ಶಿವಮೊಗ್ಗ : ಶ್ರೀ ಮಹಾ ತಪಸ್ವಿ ಫೌಂಡೇಶನ್, ರಿ ಕೇಂದ್ರ ಕಛೇರಿ ಹರಿಹರ ಶಾಖಾ ಕಚೇರಿ ಶಿವಮೊಗ್ಗದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಶಿವಮೊಗ್ಗದ ಶ್ರೀರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಾವಿರ ವೃಕ್ಷ – ಪ್ರಕೃತಿ ಸುಭಿಕ್ಷ ಎಂಬ ಅಭಿಯಾನದ ಕಾರ್ಯಕ್ರಮವು ಶ್ರೀ ಮಹಾ ತಪಸ್ವಿ ಫೌಂಡೇಶನ್ ನ ಸಂಸ್ಥಾಪಕರಾದ ಪರಮ ಪೂಜ್ಯ ಗುರುಗಳಾದ ಶ್ರೀ ಶ್ರೀ ಅವಧೂತ ಕವಿಗುರುರಾಜ ಗುರೂಜಿ ಅವರ ಆಶೀರ್ವಾದ ಮತ್ತು ಫೌಂಡೇಶನ್ ನ ಸಿ ಇ ಓ ಆದ ಶ್ರೀ ಪ್ರಜ್ವಲ್ ನಾಯಕ್ ರವರ ಮಾರ್ಗದರ್ಶನದಲ್ಲಿ ಕರ್ನಾಟಕ, ತಮಿಳುನಾಡು, ಮಹಾರಾ? ರಾಜ್ಯದ ನಮ್ಮ ಶಾಖೆಗಳಲ್ಲಿ ನಮ್ಮ ಅಧಿಕಾರಿಗಳ ನೇತೃತ್ವದಲ್ಲಿ ಗುರುಗಳ ಭಕ್ತ ಸಮೂಹದ ಜೊತೆಗೂಡಿ ಕಾರ್ಯಕ್ರಮವನ್ನು ಆಚರಿಸುತ್ತಾ ಬರಲಾಗುತ್ತಿದೆ.


ಶಾಲೆಯ ಮುಖ್ಯೋಪಾಧ್ಯಾಯರಾದ ಭಾಗ್ಯಲಕ್ಷ್ಮೀ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಫೌಂಡೇಶನ್ ನ ನಿರ್ದೇಶಕ ಭಾನುಪ್ರಕಾಶ್ ಮಾತನಾಡಿ, ಕಳೆದ ವ? ನಮ್ಮ ಫೌಂಡೇಶನ್ ವತಿಯಿಂದ ಹಸಿರೇ- ಉಸಿರು ಎನ್ನುವ

ಅಭಿಯಾನವನ್ನು ಹಮ್ಮಿಕೊಂಡಿದ್ದೆವು ಈ ವ? ಸಾವಿರ ವೃಕ್ಷ- ಪ್ರಕೃತಿ ಸುಭಿಕ್ಷ ಎನ್ನುವ ಕಾರ್ಯಕ್ರಮವನ್ನು ೩ ರಾಜ್ಯಗಳಲ್ಲಿ ನಮ್ಮ ಅಧಿಕಾರಿಗಳು ಪರಿಸರ ಜಾಗೃತಿ ಮೂಡಿಸಲು ಕೆಲಸ ಮಾಡುತ್ತಾ ಬರುತ್ತಿದ್ದೇವೆ ಎಂದು ಮಾತನಾಡಿದರು.
ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ, ಕವಿತಾ ಮತ್ತು ಸದಸ್ಯರಾದ ಚಿತ್ರ ಶಾಲೆಯ ಸಹ ಶಿಕ್ಷಕ ನಾರಾಯಣ ನಾಯ್ಕ, ವಿಮಲ, ಉರ್ಮತ್ ಭಾನು, ಬಿಸಿ ಊಟ ದ ಸಿಬ್ಬಂದಿ ಗೌರಮ್ಮ, ನಳಿನ ಫೌಂಡೇಶನ್ ನ ಸಹ ನಿರ್ದೇಶಕ ರಾಜೇಶ್ ಮತ್ತು ಶಾಲೆಯ ವಿದ್ಯಾರ್ಥಿ ಗಳು ಭಾಗವಹಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿ ಬಂದಿತು.