ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸುವುದರ ಮೂಲಕ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ನೆಹರು ಅವರ ಕೊಡುಗೆ ಅಪಾರವಾದದ್ದು. ಅವರು ಆಗರ್ಭ ಶ್ರೀಮಂತರಾಗಿದ್ದರು. ಸರ್ಕಾರಕ್ಕೆ ಅವರು ಕೋಟ್ಯಂತರ ಆಸ್ತಿಯನ್ನು ದಾನ ಮಾಡಿದ್ದಾರೆ. ಆದರೆ ಈಗಿನ ಬಿಜೆಪಿ ಸರ್ಕಾರ ವಿನಾಕಾರಣ ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸುತ್ತಾರೆ. ಇದರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಗಾಂಧೀಜಿ ಸೂಚಿಸಿದ ಪ್ರಧಾನಿ ನೆಹರು ಅವರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶ ಅತ್ಯಂತ ಬಡತನದಲ್ಲಿತ್ತು. ಅವರು ಪ್ರಧಾನಿಯಾದ ಮೇಲೆ ಈ ದೇಶವನ್ನು ಭವ್ಯ ಭಾರತವನ್ನಾಗಿ ಮಾಡಿದರು ಎಂದರು.
ದೊಡ್ಡ ದೊಡ್ಡ ಆಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಕೃಷಿಗೆ ಆದ್ಯತೆ ನೀಡಿದರು. ವೈಜ್ಞಾನಿಕ ಆರ್ಥಿಕ ಕೈಗಾರಿಕಾ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ ಆದರೆ ಅವರ ಸಾಧನೆಗಳು ಹೊಸ ತಲೆಮಾರಿಗೆ ತಲುಪಬೇಕಾಗಿದೆ ಎಂದರು.

ಮುಖಂಡರಾದ ಎಸ್.ಟಿ.ಹಾಲಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕಲೀಂ ಪಾಶಾ, ಎಸ್.ಟಿ.ಚಂದ್ರಶೇಖರ್, ವಿಜಯಲಕ್ಷ್ಮೀ ಪಾಟೀಲ್, ಜಿ.ಡಿ.ಮಂಜುನಾಥ್, ಶಿವಕುಮಾರ್, ಪ್ರವೀಣಕುಮಾರ್, ಯು.ಶಿವಾನಂದ, ಶಿವಣ್ಣ, ಗಿರೀಶ್ ಎಚ್.ಟಿ. ಮಧುಸೂಧನ್, ಗಂಗಾಧರ್, ಸಮೀನಾ ಕೌಸರ್, ಸ್ಟೆಲ್ಲಾ ಮಾರ್ಟಿನ್, ಸುಮತಿ, ಪರ್ವೀನ್ ಬಾನು, ಶಮೀನ್ ಬಾನು, ಅರ್ಚನಾ, ಚಂದ್ರಿಕಾ ಮೊದಲಾದವರಿದ್ದರು.