ಶಿವಮೊಗ್ಗ,ಮೇ.21: ಕಾಂಗ್ರೆಸ್ ಪಕ್ಷದಲ್ಲಿ ಮೂರು ರೀತಿಯ ಹುಚ್ಚರಿದ್ದಾರೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿ ಮಾತನಾಡಿ, ಇತ್ತೀಚಿನ ಆಪರೇಷನ್ ಸಿಂಧೂರ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು, ಮನಸ್ಸಿಗೆ ಬಂದಮನತೆ ಹುಚ್ಚಾಟದ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇವರಿಗೆ ದೇಶಪ್ರೇಮವೇ ಮರೆತು ಹೋದಂತೆ ಕಾಣುತ್ತದೆ. ಈ ನಾಯಕರುಗಳಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂರನ್ನು ಓಲೈಸುವುದನ್ನು ಈ ನಾಯಕರು ಇನ್ನೂ ಬಿಟ್ಟಿಲ್ಲ. ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿದಾಗ ದೇಶದ ಜೊತೆ ನಾವಿರುತ್ತೇವೆ. ಮೋದಿಯವರಿಗೆ ಬೆಂಬಲ ಕೊಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ನಂತರ ಅವರ ಮಾತಿನ ರೀತಿಯೇ ಬದಲಾವಣೆಯಾಯಿತು. ಏಕೆ ಹೀಗೆ ವಿರೋಧಬಾಸದ ಹೇಳಿಕೆಗಳನ್ನು ಕೊಡುತ್ತಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅರೆ ಹುಚ್ಚರ ತಂಡವಿದೆ. ಮರಿ ಖರ್ಗೆ (ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಸಚಿವ ಪ್ರಿಯಾಂಕ ಖರ್ಗೆ ) ಅಪ್ಪನಿಗೆ ವಿರುದ್ದವಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ದೇಶದ ಪರವಾಗಿ, ಸೇನೆಯ ಪರವಾಗಿ ಮಾತನಾಡಿದರೆ, ಮರಿ ಖರ್ಗೆ ಅರೆಹುಚ್ಚರಂತೆ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ನಲ್ಲಿ ಮೂರು ರೀತಿಯ ಹುಚ್ಚರಿದ್ದಾರೆ. ಕೆಲವರು ಅರೆ ಹುಚ್ಚರು, ಕೆಲವರು ಪೂರ್ಣ ಹುಚ್ಚರು, ಮತ್ತೆ ಕೆಲವರಿಗೆ ಹುಚ್ಚು ಬಿಟ್ಟಿದೆ ಕೂಡ ಎಂದ ಅವರು, ಹೀಗೆ ಹುಚ್ಚುಬಿಟ್ಟವರ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವುದು ಸಂತೋಷದ ವಿಷಯವೇ ಆಗಿದೆ ಎಂದರು.
ಯಾವಾಗ ಅವರು ಹಣೆಗೆ ಸಿಂಧೂರವನ್ನು ಇಟ್ಟುಕೊಂಡರೋ ಆಗ ಅವರಿಗಿದ್ದ ಹುಚ್ಚು ಬಿಟ್ಟು ಹೋಗಿದೆ. ಹಾಗಾಗಿ ಸಿದ್ಧರಾಮಯ್ಯನವರು ಮಾತ್ರ ಬುದ್ಧಿಭ್ರಮಣೆಯಿಂದ ಗುಣವಾಗಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ಹರಿಪ್ರಸಾದ್, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ಕೊತ್ತೂರು ಮಂಜುನಾಥ್ ಮುಂತಾದವರೆಲ್ಲಾ ಈಗಲೂ ಅರೆ ಹುಚ್ಚರೇ ಆಗಿದ್ದಾರೆ ಎಂದರು.
ಈ ದೇಶದ ಬಗ್ಗೆ ಹಗುರವಾಗಿ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವಂತಹ ಕಾನೂನುಗಳು ರಚನೆಯಾಗಬೇಕಾಗಿದೆ ಎಂದರು.
ಕೋಟ್ಯಾಂತರ ರೂ. ಮೌಲ್ಯದ ಬಂಗಾರ ಕಳ್ಳ ಸಾಗಣಿಕೆ ಮಾಡಿದ್ದ ನಟಿ ರನ್ಯಾರಾವ್ ಅವರಿಗೆ ಹೇಗೆ ಜಾಮೀನು ಸಿಕ್ಕಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕೋಟಿಗಟ್ಟಲೇ ಹಣ, ಒಡವೆ ಎಲ್ಲವೂ ಸಿಕ್ಕಿದೆ ಇದು ನ್ಯಾಯಾಂಗಕ್ಕೆ ಬಿಟ್ಟ ವಿಚಾರವಾದರೂ ಕೂಡ ಇಂತಹ ವಿಚಾರದಲ್ಲಿ ಜಾಮೀನೇ ಸಿಗದಂತಹ ಕಾನೂನುಗಳು ಬರಬೇಕಾಗಿದೆ ಎಂದರು.