
ಶಿವಮೊಗ್ಗ, ಏ.12:
ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಸ್ಕೀಮ್ ನಡಿ ಮಾಡಿರುವ ವಿವಿಧ ರೀತಿಯ ಕಾಮಗಾರಿಗಳು ಅವುಗಳಲ್ಲಿ ನಡೆದಿರುವ ಭ್ರಷ್ಟಾಚಾರ ಹಣ ದುರುಪಯೋಗ ಹಾಗೂ ಹೊಸಮನೆ ಶರಾವತಿ ನಗರ ಬಡಾವಣೆಯಲ್ಲಿ ಮಾಡಿರುವ ಅವೈಜ್ಞಾನಿಕ ಕಾಮಗಾರಿಗಳು ಇವತ್ತಿಗೂ ಓಡಾಡುವಾಗ ಎಲ್ಲರ ಕಣ್ಣಿಗೆ ಕಾಣುವ ನೂರಾರು ಗುಂಡಿಗಳು ಶಿವಮೊಗ್ಗ ನಗರದಲ್ಲಿ ಕಾಣುತ್ತಿದೆ. ಇದಕ್ಕೆ ಅಧಿಕಾರಿಗಳು ನಮಗೆ ಸಂಬಂಧಿಸಿದಲ್ಲದಂತೆ ಈ ಯೋಜನೆಯ ಅವಧಿ ಮುಗಿದಿದೆ. ಇದೀಗ ಕಾರ್ಪೊರೇಷನ್ ಗೆ ಹಸ್ತಾಂತರಗೊಳ್ಳುತ್ತಿದೆ ಎಂದು ನಗರಸಭೆ ಮಾಜಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಎನ್.ಕೆ. ಶ್ಯಾಮ್ ಸುಂದರ್ ತಿಳಿಸಿದ್ದಾರೆ.

ಆದರೆ ಇದರಲ್ಲಿ ಕೆಲವರು ಇನ್ನೂ ಇದರಲ್ಲಿ ಎಷ್ಟು ಬಾಕಿ ಹಣ ದೋಚಬೇಕು ಅಷ್ಟು ದೋಚಲು ಹೊರಟಿದ್ದರು.ಕೆಲವು ಹಿರಿಯ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕಿವಿ ಕೇಳದಂತೆ ಇದ್ದರೇಕೆ ಎಂದು ಪ್ರಶ್ನಿಸಿದ್ದಾರೆ.
ಆದರೆ ವಿಧಿಯು ಸತ್ಯದ ಆಟದ ಮುಂದೆ ಒಬ್ಬ ಪ್ರಭಾರ ಮುಖ್ಯ ಇಂಜಿನಿಯರ್ ಕೃಷ್ಣಪ್ಪನ ಹಣದ ದಾಹ ಲೋಕಾಯುಕ್ತ ಬಲೆಗೆ ಬಿದ್ದು ಬೆತ್ತಲು ಮಾಡಿದೆ. ಅಂದರೆ ಅಧಿಕಾರಿಗಳ ಕಿರುಕುಳಕ್ಕೆ ಗುತ್ತಿಗೆದಾರರು ಈ ಎಲ್ಲಾ ಯೋಜನೆಯಲ್ಲಿ ಲಂಚದ ಹಣ ಕೊಟ್ಟು ಕೊಟ್ಟು ಎಷ್ಟು ರೋಸಿ ಹೋಗಿರಬಹುದು ಯೋಚಿಸಿ. ಗುತ್ತಿಗೆದಾರ ಹಾಗೂ ಮುಖ್ಯ ಇಂಜಿನಿಯರ್ ಆಡಿಯೋದಲ್ಲಿ ಮಾತನಾಡಿರುವ ವಿಷಯ ಕೇಳಿದರೆ ಇನ್ನಷ್ಟು ಭ್ರಷ್ಟ ಅಧಿಕಾರಿಗಳು ತಗಲು ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಹಾಗೂ ಸ್ಮಾರ್ಟ್ ಸಿಟಿಯ ಇನ್ನೊಬ್ಬ ಎಕ್ಸಿಕ್ಯೂಟಿವ್ ಇಂಜಿನಿಯರ್ ಈ ಯೋಜನೆ ಮುಗಿದು ಪಾಲಿಕೆಗೆ ಹಸ್ತಾಂತರಗೊಳ್ಳುತ್ತದೆ ಎಂದುಕೊಂಡು ಇದಕ್ಕೆ ಸಂಬಂಧಪಟ್ಟ ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್ ಸುಮಾರು ಹತ್ತು ದಿನಗಳಿಂದ ತೆಗೆದುಕೊಂಡು ಹೋಗಿ ಅದರಲ್ಲಿರುವ ಪ್ರಮುಖ ದಾಖಲೆಗಳನ್ನು ನಾಶ ಮಾಡುವ ಸಂಚು ರೂಪಿಸಿದ್ದಾನೆ. ಹತ್ತು ದಿನಗಳಿಂದ ಯಾರದೂ ದೂರವಾಣಿ ಕರೆ ಸ್ವೀಕಾರ ಮಾಡುತ್ತಿಲ್ಲ. ಎಂದು ಸ್ಮಾರ್ಟ್ ಸಿಟಿಯ ಕಚೇರಿಯ ಗೋಡೆಗಳು ಹೇಳುತ್ತಿವೆ ಎಂದಿದ್ದಾರೆ.
ಇವರ ಸಹದ್ಯೋಗಿ ಲೋಕಾಯುಕ್ತ ಬಲೆಗೆ ಬಿದ್ದರೂ ತನಿಖೆಗೆ ಸಹಕರಿಸದೆ ಇವರ ಮುಖವಾಡ ಕಳುಚುತ್ತದೆ ಎಂದು ಬಂದಿರಲಿಲ್ಲ. ಇದರಲ್ಲಿ ಇವರ ಪಾಲು ಅಧಿಕಾರಿಯ ಮನೆಯಲ್ಲಿ ಇತ್ತು ಎಂದು ಹೇಳಲಾಗುತ್ತಿದೆ. ಮತ್ತು ಇವರ ಸಂಚು ಇದರಲ್ಲಿಇದೆ ಎಂದು ಅಧಿಕಾರಿಗಳ ವಲಯದಲ್ಲಿ ಹೇಳಲಾಗುತ್ತಿದೆ.

ಇನ್ನೋರ್ವ ಮಹಿಳಾ ಅಧಿಕಾರಿ ಮೀಟಿಂಗ್ ಹೆಸರಿನಲ್ಲಿ, ಸತ್ಕಾರದ ಹೆಸರಿನಲ್ಲಿ ಮಾಡಿರುವ ಲಕ್ಷಾಂತರ ರೂಪಾಯಿ ಬಿಲ್ಲುಗಳನ್ನು ಈ ಎಲ್ಲಾ ಹಗರಣಗಳನ್ನ ಸ್ಮಾರ್ಟ್ ಸಿಟಿ ಯೋಜನೆಯ ಮಂಡಳಿಯ ಅಧ್ಯಕ್ಷರಾದ ಕಾವೇರಿ ಮೇಡಂ ರವರು ಪರಿಶೀಲಿಸದೆ ಮೌನಕ್ಕೆ ಹೋಗಿರುವುದು ಸಂಶಯಕ್ಕೆ ಕಾರಣವಾಗುತ್ತದೆ. ಈಗಲಾದರೂ ತನಿಖೆಗೆ ಆದೇಶಿಸಿ ಭ್ರಷ್ಟಾಚಾರದಿಂದ ಲೂಟಿ ಹೊಡೆದಿರುವ ಹಣವನ್ನ ಅವರಿಂದ ಸರ್ಕಾರಕ್ಕೆ ಮರಳಿ ಪಡೆಯುವ ಪ್ರಯತ್ನ ಮಾಡಲಿ. ವಿವಿಧ ಯೋಜನೆಯ ಕಳಪೆ ಅವೈಜ್ಞಾನಿಕ ಕಾಮಗಾರಿಗಳನ್ನು ಪರಿಶೀಲಿಸಲಿ. ಈ ಹಿಂದೆ ಇದರ ಅಕ್ರಮಗಳನ್ನು ಭೃಷ್ಟಾಚಾರವನ್ನು ಅವೈಜ್ಞಾನಿಕ ಕಾಮಗಾರಿಗಳ ವಿಚಾರಗಳನ್ನು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದೆ ಎಂದಿದ್ದಾರೆ.
ಲೋಕಾಯುಕ್ತರ ಬಂಧನದಿಂದ ಇದಕ್ಕೆ ಸ್ವಲ್ಪ ನ್ಯಾಯ ಸಿಕ್ಕಿದೆ. ದೇವರ ನ್ಯಾಯಾಲಯದಲ್ಲಿ ಯಾರು ತಪ್ಪಿಸಿಕೊಳ್ಳಲಿಕ್ಕೆ ಆಗುವುದಿಲ್ಲ ಅಲ್ಲವೇ ಎಂದು ಎನ್ ಕೆ ಶ್ಯಾಮಸುಂದರ್ ತಿಳಿಸಿದ್ದಾರೆ.