ಶಿವಮೊಗ್ಗ, ಜೂ.30:
ಶಿವಮೊಗ್ಗ ಮಲ್ಲಿಗೆನಹಳ್ಳಿ ಏರಿಯಾದ ವ್ಯಾಪ್ತಿಯಲ್ಲಿ ರೂಪಿತಗೊಂಡ ಇಂದಿರಾ ಬಡಾವಣೆ ನಾನಾ ಅವಾಂತರಗಳ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ಇಲ್ಲಿರುವ ಮೂರು ಪಾರ್ಕ್ ಗಳು ಕಾಣೆಯಾಗಿದೆ ಎಂದು ಸಾರ್ವಜನಿಕರು ಕಂಪ್ಲೇಂಟ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ನಾಲ್ಕೈದು ವರ್ಷಗಳ ಹಿಂದೆ ಅಂದಿನ ಕಾರ್ಪೊರೇಟರ್ ಅನಿತಾ ಅವರ ಪತಿ ರವಿಶಂಕರ್ ಅವರಿಂದ ಆರಂಭಗೊಂಡಿತೆನ್ನಲಾದ ಈ

ಇಂದಿರಾ ಬಡಾವಣೆಯ ಸುತ್ತ ಗಿಡಗಂಟೆಗಳ ಹಾವಳಿ ಹೆಚ್ಚಾಗಿದ್ದು, ಖಾಲಿ ನಿವೇಶನಗಳು ಇಂತಹ ಗಿಡ ಮರ ಬೆಳೆಸುವಲ್ಲಿ ಸಫಲವಾಗಿವೆ.
ಜನ ವಾಸಿಸುವ ಈ ಸ್ಥಳದಲ್ಲಿ ಸಾಕಷ್ಟು ಭಯಭೀತದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿರುವ 3 ಪಾರ್ಕ್ ಗೆ ತಂತಿಕಲ್ಲನ್ನು ಈ ಬಡಾವಣೆಯ ಮಾಲೀಕರು ಹಾಕಿದ್ದರು. ಆ ತಂತಿಕಲಿನ ಚಿತ್ರಣವೂ ಸಹ ಕಣ್ಣಿಗೆ ಕಾಣದಷ್ಟು ಗಿಡಮರಗಳು ಬೆಳೆದು ನಿಂತಿವೆ.

ಇಂತಹ ಪಾರ್ಕನ್ನು ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಹಾಗೂ ಕನಿಷ್ಠ ಸ್ವಚ್ಛಗೊಳಿಸುವ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮುಂದಾಗಬೇಕು ಎಂದು ಒತ್ತಾಯಿಸಲಾಗಿದೆ. ಇದರ ಮಾಲಿಕರು ಮಾರಿದ ಮೇಲೆ ನಮ್ಮದೇನು ಎಂದು ಕೈ ತೊಳೆದುಕೊಂಡಿದ್ದಾರಂತೆ.

ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಅವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಈ ಪಾರ್ಕನ್ನು ಒಮ್ಮೆ ಪರಿಶೀಲಿಸಿ ಕನಿಷ್ಠ ಸ್ವಚ್ಛಗೊಳಿಸುವ ಹಾಗೂ ಖಾಲಿನಿವೇಶನದಲ್ಲಿ ಗಿಡ ಮರ ಬೆಳೆಯುವಂತೆ ನೋಡಿಕೊಂಡಿರುವ ನಿವೇಶನ ಮಾಲೀಕರಿಗೆ ದಂಡ ವಿಧಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.