

ಶಿವಮೊಗ್ಗ, ಮಾರ್ಚ್ 28; ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಹೊರಗುತ್ತಿಗೆ ಮೂಲಕ ತಾತ್ಕಾಲಿಕವಾಗಿ ರಾಷ್ಟ್ರೀಯ ಸೈನಿಕ ಸ್ಮಾರಕದ ಸಹಾಯಕ ಮೇಲ್ವಿಚಾರಕ ಹುದ್ದೆಗಾಗಿ ಜೆ.ಸಿ.ಓ. ರ್ಯಾಂಕ್ನಿAದ ನಿವೃತ್ತರಾಗಿರುವ ಕನ್ನಡವನ್ನು ಸರಳವಾಗಿ ಮಾತನಾಡಲು,

ಓದಲು, ಬರೆಯಲು ಹಾಗೂ ಗಣಕ ಯಂತ್ರದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪತ್ರ ತಯಾರಿಸುವ ಕೌಶಲ್ಯವುಳ್ಳ 55 ವರ್ಷದೊಳಗಿನ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಅರ್ಜಿ ನಮೂನೆಯನ್ನು ಇಲಾಖೆಯ ವೆಬ್ಸೈಟ್ http://sainikwelfare.karnataka.gov.in ರಲ್ಲಿ ಪಡೆದು, ಭರ್ತಿ ಮಾಡಿದ
ಅರ್ಜಿಯನ್ನು ಇ-ಮೇಲ್ dirdswrblr@gmail.com ರ ಮೂಲಕ ಅಥವಾ ಅಂಚೆ ಮೂಲಕ ಏ.10 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ. ಸಿ.ಎ.ಹಿರೇಮಠರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 080-25589459 ನ್ನು ಸಂಪರ್ಕಿಸುವುದು.
—————————-