ಶಿವಮೊಗ್ಗ: ವಿಶ್ವಹಿಂದೂ ಪರಿಷತ್ ಬಜರಂಗ ದಳದ ವತಿಯಿಂದ ಮಂಗಳವಾರ ರಾತ್ರಿ ಉಷಾ ನರ್ಸಿಂಗ್ ಹೋಂ ಬಳಿಯ ಅಕ್ಕಮಹಾದೇವಿ ವೃತ್ತದಲ್ಲಿ ಭಯೋತ್ಪಾದಕರ ಪ್ರತಿಕೃತಿ ದಹಿಸಿ ಉಗ್ರರ ಕುಕೃತ್ಯವನ್ನು ಖಂಡಿಸಿ ಉಗ್ರರನ್ನು ಗಲ್ಲಿಗೇರಿಸಲು ಒತ್ತಾಯಿಸಿ ಪ್ರತಿಭಟಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಾಸುದೇವ್, ಉಪಾಧ್ಯಕ್ಷ ಆನಂದ್ರಾವ್, ಶಾಸಕ ಡಿ.ಎಸ್.ಅರುಣ್, ಅಂಕುಶ್, ರಮೇಶ್ ಬಾಬು, ಸುರೇಶ್ ಬಾಬು ಮೊದಲಾದವರು ಇದ್ದರು.

ಶಿವಮೊಗ್ಗ:ರಾಮಣ್ಣ ಶ್ರೇಷ್ಠಿ ಪಾರ್ಕ್ನಲ್ಲಿ ಮಂಗಳವಾರ ರಾತ್ರಿ ಉಗ್ರರ ದಾಳಿ ಖಂಡಿಸಿ ಸಾರ್ವಜನಿಕರು, ಜಿಲ್ಲಾ ಬಿಜೆಪಿ ಹಾಗೂ ವಿವಿಧ ಸಂಘಟನೆಗಳಿಂದ ದೀಪ ಕೈಯಲ್ಲಿ ಹಿಡಿದು ಪ್ರತಿಭಟನೆ ವ್ಯಕ್ತಪಡಿಸಿದರು. ಹಾಗೂ ಮೃತ ಮಂಜುನಾಥ್ ಆತ್ಮಕ್ಕೆ ಶಾಂತಿಕೋರಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಪ್ರಮುಖರಾದ ಮೋಹನ್ರೆಡ್ಡಿ, ಸುರೇಖಾ ಮುರಳೀಧರ್, ರಾಮು, ರಶ್ಮಿ, ಶಿವಾನಂದ್, ಮುರಳೀಧರ್,ಚೇತನ್ ಮತ್ತಿತರರು ಇದ್ದರು.
