






ನೆಗಿಟೀವ್ ಥಿಂಕಿಂಗ್
ವಾರದ ಅಂಕಣ 47
- ಗಜೇಂದ್ರ ಸ್ವಾಮಿ ಎಸ್. ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಇತ್ತೀಚಿನ ಬದುಕು ಬದಲಾಗಿದೆಯೇ ಅಥವಾ ಬದುಕುವ ನಾವೇ ಬದಲಾಗಿದ್ದೇವಾ ಎಂಬ ಗಟ್ಟಿಯಾದ ಅನುಮಾನದೊಂದಿಗೆ ಇಂದಿನ ವಾಸ್ತವತೆಗಳ ತೊಳಲಾಟ ಹಾಗೂ ದಿನ ದೂಡುವ ಪರಿತಾಪಗಳ ನಡುವೆ ನಮ್ಮತನ ಎಲ್ಲಿಯೂ ಅವಿತು ಕುಳಿತಂತೆ ಕಾಣುತ್ತಿದೆ. ತಪ್ಪನ್ನು ಕಂಡಾಗ ಅದನ್ನು ಖಂಡಿಸುವ ಅಥವಾ ವಿರೋಧಿಸುವ ಮನೋಭಾವವನ್ನೇ ಮರೆತಿರುವುದು ಇತ್ತೀಚಿನ ದುರಂತಗಳಲ್ಲಿ ಅತಿ ದೊಡ್ಡ ವಿಷಯ ಎಂದರೆ ತಪ್ಪಾಗಲಿಕ್ಕಿಲ್ಲ. ತಪ್ಪಿಗೆ ನಾವು ಸಿಟ್ಟು ಮಾಡಿಕೊಳ್ಳದಿದ್ದರೆ ನಮ್ಮನ್ನೇ ನಾವು ಅವರಿಂದ ಬಗೆಸಿಕೊಂಡು ತಿನ್ನುವ ಆಹಾರವಾಗ ಬೇಕಾಗುತ್ತದೆ ಎಂಬ ಎಚ್ಚರಿಕೆಯ ವಿಷಯ ನೀಡುವುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣ.

ಹಿಂದಿನ ಬದುಕಿಗಿಂತ ಇಂದಿನ ಬದುಕಿನ ಶೈಲಿ ಬದಲಾಗಿದೆ. ನನ್ನಷ್ಟಕ್ಕೆ ನಾನು ನನಗಾಗಿ ನಾನು, ಏನೇ ಇದ್ದರೂ ನನ್ನ ಮನೆಗೆ ಮೀಸಲು ಎಂಬ ಸೀಮಿತ ಚೌಕಟ್ಟಿನೊಳಗೆ ಬಂಧಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜವಾಗಿಯೂ ದುರಂತವೇ ಹೌದು.

ಹಳ್ಳಿಗಳಲ್ಲಿ ಇಂತಹ ವಾತಾವರಣ ಕಾಣುವಂತಹ ಪರಿಸ್ಥಿತಿ ಬಂದಿರುವುದಕ್ಕೆ ಕಾರಣ ನಗರ ಪ್ರದೇಶಗಳ ಆಧುನಿಕತೆ ಹಾಗೂ ಇಂದಿನ ಯುವ ಪೀಳಿಗೆಯ ಬದುಕಿನ ಸ್ಥಿತಿಗತಿ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ? ಕೇವಲ ನನ್ನಷ್ಟಕ್ಕೆ ನಾನಿರುವುದಾದರೆ ಈ ಸಮಾಜದಲ್ಲಿ, ಅಥವಾ ನನ್ನ ಬೀದಿಯಲ್ಲಿ, ನನ್ನ ಮನೆಯಲ್ಲಿ ಇರುವ ಅಗತ್ಯವಾದರೂ ಏನಿದೆ? ಯಾವುದೋ ಕಾಡಿನಲ್ಲಿ, ಯಾವುದೋ ಗುಹೆಯೊಳಗೆ ಬಂಧಿಯಾಗಿರಬಹುದು.

ಮನುಷ್ಯ ಸಮಾಜ ಜೀವಿ ಎಂಬುದನ್ನು ನಾವು ನಮ್ಮಷ್ಟಕ್ಕೆ ದೂರ ಮಾಡಿಕೊಳ್ಳುವ ಕ್ಷಣ ಇದು ಎನಿಸುತ್ತಿರುವುದು ಸತ್ಯವಲ್ಲವೇ? ಕೇವಲ ನನಗೆ ನಾನು, ನನ್ನ ಒಂದಿಬ್ಬರಿಗೆ ನಾನು ಎನ್ನುವ ಮನೋಭಾವದ ನಡುವೆ ಹೆತ್ತವರನ್ನು ಮರೆಯುವ ಎಷ್ಟೋ ಕಠೋರ ಮನಸುಗಳು ನಮ್ಮ ನಡುವಿನ ಸಮಾಜದಲ್ಲಿ ಇಂತಹ ಗೊಂದಲಗಳನ್ನು ಹುಟ್ಟು ಹಾಕಲು ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಇಂತಹ ನೆಗೆಟಿವ್ ಮನಸುಗಳ ನಡುವೆ ಪಾಸಿಟಿವ್ ಮನಸುಗಳ ಸಕಾರಾತ್ಮಕ ಚಿಂತನೆ ನಾನಾ ಪ್ರಶ್ನೆಗಳಿಗೆ ಹಾಗೂ ಅವರ ಮನದಲ್ಲಿ ನಕಾರಾತ್ಮಕ ಆಲೋಚನೆಗಳು ಹುಟ್ಟಲು ಕಾರಣವಾಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಏಕೆಂದರೆ ಪರಸ್ಪರ ಒಬ್ಬರಿಗೆ ಒಬ್ಬರನ್ನು ಹೋಲಿಕೆ ಮಾಡಿಕೊಂಡು ನೋಡುವ ಮನೋಭಾವ ಹೆಚ್ಚಾಗಿದ್ದು, ಅದರಲ್ಲಿ ಮೊದಲು ಒಬ್ಬವನಾದವ ನೆಗೆಟಿವ್ ಮನಸ್ಸಿನವನಾಗಿದ್ದರೆ, ವಿಕಾರಾತ್ಮಕ ಚಿಂತನೆಗಳನ್ನು ಒಳಗೊಂಡಿದ್ದರೆ, ವಂಚನೆ ದ್ರೋಹ ಮೋಸ ಅನ್ಯಾಯ ಅವನ ಮನದಲ್ಲಿ ಹುದುಗಿದ್ದರೆ, ಈ ಸಕಾರಾತ್ಮಕ ಮನಸ್ಸಿನ ಪಾಸಿಟಿವ್ ಮನಸು ಹೇಗೆ ತಾನೇ ನೆಗೆಟಿವ್ ಯೋಚನೆಗಳತ್ತ ಗಮನಹರಿಸದಿರುತ್ತದೆ ಹೇಳಿ.
ಐವತ್ತನೇ ವಾರದ ಅಂಕಣದ ವಿಶೇಷ ಏನು ನೋಡ್ರಿ
ಯಾವುದೋ ಪ್ರೇಮಸಾಲಿನ ಬರಹಕೆ ಬದುಕನ್ನೇ ಕಳೆದುಕೊಂಡ ಹದಿಹರೆಯ!
ನಾನೊಬ್ಬ ಕವಿ, ನಾನೊಬ್ಬ ಒಳ್ಳೆ ಬರಹಗಾರ, ನನ್ನಷ್ಟು ಚಂದಾಗಿ ಯಾರೂ ಬರೆಯಲಾರರು. ಬಳುಕುವ ಬಳ್ಳಿಗೆ ಹೆಣ್ಣನ್ನು ಹೋಲಿಸಿ, ಸಿಂಧೂರ ಜೊತೆ ತುಟಿ ಮುತ್ತುಗಳ ಬರಹದ ಹೆಸರಲ್ಲಿ ಹದಿ ಹರೆಯದ ಮನಸುಗಳಲ್ಲಿ ಪ್ರೀತಿ ಎಂಬ ನಿಜವಾದ ಕೊಳ್ಳಿ ಇಡುವ ಕೆಲ ಕಿಡಿಗೇಡಿಗಳು ನಮ್ಮ ನಡುವೆ ಈಗಲೂ ರಾರಾಜಿಸುತ್ತಿದ್ದಾರೆ, ಮಿಂಚುತ್ತಿದ್ದಾರೆ.
ಯಾರಿಗೆ ತಾನೇ ತಮ್ಮನ್ನು ಹೊಗಳಿದಾಗ ಕುಶಿಯಾಗದಿರುತ್ತೆ ಹೇಳಿ.
ಕೆಲವರ ಬರಹದುದ್ದಕ್ಕೂ ಸಾಮಾಜಿಕ ಕಳಕಳಿ ತುಂಬಾ ಅಪರೂಪ. ದೇಹಭಾಷೆಯ ಜೊತೆ ಹೊಗಳುವಿಕೆಯ ಇಂತಹ ಬರಹಗಳಿಂದ ಬಾಲ್ಯ ಮತ್ತು ಯೌವ್ವನದ ನಡುವಿನ ಅವಧಿಯ ಹೆಣ್ಣು ಮತ್ತು ಗಂಡುಗಳ ಮನಸ್ಥಿತಿ ನಂಬಿಕೆಯ ಸೌದವನ್ನೇ ಕಟ್ಟಿ ಬಿಡುತ್ತದೆ. ಬದುಕು ಹಾಗೂ ಮುಂದಿನ ವಾಸ್ತವಗಳ ಅರಿವಿಲ್ಲದೇ ಮನಸನ್ನ ವಿಕೃತ ಮಾಡಿಕೊಂಡು ತನ್ನ ಮುಂದಿನ ಬದುಕು ಕಳೆದುಕೊಳ್ಳುವ, ಹುಚ್ಚರಂತಾಗುವ ಎಷ್ಟೋ ಜನರನ್ನ ನೋಡಿದ್ದೇವೆ, ತಾವು ಕಷ್ಟಪಟ್ಟು ಪಡೆದಿದ್ದ ಅಂಕಪತ್ರಗಳಿಗೆ ಬೆಂಕಿ ಹಾಕಿ ಸುಟ್ಟುಕೊಂಡ ರೋಚಕ ಕಥೆಯೂ ಕೇಳಿಬಂತು.
ನಿರೀಕ್ಷಿಸಿ ಐವತ್ತನೇ ಅಂದರೆ ನೆಗಿಟೀವ್ ಥಿಂಕಿಂಗ್ ನ ಐವತ್ತನೇ ವಾರದ ಅಂಕಣದಲ್ಲಿ
-ನಿಮ್ ಗಜೇಂದ್ರ ಸ್ವಾಮಿ
ಇತ್ತೀಚಿನ ಕೆಲ ದಿನಗಳಲ್ಲಿ ಕಣ್ಣಾರೆ ಕಂಡ ಸಾಕಷ್ಟು ನಿರೀಕ್ಷಣೆಗಳನ್ನು ನಾವು ಉದಾಹರಿಸಬಹುದು. ಯಾವುದೋ ವಾಹನದಲ್ಲಿ ಹೋಗುತ್ತಿರುವಾಗ ಒಬ್ಬರಿಗೆ ಆದ ಅನ್ಯಾಯವನ್ನು, ವಂಚನೆಯನ್ನು, ಮೋಸವನ್ನು, ಆರೋಗ್ಯದ ಸಮಸ್ಯೆಯನ್ನು ಅಷ್ಟಾಗಿ ಗಮನಹರಿಸದೆ ತನ್ನಷ್ಟಕ್ಕೆ ತಾನು ನಿಗದಿತ ಸಮಯಕ್ಕೆ ತನ್ನ ಕೆಲಸಕ್ಕೆ ಅಥವಾ ತನ್ನ ಮನೆಗೆ ಹೋಗಬೇಕೆಂಬ ಮನೋಭಾವ ಹೊಂದಿರುವ ಕೆಲವೇ ಕೆಲವು ವಿಕೃತ ಮನಸ್ಸುಗಳು ನಮ್ಮ ನಡುವಿನ ಸಕಾರಾತ್ಮಕ ಚಿಂತನೆಗಳನ್ನು ದೂರ ಮಾಡುತ್ತಿವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಬದುಕಿನುದ್ದಕ್ಕೂ ನಾನಾ ಅವತಾರಗಳನ್ನು ನಾನ ವೇಷ ಭೂಷಣದ ವ್ಯಕ್ತಿಗಳನ್ನು ನೋಡಿದಂತಹ ಮನುಷ್ಯ ಇಂದಿನ ಯುವ ಪೀಳಿಗೆಯ ಅದರಲ್ಲೂ ಹದಿಹರೆಯದ ಮಕ್ಕಳ ಮನದಲ್ಲಿ ಚಂಚಲತೆ ಇರುತ್ತೆ. ನಕಾರಾತ್ಮಕ ಚಿಂತನೆ, ಪ್ರೇಮ ಎಂಬುದಕ್ಕಿಂತ ಕಾಮದ ಭಾವನೆಯೇ ಹೆಚ್ಚಾಗಿರುವ ಆಲೋಚನೆಗಳು ನಮ್ಮ ನಡುವೆ ನಾನಾ ಅವಘಡ ಹಾಗೂ ಹಲವು ಅಪಸ್ವರಗಳಿಗೆ ಕಾರಣವಾಗುತ್ತಿದೆ.
ಈಗಿನ ಯುವ ಪೀಳಿಗೆ ಅದರಲ್ಲೂ ಬಾಲ್ಯಾವಸ್ಥೆ ದಾಟುವ ಹೊತ್ತಿನಲ್ಲಿ ಒಂದು ಮಗು ಆತ್ಮಹತ್ಯೆಯಂತಹ ಯೋಚನೆಯನ್ನು ಮಾಡುತ್ತದೆ ಎಂದರೆ ಆ ಮಗುವಿನ ಮನದಲ್ಲಿ ಇಡೀ ಸಮಾಜ ತುಂಬಿದ ಚಿಂತನೆಯಾದರೂ ಯಾವುದು? ಆ ಮಗು ಯಾಕೆ ವಿಕಾರಾತ್ಮಕ ಚಿಂತನೆಗಳನ್ನು ಅಂತಹ ವ್ಯಕ್ತಿಗಳನ್ನು ಗಮನಿಸಿತು ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಅಲ್ಲವೇ?
ವಿಶ್ವವನ್ನ ಮುಖ್ಯ ಉದ್ದೇಶವನ್ನಾಗಿ ಮಾಡಿಕೊಂಡು ಸಾಮಾನ್ಯವಾಗಿ ಅವಲೋಕಿಸಿದಾಗ ಆಯಾ ಪ್ರದೇಶಗಳಿಗೆ, ಆಯಾ ವಾತಾವರಣಗಳಿಗೆ ಅನುಗುಣವಾದ ಬದುಕಿನ ಶೈಲಿ ಕಂಡುಬರುತ್ತದೆ. ಸಾಂಸ್ಕೃತಿಕ ಚಿಂತನೆಗಳ ಜೊತೆ ಅಲ್ಲಿನ ಸಂಸ್ಕೃತಿ ಮೇಳೈಸುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಪರಸ್ಪರ ಸಂಸ್ಕೃತಿಗಳೇ ಬದಲಾಗುವ ಹಂತಕ್ಕೆ ತಲುಪಿರುವುದನ್ನು ನಾವು ಗಮನಿಸಿದ್ದೇವೆ, ಅದನ್ನು ನೋಡಿದ್ದೇವೆ. ನಮ್ಮ ಭಾರತ ದೇಶದ ಸಂಸ್ಕೃತಿಯ ಬಗ್ಗೆ ಇಡೀ ವಿಶ್ವವೇ ಕೊಂಡಾಡುವ ಹೊತ್ತಿನಲ್ಲಿ ನಾವು ನಮ್ಮ ಸಂಸ್ಕೃತಿಯನ್ನು ನಮ್ಮ ನಡುವಿನ ಸಂಸ್ಕಾರವನ್ನು ಮರೆತು ಅನ್ಯರ ಆಲೋಚನೆಗಳಿಗೆ ಬಲಿ ಬೀಳುತ್ತಿರುವುದು ಘೋರ ದುರಂತವಲ್ಲವೇ?
ಅಂಕಣದಲ್ಲಿ ಯಾರನ್ನೂ ಮುಖ್ಯಪಾತ್ರದಾರಿಯನ್ನಾಗಿ ಮಾಡಿಕೊಂಡಿಲ್ಲ, ಸುಖಾ ಸುಮ್ಮನೇ ನೀವೇ ಪಾತ್ರದಾರಿಗಳೆಂದುಕೊಂಡ್ರೆ ನಾವು ಹೊಣೆಗಾರರಲ್ಲ- ಸಂ