
ಶಿವಮೊಗ್ಗ: ಮಾರ್ಚ್-28; ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೋಂದಣಿಯಾಗಿರುವ ಶಿವಮೊಗ್ಗ ನೋನಿ ಗ್ರೋವರ್ಸ್ ಅಸೋಸಿಯೇಷನ್, ಕೃಷಿ ಉತ್ಪನ್ನಗಳ ಪೂರೈಕೆಯ ಕೊರತೆಯಿಂದಾಗಿ ನಡೆಸಲು ವಿಫಲವಾಗಿರುವ ಕಾರಣ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ಸಂಬಂಧಪಟ್ಟವರ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು, ಸಹಕಾರ ಭವನ, ಮೊದಲನೆ ಮಹಡಿ, ಡಿ.ಸಿ.ಕಾಂಪೌAಡ್, ಶಿವಮೊಗ್ಗ ಇವರ ಕಚೇರಿಗೆ ಏಳು ದಿನಗಳೊಳಗಾಗಿ

ಸಲ್ಲಿಸುವಂತೆ ಹಾಗೂ ತಪ್ಪಿದ್ದಲ್ಲಿ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ಪರಿಗಣಿಸಿ, ಸಂಘದ ನೋಂದಣಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಗಳ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.