ಶಿವಮೊಗ್ಗ : ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಲಯದಲ್ಲಿ ನಕ್ಸಲ್ ಬಿ.ಜಿ. ಕೃಷ್ಣಮೂರ್ತಿ ಅವರನ್ನು ಬಾಡಿ ವಾರೆಂಟ್ ಮೇಲೆ ತ್ರಿಶೂಲ್ ಜೈಲಿನಿಂದ ಇಂದು ಕರೆತರಲಾಗಿತ್ತು. ಆಗುಂಬೆಯ ಮೂರು ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿ.ಜಿ. ಕೃಷ್ಣಮೂರ್ತಿಯವರನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಕೇಸ್ ದಾಖಲಾಗಿತ್ತು. ೨೦೦೯ರಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿ ಸ್ಫೋಟ, ೨೦೦೯ರಲ್ಲಿ ಅರುಣ್ ಕುಮಾರ್ ಮನೆ ಮೇಲೆ ದಾಳಿ, ೨೦೦೭ರಲ್ಲಿ ಸುರೇಶ್ ನಾಯಕ ಬಂಧನದ ವೇಳೆ ನೆಕ್ಕಾಡು ಕಾಡಲ್ಲಿ ಸ್ಫೋಟಕ ವಸ್ತು ಪತ್ತೆ ಪ್ರಕರಣದಲ್ಲಿ ಬಿ.ಜಿ. ಕೃಷ್ಣಮೂರ್ತಿ ಅವರು ಆರೋಪಿಯಾಗಿದ್ದರು.
ಈ ಮೂರೂ ಪ್ರಕರಣದ ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ಆರೋಪಿ ಹೇಳಿಕೆಗೆ ಇಂದು ಕರೆತರಲಾಗಿತ್ತು. ಈ ವೇಳೆ ನ್ಯಾಯಾಧೀಶರು ಸ್ಫೋಟಕ ಹಾಗೂ ಗನ್ಗಳ ಬಳಕೆ ಕುರಿತು ಪ್ರಶ್ನಿಸಿದ್ದಾರೆ. ಇವುಗಳನ್ನು ಬಿ.ಜಿ. ಕೃಷ್ಣಮೂರ್ತಿ ಅಲ್ಲಗೆಳೆದಿದ್ದಾರೆ.

ಜೈಲಿನಲ್ಲಿ ಕನ್ನಡ ಪುಸ್ತಕ ಓದಲು ಕೋರ್ಟ್ನ ಅನುಮತಿ ಕೇಳಲಾಯಿತು. ತ್ರಿಶೂರಿನ ವಿವೂರ್ ಜೈಲಿನಲ್ಲಿರುವ ಕನ್ನಡ ಪುಸ್ತಕ ತೆಗೆದುಕೊಂಡರೆ ಕೇರಳ ಜೈಲಿನಲ್ಲಿ ಅನುಮತಿಯಿಲ್ಲ ಹಾಗಾಗಿ ವಕೀಲ ಶ್ರೀಪಾಲರಿಂದ ಕೋರಿಕೆ ಮಂಡಿಸಲಾಯಿತು. ಭದ್ರತಾ ವಿಚಾರದಲ್ಲಿ ಜೈಲಿನವರು ಬೇಡ ಎಂಬ ವಾದವನ್ನು ಎಪಿಪಿ ಮಂಡಿಸಿದರೂ ಕೊನೆಯಲ್ಲಿ ಪುಸ್ತಕಗಳ ಓದುವಿಕೆಗೆ ಅವಕಾಶ ನೀಡಲಾಯಿತು.

ನಂತರ ಮಾತನಾಡಿದ ವಕೀಲ ಶ್ರೀಪಾಲ್ ಮುಂದಿನ ತಿಂಗಳು ೧೬ಕ್ಕೆ ಆರ್ಗ್ಯೂಮೆಂಟ್ ಇದೆ ಇಂದು ಶಿವಮೊಗ್ಗದ ಜೈಲಿನಲ್ಲಿ ವಸತಿ ಇದ್ದು ಬೆಳಿಗ್ಗೆ ತ್ರಿಶೂರ್ಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದರು. ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಮ್ಮಿಕೊಳ್ಳಲಾಗಿತ್ತು.