ಶಿವಮೊಗ್ಗ: ನಗರದ ವಿನೋಬನಗರ ೬೦ ಅಡಿ ರಸ್ತೆಯ ಶುಭ ಮಂಗಳ ಸಮುದಾಯ ಭವನದ ಆವರಣದಲ್ಲಿರುವ ಶ್ರೀ ಶನೈಶ್ಚರ ದೇವಾಲಯದಲ್ಲಿ ಶ್ರೀ ಶನೈಶ್ಚರ ಸ್ವಾಮಿ ಜಯಂತಿ ಅಂಗವಾಗಿ ಮಹಾ ರಥೋತ್ಸವವು ಇಂದು ಅದ್ಧೂರಿಯಾಗಿ ಜರುಗಿತು.

ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಭಕ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ದೇವರಿಗೆ ವಿಶೇಷ ಅಲಂಕಾರ ಹಾಗೂ ವಿಶೇಷ ಧಾರ್ಮಿಕ ವಿಧಿ ವಿಧಾನಗಳನ್ನು ಹಮ್ಮಿಕೊಳ್ಳಲಾಗಿತ್ತು.

ಚಂಡೇ ವಾದ್ಯ ಹಾಗೂ ವಿಶೇಷ ವಾದ್ಯಗಳ ತಂಡ ಹಾಗೂ ಭಜನಾ ಮಂಡಳಿಗಳ ತಂಡ ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದವು. ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸ.ನ. ಮೂರ್ತಿ, ಖಜಾಂಚಿ ಚಿಕ್ಕಣ್ಣ, ಸಹಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ವಿ. ರಾಜು, ನಿರ್ದೇಶಕರಾದ ಎಸ್.ಕೆ. ಲೋಕೇಶ್, ಪ್ರಭಾಕರ್, ಶ್ರೀನಿವಾಸ್, ಅರ್ಚಕರಾದ ವಿಜಯ್, ಸುಬ್ರಹ್ಮಣ್ಯ ಭಟ್ ಸೇರಿದಂತೆ ಪ್ರಮುಖರು ಇದ್ದರು.