ಶಿವಮೊಗ್ಗ : ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಸಾವನ್ನಪ್ಪಿದ ಮಂಜುನಾಥ ಅವರ ಮೃತದೇಹ ನಾಳೆ ಬೆಳಗ್ಗೆ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಅಂತ್ಯ ಸಂಸ್ಕಾರದ ಹಿನ್ನೆಲೆಯಲ್ಲಿ ಅರ್ಧ ದಿನ ಶಿವಮೊಗ್ಗ ನಗರದಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಲಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಚನ್ನಬಸಪ್ಪ ಅವರು, ನಾಳೆ 9 ಗಂಟೆ ಹೊತ್ತಿಗೆ ಮೃತದೇಹ ಬರಲಿದೆ. ಮಧ್ಯಾಹ್ನ ೧೨.೩೦ರವರೆಗೆ ಮನೆ ಬಳಿ ಅಂತಿಮ ವಿಧಿವಿಧಾನ ಮತ್ತು ಸಾರ್ವಜನಿಕ ದರ್ಶನ ಇರಲಿದೆ. ಆ ಬಳಿಕ ನಗರದಲ್ಲಿ ಮೆರವಣಿಗೆ ನಡೆಯಲಿದೆ. ಸಾಗರ ರಸ್ತೆ, ಐಬಿ ಸರ್ಕಲ್, ಕುವೆಂಪು ರಸ್ತೆ, ಜೈಲ್ ವೃತ್ತ, ನೆಹರೂ ರಸ್ತೆ, ಬಿ.ಹೆಚ್.ರಸ್ತೆ, ಶಂಕರಮಠ ಸರ್ಕಲ್ನಿಂದ ರೋಟರಿ ಚಿತಾಗಾರಕ್ಕೆ ತಲುಪಲಿದೆ ಎಂದರು.