ಶಿವಮೊಗ್ಗ: ಗುಡ್ಡವನ್ನೇ ಅಗೆದು ಅನಧಿಕೃತವಾಗಿ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಇಂದು ಸದಾಶಿವಪುರ ಹಕ್ಕಿಪಿಕ್ಕಿ ಕ್ಯಾಂಪ್ ನ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಸದಾಶಿವಪುರ ಹಕ್ಕಿ ಪಿಕ್ಕಿ ಕ್ಯಾಂಪ್ ನಲ್ಲಿ ಸರ್ಕಾರಿ ಜಾಗದಲ್ಲಿ ಗುಡ್ಡವಿದ್ದು ಈ ಗುಡ್ಡವನ್ನು ಕೆಲವರು ಅಕ್ರಮವಾಗಿ ಸುಮಾರು 10 ವರ್ಷಗಳಿಂದ ಗುಡ್ಡ ಅಗೆದು ಮಣ್ಣು ಮತ್ತು ಕಲ್ಲುಗಳನ್ನು ತೆಗೆಯುವುದರ ಜೊತೆಗೆ ಅಲ್ಲಿ ನಿವೇಶನಗಳನ್ನಾಗಿ ಮಾರ್ಪಡಿಸಿ ಮನೆಗಳನ್ನೂ ಕಟ್ಟಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಅನಧಿಕೃತವಾಗಿ ಮಾಡಿದ ನಿವೇಶನವನ್ನೂ ಕೂಡ ಮಾರಾಟ ಮಾಡಿ ಇದನ್ನೊಂದು ದಂಧೆಯಾಗಿ ಮಾಡಿಕೊಂಡಿದ್ದಾರೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರಕಾಶ್, ಶಿವು, ಶಿರಸ್ತೆ, ಮಣಿಕಂಠ, ದೇವೇಂದ್ರಪ್ಪ, ಅಭಿಷೇಕ್ ಮೊದಲಾವರಿದ್ದರು.