

ಹಿಂದಿನ ಆಯುಕ್ತರಿಂದ ಅಧಿಕಾರ ಸ್ವೀಕರಿಸಿದ್ದ ಆಯುಕ್ತರ ಚಿತ್ರ
ಶಿವಮೊಗ್ಗ,ಮಾ.29:
ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಯನ್ನು ಅತ್ಯಂತ ಸುಲಭ ಹಾಗೂ ಸುಗಮ ಸುಗಮವಾಗಿ ನಡೆಸಲು ಇಡಿ ಶಿವಮೊಗ್ಗ ನಗರವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಿದ್ದು ಮೂರು ವಿಭಾಗಗಳಲ್ಲಿ ಆಡಳಿತಾತ್ಮಕ ಕಚೇರಿಗಳು ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ.
ಕಳೆದ ಮಾರ್ಚ್ 11ರಂದು ಈ ಸಂಬಂಧ ಅಧಿಕೃತ ಜ್ಞಾಪನಾ ಪತ್ರವನ್ನು ಪಾಲಿಕೆಯ ಆಯುಕ್ತರಾದ ಕವಿತಾ ಅವರು ಬಿಡುಗಡೆ ಮಾಡಿದ್ದು, ವಿನೋಬನಗರ ಪೊಲೀಸ್ ಚೌಕಿ ಹತ್ತಿರ ಇರುವಂತಹ ವಾಣಿಜ್ಯ ಸಂಕೀರ್ಣದ ಮಳಿಗೆಯಲ್ಲಿ ಕಂದಾಯ ವಿಭಾಗದ ವಾರ್ಡ್ ನಂತೆ 1, 2, 3, 4, 6, 7, 8, 9, 32, 33, 34ರ 11 ಕಂದಾಯ ವಾರ್ಡ್ ಗಳಂತೆ ಉತ್ತರ ವಲಯದ ಕಂದಾಯ ಅಧಿಕಾರಿ ಡಿ. ನಾಗೇಂದ್ರ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಇಲ್ಲಿ ಇಬ್ಬರು ಸಹಾಯಕ ಕಂದಾಯ ಅಧಿಕಾರಿ, ಇಬ್ಬರು ರಾಜಸ್ವ ನಿರೀಕ್ಷಕರು, ಐವರು ವಿಷಯನಿರ್ವಾಹಕರನ್ನು ಮತ್ತು ಐವರು ಕರವಸೂಲಿಗಾರರು ಹಾಗೂ ಮತ್ತು ಓರ್ವರನ್ನು ಸೇರಿದಂತೆ 18 ಜನ ಕಂದಾಯ ವಿಭಾಗದ ಅಧಿಕಾರಿಗಳನ್ನು ಮತ್ತು ನೌಕರರನ್ನು ನೇಮಕ ಮಾಡಲಾಗಿದೆ.

ಇನ್ನು ಶೀನಪ್ಪ ಶೆಟ್ಟಿ ವೃತ್ತದಲ್ಲಿರುವ ದೇವರಾಜ ಅರಸು ವಾಣಿಜ್ಯ ಸಂಕೀರ್ಣದಲ್ಲಿ 5, 10,11, 20, 21, 22, 26,29, 30, 31 ಹಾಗೂ 35ರ ಕಂದಾಯ ವಾರ್ಡ್ ಗಳ 11 ವಾರ್ಡ್ ಗಳಂತೆ ವಲಯ ರೂಪಿಸಲಾಗಿದ್ದು ಕೇಂದ್ರವಲಯದ ಕಂದಾಯ ಅಧಿಕಾರಿ ಯಾಗಿ ವಿರುಪಾಕ್ಷಪ್ಪ ಎಂ. ಪೂಜಾರಿಯವರನ್ನು ನೇಮಕ ಮಾಡಲಾಗಿದೆ.
ಓರ್ವ ಸಹಾಯಕ ಕಂದಾಯ ಅಧಿಕಾರಿ, ಪೂರ್ವ ಕಚೇರಿ ವ್ಯವಸ್ಥಾಪಕರನ್ನು ಮೂವರು ರಾಜಸ್ವ ನಿರೀಕ್ಷಕರು ಹಾಗೆಯೇ ವಿಷಯ ನಿರ್ವಾಹಕರು ಮತ್ತು ಕರಾವಸೂಲಿಗಾರರು ಸೇರಿದಂತೆ 17 ಜನರನ್ನು ನೇಮಿಸಲಾಗಿದೆ.

ತುಂಗಾ ನದಿ ದಡದಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ಸಂಖ್ಯೆಗಳನ್ನು ವಲಯ ಮೂರನ್ನಾಗಿ ಗುರುತಿಸಲಾಗಿದ್ದು ಪೂರ್ವವಲಯದ ಕಂದಾಯ ಅಧಿಕಾರಿ ವಿಜಯಕುಮಾರ್ ಅವರಿಗೆ ಇದರ ಜವಾಬ್ದಾರಿಯನ್ನು ನೀಡಲಾಗಿದೆ. ಇಲ್ಲಿಯೂ ಸಹ ರಾಜಸ್ವ ನಿರೀಕ್ಷಕರು ಹಾಗೂ ವಿಷಯ ನಿರ್ವಾಹಕರು, ಕರವಸೂಲಿಗಾರರು ಸೇವೆ ಸಲ್ಲಿಸಲಿದ್ದಾರೆ. ಕಂದಾಯ ವಿಭಾಗದ 12, 13, 14, 15, 16, 19, 18, 23, 24, 25, 27, 28, ಸೇರಿದಂತೆ ಒಟ್ಟು 13 ವಾರ್ಡ್ ಗಳನ್ನು ಗುರುತಿಸಲಾಗಿದೆ.
ನಮ್ ವಾರ್ಡ್ ಯಾವುದು ನೋಡಿ
ಕಂದಾಯ ವಿಭಾಗದ ವಾರ್ಡ್ ಗಳಂತೆ ಸಮಗ್ರ ಮಾಹಿತಿಯನ್ನು ಗಮನಿಸಿ ಒಂದನೇ ವಾರ್ಡ್ ಬೊಮ್ಮನಕಟ್ಟೆ ಅಶ್ವಥ್ ನಗರ, ಎಲ್ ಬಿಎಸ್ ನಗರ ಆಗಿದ್ದು , ಎರಡನೇ ವಾರ್ಡ್ ವಿನೋಬನಗರ ಪೊಲೀಸ್ ಚೌಕಿ ಡೌನ್ ವೀರಣ್ಣ ಲೇಔಟ್ ಆಗಿರುತ್ತದೆ.
ಮೂರನೇ ವಾರ್ಡ್ ವಿಭಾಗವು ರಾಜೇಂದ್ರ ನಗರ ಹಾಗೂ ರವೀಂದ್ರ ನಗರವಾಗಿದ್ದು, 4ನೇ ವಾರ್ಡ್ ಗಾಂಧಿನಗರ ಮತ್ತು ವೆಂಕಟೇಶನಗರವಾಗಿದೆ.
ಐದನೇ ವಾರ್ಡ್ ದುರ್ಗಿಗುಡಿಯಾಗಿದ್ದು 6ನೇ ವಾರ್ಡ್ ಜಯನಗರ ಬಸವನಗುಡಿ ಹನುಮಂತನಗರ ವಿನಾಯಕ ನಗರ ಆಗಿದ್ದು, 7ನೇ ವಾರ್ಡ್ ಬಸವನಗುಡಿಯ ಮುಖ್ಯ ಭಾಗವಾಗಿರುತ್ತದೆ.
ಎಂಟನೇ ವಾರ್ಡ್ ನವಲೆ, ಕುವೆಂಪು ನಗರ, ತೇವರ ಚಟ್ನಹಳ್ಳಿ ಆಗಿದ್ದು, 9ನೇ ವಾರ್ಡ್ ಶೇಷಾದ್ರಿಪುರಂ ಆಗಿರುತ್ತದೆ.
ಹತ್ತನೇ ಬಾಪೂಜಿನಗರ ಟ್ಯಾಂಕ್ ಮೊಹಲ್ಲಾ ಆಗಿದ್ದು, 11ನೇ ವಾರ್ಡ್ ಸಹ ಇದೇ ಸ್ಥಳವನ್ನು ಆಧರಿಸಿದೆ.
12ನೇ ವಾರ್ಡ್ ಚಿಕ್ಕಲ್, ಗುರುಪುರ ಸಿದ್ದೇಶ್ವರ ನಗರವಾಗಿದ್ದು, 13 ಮತ್ತು 14ನೇ ವಾರ್ಡ್ ಮಲವಗೊಪ್ಪ ಮತ್ತು ಹರಿಗೆ ಆಗಿರುತ್ತದೆ.
15ನೇ ವಾರ್ಡ್ ಸೂಳೇ ಬೈಲಾಗಿದ್ದು 16ನೇ ವಾರ್ಡ್ ಊರಗಡೂರು ಆಗಿರುತ್ತದೆ.
17ನೇ ವಾರ್ಡ್ ವಿದ್ಯಾನಗರವಾಗಿದ್ದು 18ನೇ ವಾರ್ಡ್ ಕೋಟೆ ರಸ್ತೆ ಅಪ್ಪಾಜಿ ಕಾಂಪೌಂಡ್ ಆಗಿರುತ್ತದೆ.
19ನೇ ವಾರ್ಡ್ ಲಷ್ಕರ್ ಮೊಹಲ್ಲಾ, ಯಲಕಪ್ಪನ ಕೇರಿ, ಶಿವಾಜಿ ರಸ್ತೆಯಾಗಿದ್ದು, 20ನೇ ವಾರ್ಡ್ ಗಾಂಧಿಬಜಾರ್, ಸಾವರ್ಕರ್ ನಗರ ಕುಂಬಾರ ಗುಂಡಿ ಆಗಿರುತ್ತದೆ. ಇದೆ ಸ್ಥಳವು 21ನೇ ವಾರ್ಡಿಗೂ ಅನ್ವಯಿಸುತ್ತದೆ.

22ನೇ ವಾರ್ಡ್ ಎಂ ಕೆಕೆ ರಸ್ತೆ, ಗಾಂಧಿ ಬಜಾರ್ ಎಡಭಾಗ, ಬರಮಪ್ಪ ನಗರ, ಸಿದ್ದಯ್ಯ ರಸ್ತೆ ಕೆಆರ್ ಪುರಂ ಆಗಿರುತ್ತದೆ.
23ನೇ ವಾರ್ಡ್ ಸೀಗೆ ಹಟ್ಟಿ, ಓಟಿ ರಸ್ತೆ ಎಡಬಾಗವಾಗಿದ್ದು , 24ನೇ ವಾರ್ಡ್ ಓಟಿ ರಸ್ತೆ ಬಲಭಾಗ, ಭಾರತೀ ನಗರ ಆಗಿರುತ್ತದೆ.
25ನೇ ವಾರ್ಡ್ ನ್ಯೂ ಹಾಗೂ ಓಲ್ಡ್ ಮಂಡ್ಲಿ ಆಗಿದ್ದು 26ನೇ ವಾರ್ಡ್ ಗೋಪಾಲ ಗೋಪಾಲಗೌಡ ಬಡಾವಣೆ, ರಂಗನಾಥ ಬಡಾವಣೆ ಆಗಿದ್ದು, 27ನೇ ವಾರ್ಡ್ ಮಿಳಗಟ್ಟ ಹಾಗೂ ಆರ್ ಎಂ ಎಲ್ ನಗರವಾಗಿರುತ್ತದೆ.

28 ನೇ ವಾರ್ಡ್ ಅಜಾದ್ ನಗರ, ಕೆ ಆರ್ ಪುರಂ ಆಗಿದ್ದು, 29ನೇ ದುರ್ಗಿಗುಡಿ ಮತ್ತು ಬಿಎಚ್ ರಸ್ತೆ ಆಗಿದ್ದು, 31ನೇ ವಾರ್ಡ್ ಶರಾವತಿ ನಗರ, ಮಿಷನ್ ಕಾಂಪೌಂಡ್ ಆಗಿರುತ್ತದೆ.
32ನೇ ವಾರ್ಡ್ ಹೊಸಮನೆಯಾಗಿದ್ದು, 33ನೇ ವಾರ್ಡ್ ಶರಾವತಿ ನಗರ ಹಾಗೂ ಮಿಷನ್ ಕಾಂಪೌಂಡ್ ನ ಭಾಗವಾಗಿರುತ್ತದೆ.
34ನೇ ವಾರ್ಡ್ ವಿನೋಬನಗರ ಶುಭಮಂಗಳ ಹಿಂಭಾಗ ಎಪಿಎಂಸಿ ಸವಿ ಬೇಕರಿ ಹಿಂಭಾಗ ಆಗಿದ್ದು 35ನೇ ವಾರ್ಡ್ ಗಾಡಿಕೊಪ್ಪ, ಕಾಶಿಪುರ, ಮಲ್ಲಿಗೆನಹಳ್ಳಿ ಆಲ್ಕೊಳವಾಗಿರುತ್ತದೆ.
ಒಟ್ಟಾರೆ ಕಂದಾಯ ವಿಭಾಗದ ವಾರ್ಡ್ ಗಳ ಅನುಸಾರ ಮೂರು ವಿಭಾಗಗಳನ್ನು ತೆರೆಯಲಾಗುತ್ತದೆ.