ಶಿವಮೊಗ್ಗ,ಜು.01): ಜೂನ್ 29 ರಂದು ಕೆಎಸ್ಆರ್ಟಿಸಿ ಬಸ್ನಿಲ್ದಾಣದ ಮಹಿಳಾ ನಿರೀಕ್ಷಣಾ ಕೊಠಡಿ ಹತ್ತಿರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಮಾರು 50 ರಿಂದ 55 ವರ್ಷದ ಅನಾಮಧೇಯ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಯ ವೈದ್ಯರಲ್ಲಿ ತೋರಿಸಿದಾಗ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಮೃತ ವ್ಯಕ್ತಿ ಸುಮಾರು 5.5 ಅಡಿ ಎತ್ತರ. ಎಣ್ಣೆಗೆಂಪು ಬಣ್ಣ, ದುಂಡನೆಯ ಮುಖ, ದೃಢವಾದ ಮೈಕಟ್ಟು, ತಲೆಯಲ್ಲಿ 1.5 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು ಇದ್ದು, ಮುಖದ ಮೇಲೆ ಬಿಳಿ ಬಣ್ಣದ ಕುರುಚಲು ಗಡ್ಡ ಮೀಸೆ ಇರುತ್ತದೆ. ಮೃತನ ಮೈಮೇಲೆ ನೀಲಿ ಬಣ್ಣದ ಮೇಲೆ ಬಿಳಿ

ಚುಕ್ಕೆಗಳಿರುವ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಇರುತ್ತದೆ. ಮೃತನ ಎರಡು ಕಾಲುಗಳಲ್ಲಿ ಅರ್ಧ ವಾಸಿಯಾಗಿರುವ ಹಸಿ

ಗಾಯಗಳಿದ್ದು, ಹೊಟ್ಟೆಯ ಬಲಭಾಗದಲ್ಲಿ ಸಾಸಿವೆ ಕಾಳು ಗಾತ್ರದ ಕಪ್ಪು ಮಚ್ಚೆ ಗುರುತು ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 08182-261414 ಅಥವಾ 9916882544 ನ್ನು ಸಂಪರ್ಕಿಸಬಹುದೆAದು ದೊಡ್ಡಪೇಟೆ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.