ಶಿವಮೊಗ್ಗ: ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಚಿಕ್ಕಮಗಳೂರಿನ ಆದಿಚುಂಚನಗಿರಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಯಂಗ್ ತರಂಗ್ -2025’ ಅಂತರ ಕಾಲೇಜು ಮ್ಯಾನೇಜ್ಮೆಂಟ್ ಫೆಸ್ಟ್ ನಲ್ಲಿ ಚಾಂಪಿಯನ್ಸ್ ಗಳಾಗಿ ಬಹುಮಾನ ಪಡೆದಿದ್ದಾರೆ.

ವಿವಿಧ ಸ್ಪರ್ಧೆಗಳಾದ ನೃತ್ಯ (ಪ್ರಥಮ), ಏಕವ್ಯಕ್ತಿ ಗೀತೆ (ಪ್ರಥಮ), ಟ್ರೆಷರ್ ಹಂಟ್ (ಪ್ರಥಮ), ಬಿಸಿನೆಸ್ ಕ್ವಿಜ್ (ತೃತೀಯ), ಫೋಟೋಗ್ರಫಿ (ದ್ವಿತೀಯ), ಬೆಸ್ಟ್ ಮ್ಯಾನೇಜರ್ (ದ್ವಿತೀಯ) ಸ್ಥಾನ ಪಡೆದಿದ್ದಾರೆ. ಒಟ್ಟು 06 ವಿವಿಧ ಮ್ಯಾನೇಜ್ಮೆಂಟ್ ಸ್ಪರ್ಧೆಗಳಲ್ಲಿ 06 ಸ್ಪರ್ಧೆಗಳಲ್ಲೂ ವಿಜೇತ ಸ್ಥಾನ ಪಡೆದು ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡಿದ್ದಾರೆ.

ಎನ್ಇಎಸ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು 2017 ರಿಂದ ನಿರಂತರ ಚಾಂಪಿಯನ್ ಶಿಪ್ ಪಡೆಯುತ್ತಿದ್ದು, ದಾಖಲೆಯನ್ನು ನಿರ್ಮಿಸಿದೆ.

ನಿರ್ವಹಣಾ ಚಟುವಟಿಕೆಗಳ ಕಾರ್ಯಕ್ರಮಾಧಿಕಾರಿ ಅರುಣ್ ಕುಮಾರ್ ವಿದ್ಯಾರ್ಥಿಗಳ ತಂಡವನ್ನು ಸಂಯೋಜಿಸಿದ್ದರು. ವಿಜೇತ ತಂಡಕ್ಕೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.