್ತು ಬ್ರಹ್ಮನಂತೆ ಜಗತ್ತಿನಲ್ಲಿ ಚಿಂತೆಯಿಲ್ಲದೆ ಬದುಕಬಹುದು ಎಂದು ಹೇಳುತ್ತದೆ.
“ಕಚ್ಚೆ ಕೈ ಬಾಯಿಗಳು ಇಚ್ಛೆಯಲ್ಲಿ ಇದ್ದಿಹರೆ,
ಅಚ್ಯುತನಪ್ಪ ಅಜನಪ್ಪ ಲೋಕದಲಿ ನಿಶ್ಚಿಂತನಪ್ಪ”
ಎಂಬುದು ಈ ವಚನದ ಸಾಲುಗಳು.
ಇದರ ಅರ್ಥ ಹೀಗಿದೆ:
ಕಚ್ಚೆ ಕೈ ಬಾಯಿಗಳು:
ಬಟ್ಟೆ, ಕೈ ಮತ್ತು ಬಾಯಿ, ಇವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು.
ಇಚ್ಛೆಯಲ್ಲಿ ಇದ್ದಿಹರೆ:
ಇವುಗಳನ್ನು ಇಚ್ಛೆಯಂತೆ ಅಂದರೆ ಸರಿಯಾದ ರೀತಿಯಲ್ಲಿ ಬಳಸಿದರೆ.
ಅಚ್ಯುತನಪ್ಪ ಅಜನಪ್ಪ:
ವಿಷ್ಣು ಮತ್ತು ಬ್ರಹ್ಮ, ಅಂದರೆ ದೇವರುಗಳಂತೆ.
ಲೋಕದಲಿ ನಿಶ್ಚಿಂತನಪ್ಪ:
ಜಗತ್ತಿನಲ್ಲಿ ಚಿಂತೆ ಇಲ್ಲದೆ ಸುಖವಾಗಿರಬಹುದು.
ಸಂಕ್ಷಿಪ್ತವಾಗಿ, ಈ ವಚನವು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದರ ಮಹತ್ವವನ್ನು ಹೇಳುತ್ತದೆ.


ನಮ್ಮ ನಮ್ಮ ಬದುಕಿನ ಶೈಲಿ ಹಾಗೂ ಆಸೆಯ ಕುಲಗೆಟ್ಟ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಕುರಿತು ಸರ್ವಜ್ಞರ ಈ ವಚನ ನಿಜಕ್ಕೂ ಅರ್ಥಗರ್ಭಿತವಾಗಿದೆ.
ಸಮಾಜದ ಎಲ್ಲ ಕಡೆ ಅತ್ಯಂತ ಗೌರವಾನ್ವಿತ ಸಜ್ಜನ, ಸಂಪನ್ನ ಎಂದು ಮುಖ ತೋರಿಸುತ್ತಾ,, ಮನದೊಳಗೆ ನಾನಾ ಅಡ್ಡಕಸುಬುಗಳನ್ನು ಸೃಷ್ಟಿಸಿಕೊಂಡವನು ಹೇಗೆ ತಾನೇ ಈ ಸಮಾಜದ ಮುಖವಾಣಿಯಾಗಿ ಬದುಕುತ್ತಾನೆ. ಅವನು ನಿಜವಾಗಿಯೂ ಸಮಾಜಕ್ಕೆ ಕಂಟಕವೇ ಹೌದು ಅಲ್ಲವೇ?
ಕೈ ಬಾಯಿ ಕಚ್ಚೆ ಎಂಬ ವಿಚಾರ ಕೇವಲ ಕೆಲ ಗಂಡು ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಕೆಲಹೆಣ್ಣು ಮಕ್ಕಳು ಸಹ ಇದರಲ್ಲಿ ತಮ್ಮದೇ ಪಾರುಪತ್ಯ ಸಾಧಿಸುವಲ್ಲಿ, ಸಾಧಿಸಿರುವುದನ್ನು ನಾವು ಗಮನಿಸಿದ್ದೇವೆ, ನೋಡುತ್ತಿದ್ದೇವೆ. ಕೆಲವೇ ಕೆಲವು ಮನಸ್ಸುಗಳು ಮಾಡುವ ಇಂತಹ ನಿಕೃಷ್ಟ ಮನೋಭಾವ ಇಡೀ ವ್ಯವಸ್ಥೆಯನ್ನು ಹಾಗೂ ಎಲ್ಲರನ್ನೂ ನಾನಾ ಬಗೆಯ ಅನುಮಾನದಿಂದ ನೋಡಿ ಬಿಡುವಂತೆ ಮಾಡುತ್ತದೆ.
ಕ್ಷಣಮಾತ್ರದ ತಪ್ಪು ಎಂಬುದು ಆಯಾ ಕ್ಷಣದಲ್ಲಿ ಮಾತ್ರ ಇರಬೇಕು. ಅದೇ ನಿರಂತರವಾದರೆ ಅದೇ ಕಸುಬಾದರೆ ಅದು ಹೇಗೆ ತಾನೇ ಆತ ಸಮಾಜದ ಒಬ್ಬನಾಗಿ ಗುರುತಿಸಿಕೊಳ್ಳಬಲ್ಲ. ನಾವು ಎಷ್ಟೋ ಜನರನ್ನು ನೋಡಿದ್ದೇವೆ. ಬಹಳ ಒಳ್ಳೆಯವರು ಎಂದು ಮುಖವಾಣಿ ತೋರಿಸಿ ಎಲ್ಲರನ್ನು ನಂಬಿಸಿ ಕೊನೆ ಕೊನೆಯ ಹಂತದಲ್ಲಿ ಕ್ಯಾಕರಿಸಿ ಉಳಿಸಿಕೊಂಡ ನಿದರ್ಶನಗಳನ್ನು ಕಣ್ಣಾರೆ ಕಂಡಿದ್ದೇವೆ ಅಲ್ಲವೇ?
ಇಲ್ಲಿ ತಪ್ಪು ಯಾರದು ಎಂಬುದು ಮುಖ್ಯ. ಅದರ ಹುಡುಕಾಟದ ನಡುವೆ ತಪ್ಪಿತಸ್ಥನಿಗೆ ಶಿಕ್ಷೆಯಾಗದಿದ್ದರೂ ಅಮಾಯಕನಿಗೆ ಹಾಗೂ ತಪ್ಪು ಮಾಡದವನಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತಿರಬೇಕು. ಅಂತಹ ನಿಟ್ಟಿನಲ್ಲಿ ಸಮಾಜದ ಮುಖ್ಯವಾಣಿ ದ್ವನಿಯಾಗಬೇಕು, ಶಕ್ತಿಯಾಗಬೇಕು. ಆಗ ತಾನೇ ಕೆಲವೇ ಕೆಲವು ವಿಕೃತ ಮನಸ್ಥಿತಿಗಳಿಗೆ ಕಡಿವಾಣ ಬೀಳಲು ಸಾಧ್ಯ ಎಂಬುದು ಈ ಅಂಕಣದ ಉದ್ದೇಶ.

ಕೈ ಕೊಟ್ಟು ಎಸ್ಕೇಪ್!
ನಿನ್ನನ್ನೇ ಪ್ರೀತಿಸುತ್ತೇನೆ ನೀನೇ ನನ್ನ ಜೀವ, ನಿನಗಾಗಿ ನಾನು ಪ್ರಾಣವನ್ನು ಕೊಡುತ್ತೇನೆ. ನೀನಿಲ್ಲದೆ ನಾನು ಇಲ್ಲ, ನೀನೇ ನನ್ನ ಆಸ್ತಿ, ನೀನೇ ನನ್ನ ಉಸಿರು ಎಂದು ಬೊಂಬಾಡ ಬಿಡುತ್ತಾ, ಕೊನೆ ಹಂತದಲ್ಲಿ ತಮ್ಮ ತಮ್ಮ ಕರ್ತವ್ಯ ಮುಗಿಸಿಕೊಂಡು ಟಾಟ ಹೇಳುವ ಕೆಲ ಕಿರಾತಕ ಮನಸುಗಳು ನಮ್ಮ ನಡುವಿನ ಅತಿ ದೊಡ್ಡ ದುರಂತ.
ಅಂಕಣದ ಓದುಗರೊಬ್ಬರು ಹೇಳಿದ ಮಾಹಿತಿಯಂತೆ ಇನ್ನೊಬ್ಬ ಸೈಲೆಂಟ್ ಕಿಲ್ಲರ್ ಕಥೆ ಚಿತ್ರ-ವಿಚಿತ್ರವಾಗಿದೆ. ಆತನನ್ನು ಪ್ರೀತಿಸಿದವಳು, ನೀನಿಲ್ಲದೆ ನಾನು ಬದುಕಲಾರೆ ಎಂದು ಹಠ ಹಿಡಿದಾಗ ಮಾತು ಕೇಳದ ಅದೇ ನಾಟಕದ ಮಾತ್ನಾಡ್ತಾ ದಿನದೊಡುತ್ತಿದ್ದವ ತನ್ನ ಕೆಲಸ ಮುಗಿಸುತ್ತಿದ್ದ ವ್ಯಕ್ತಿ ಎದುರೇ ತಾನು ಕಲಿತ ಎಲ್ಲಾ ಶಾಲಾ-ಕಾಲೇಜುಗಳ ಅಂಕಪಟ್ಟಿ ಹಾಗೂ ಇತರ ಅಸಲಿ ದಾಖಲೆಗಳನ್ನು ಸುಟ್ಟು ಹಾಕಿದರೂ ನನಗದು ಸಂಬಂಧವಿಲ್ಲಂತೆ ಸೈಲೆಂಟಾಗಿ ಎಸ್ಕೇಪಾದನಂತೆ. (ಇಡೀ ನೆಗೆಟಿವ್ ಥಿಂಕಿಂಗ್ ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ಅಷ್ಟೊಂದು ಗಂಭೀರವಾಗಿ ಬರೆದಿಲ್ಲ, ಪರಿಗಣಿಸಿಲ್ಲ) ಸಮಾಜದ ಮುಖವಾಣಿಗಳನ್ನು ಪರಿಚಯಿಸುವ ಅವರೊಳಗಿನ ವಿಕೃತತೆಯನ್ನು ಬಿಂಬಿಸುವ ಕಾರ್ಯ ಮಾಡುತ್ತದೆ. ಆದರೆ ನೈಜವಾಗಿ ನಮ್ಮ ಮಗ್ಗುಲ್ಲಲ್ಲೇ ನಡೆದ ಘಟನೆಯನ್ನು ಓದುಗರು ಹೇಳಿದ ಹಿನ್ನೆಲೆಯಲ್ಲಿ ಈ 4 ಸಾಲುಗಳು ನಿಮ್ಮ ಮುಂದೆ ಅಷ್ಟೇ.

ಒಟ್ಟಾರೆ ಸಮಾಜದ ಒಳಗೆ ಇರುವ ಇಂತಹ ಮೋಸಗಾರ ಮನಸ್ಸಿನ ನೆಗೆಟಿವ್ ಮನಸ್ಥಿತಿಗಳಿಗೆ ಕಡಿವಾಣ ಹಾಕುವ ಜೊತೆ ಅನಿವಾರ್ಯವಾಗಿ ಚಾಡಿಸುವ ಇಲ್ಲವೇ ದೂರ ಇಡುವ ಕಾರ್ಯ ಮಾಡುವುದು ಒಳಿತಲ್ಲವೇ?
ನೆಗಿಟೀವ್ ಅಂಕಣ ಯಾರನ್ನೂ ಪರಸನಲ್ಲಾಗಿ ಯೋಚಿಸಿ, ದ್ವೇಶಕ್ಕಾಗಿ ಬರೆದಿಲ್ಲ. ಇದರ ಪಾತ್ರದಾರಿ ನೀವೇ ಅಂದ್ಕೊಂಡ್ರೆ ನಾವು ಜವಾಬ್ಧಾರರಲ್ಲ.. -ಸಂ