ನಗರದ ಪಿಇಎಸ್ ಐಎಎಮ್ಎಸ್ ಡಿಗ್ರಿ ಕಾಲೇಜಿನಲ್ಲಿ ಸಿಂಥೆಸಿಸ್ ಫೋರಂ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸ್ವದೇಶಿ ಆಹಾರಮೇಳವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರದ ಮಹತ್ವವನ್ನು ತಿಳಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ವಾಣಿಜ್ಯೋದ್ಯಮದ ಕುರಿತು ಮತ್ತು ಸ್ವಆರ್ಥಿಕ ಸ್ವಾವಲಂಬನೆಯ ಬಗ್ಗೆ ಅರಿವನ್ನು ಮೂಡಿಸುವುದು ಇದರ ಉದ್ದೇಶವಾಗಿತ್ತು. ಪದವಿಯ ಮೂರೂ ವರ್ಷದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಒಂದು ತಂಡದಲ್ಲಿ ೫ ವಿದ್ಯಾರ್ಥಿಗಳಂತೆ ಒಟ್ಟು ೧೪ ತಂಡಗಳು ಭಾಗವಹಿಸಿದ್ದವು. ಹೋಳಿಗೆ, ಅಕ್ಕಿರೊಟ್ಟಿ, ಹಾಲುಬಾಯಿ,

ಪರೋಟ, ಜಾಮೂನು, ಹಲ್ವಾ, ಗಿರ್ಮಿಟ್, ನಿಪ್ಪಟ್ಟು, ನಿಂಬುಸೋಡ, ಪಾನಕ, ಪ್ರೂಟ್ ಸಲಾಡ್, ಫಲೂದಾ, ಪಾನಿಪುರಿ, ಕಡ್ಲೆಕಾಳು ಉಸಳಿ, ಪಾಯಸ, ಕೋಸಂಬರಿ ವಿವಿಧರೀತಿಯ ಆಹಾರ ಹಾಗೂ ತಂಪು ಪಾನೀಯಗಳನ್ನು ವಿದ್ಯಾರ್ಥಿಗಳು ಫುಡ್ ಮೇಳದಲ್ಲಿ ಉಣಬಡಿಸಿದರು. ಆಹಾರಮೇಳವನ್ನು ಪಿಇಎಸ್ ಟ್ರಸ್ಟ್ನ ಮುಖ್ಯ ಆಡಳಿತ ಸಂಯೋಜಕರಾದ ಡಾ. ನಾಗರಾಜ .ಆರ್ ಅವರು ಉದ್ಘಾಟಿಸಿದರು.

ತೀರ್ಪುಗಾರರಾಗಿ ಪಿಇಎಸ್ ತಾಂತ್ರಿಕ ಕಾಲೇಜಿನ ಆರ್ಟಿಫಿಶಿಯಲ್ ಇಂಟಲಿಜನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಪೂರ್ಣಿಮ ಮತ್ತು ಶ್ರೀಮತಿ ಶಿಲ್ಪ ಅವರುಗಳು ಆಗಮಿಸಿದ್ದರು. ಆಹಾರ ಮೇಳದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುದರ್ಶನ್ ,ಜಿ ಎಂ. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ದಿಲೀಪ್ಕುಮಾರ್ .ಎಸ್ .ಡಿ, ಕಂಪ್ಯೂಟರ್ಸೈನ್ಸ್ ವಿಭಾಗದ ಮುಖ್ಯಸ್ಥರಾದ

ಶ್ರೀಮತಿ ರೂಪ ಡಿ. ಎಸ್ ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಹನ್ ಡಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಹೆಚ್ಆರ್, ಸಿಂಥೆಸಿಸ್ ಫೋರಂನ ಸಂಚಾಲಕರಾದ ಶ್ರೀ ರವಿಕುಮಾರ್ ಜಿ ಬಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪದವಿ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಪಾಲ್ಗೊಂಡಿದ್ದರು.