ಶಿವಮೊಗ್ಗ.17(ಸ್ವಚ್ಛ ಭಾರತ್ ಮಿಷನ್(ನಗರ) 2.0 ಅಡಿಯಲ್ಲಿ ವೈಯಕ್ತಿಕ ಗೃಹ ಬಳಕೆಯ ಶೌಚಾಲಯ ನಿರ್ಮಾಣ ಮಾಡಲು ಫಲಾನುಭವಿ ಆಯ್ಕೆಗೆ ಶಿರಾಳಕೊಪ್ಪ ಪುರಸಭೆಯು ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವವರು ಪಾನ್ ಕಾರ್ಡ್/ವೋಟರ್ ಐಡಿ/ ಪಾಸ್ಪೋರ್ಟ್ ಪ್ರತಿ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಪಾಸ್ಪೋರ್ಟ್

ಅಳತೆಯ ಭಾವಚಿತ್ರದೊಂದಿಗೆ ಎಪ್ರಿಲ್ 30 ರ ಸಂಜೆ 5.30 ಗಂಟೆಯೊಳಗೆ ಪುರಸಭೆ ಕಚೇರಿಯ ಆರೋಗ್ಯ ವಿಭಾಗವನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದು.

ಹಿಂದಿನ ಯಾವುದೇ ಯೋಜನೆ ಅಡಿಯಲ್ಲಿ ಒಂದು ಕುಟುಂಬವು ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಹಣವನ್ನು ಪಡೆದಿದ್ದರೆ, ಅದೇ ಕುಟುಂಬವು ಶೌಚಾಲಯಗಳಿಗೆಂದು ಮತ್ತೊಮ್ಮೆ ಹಣವನ್ನು ಪಡೆಯಲು ಅರ್ಹವಾಗಿರುವುದಿಲ್ಲ ಎಂದು ಶಿರಾಳಕೊಪ್ಪ ಪುರಸಭೆ ಅಧ್ಯಕ್ಷರು ತಿಳಿಸಿದ್ದಾರೆ.