
ಶಿವಮೊಗ್ಗ,ಮಾ.27 : ಅನಾರೋಗ್ಯದಿಂದ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಬ್ಯಾಂಕ್ ಆಫ್ ಬರೋಡ ಸ್ಯಾಲರಿ ಪ್ಯಾಕೇಜ್ ನಡಿಯ ಲೈಫ್ ಇನ್ಶುರೆನ್ಸ್ ನ 10 ಲಕ್ಷ ಪರಿಹಾರದ ಚೆಕ್ ನ್ನು ವಿತರಣೆ ಮಾಡಲಾಯ್ತು. ಜನವರಿ 9 ರಂದು ಪೊಲೀಸ್ ಇಲಾಖೆ ಕೆಎಸ್ ಐಎಸ್ಎಫ್ ವಿಭಾಗ ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿದ್ಯಾ ಸಾಗರ್ ಮಾದಪ್ಪ ಯಾರಾಂಡೊಲಿ ಎಂಬುವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಬ್ಯಾಂಕ್ ಆಫ್ ಬರೋಡಾ ಶಿವಮೊಗ್ಗ ಬಸ್ ನಿಲ್ದಾಣ ಶಾಖೆಗೆ ಸ್ಯಾಲರಿ ಜಮಾ ಆಗ್ತಿದ್ದ ಹಿನ್ನೆಲೆ ಬ್ಯಾಂಕ್ ಆಫ್ ಬರೋಡಾ

ಕಡೆಯಿಂದ 10 ಲಕ್ಷದ ಪರಿಹಾರ ಚೆಕ್ ನ್ನು ಪೊಲೀಸ್ ಸಿಬ್ಬಂದಿ ಸಹೋದರಿ ಭಾರತಿ ಒನಜೋಲ್ ಅವರಿಗೆ ಚೆಕ್ ನ್ನು ಬುಧವಾರ ಶಾಖೆಯಲ್ಲಿ ವಿತರಿಸಲಾಯ್ತು. ಈ ವೇಳೆ ಕ್ಷೇತ್ರೀಯ ಪ್ರಬಂಧಕರಾದ ಪಂಕಜ್ ಕುಮಾರ್ ಸುಮನ್ ಮಾತನಾಡಿ, ಎಲ್ಲಾ ಸರ್ಕಾರಿ ನೌಕರರು, ಗುತ್ತಿಗೆ ನೌಕರ, ಪ್ರೈವೇಟ್ ಸ್ಕೂಲ್, ಕಾಲೇಜ್, ಕಾರ್ಖಾನೆ, ಐಟಿ ಬಿಟಿ ಖಾಸಗಿ ಕಂಪನಿ ಯಲ್ಲಿ ಸಂಬಳ ಪಡೆಯುತ್ತಿರುವ ಯಾವುದೇ ದರ್ಜೆಯ ನೌಕರರು ಉಚಿತವಾಗಿ ಕನಿಷ್ಠ 40 ಲಕ್ಷ ರುಪಾಯಿ ಯಿಂದ ಗರಿಷ್ಠ 1 ಕೋಟಿ 20 ಲಕ್ಷ ರೂಪಾಯಿ ವರೆಗೆ ಆಕ್ಸಿಡೆಂಟ್ ಲ್ ಇನ್ಸೂರೆನ್ಸ್ ಉಚಿತವಾಗಿ

ಪಡೆಯಬಹುದು. ನಮ್ಮ ಬ್ಯಾಂಕ್ ಆಫ್ ಬರೋಡದೊಂದಿಗೆ ಭಾರತೀಯ ಸೇನೆ, ಭಾರತೀಯ ನೌಕಾ ದಳ, ಭಾರತೀಯ ವಾಯುದಾಳ, ಪೊಲೀಸ್ ಇಲಾಖೆ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್, ಪೂರ್ವ ರೈಲ್ವೆ, ದಕ್ಷಿಣ ರೈಲ್ವೆ, ಹಿಮಾಚಲ ಪ್ರದೇಶ ಪೊಲೀಸ್, ಗುಜರಾತ್ ಪೊಲೀಸ್, ಪಶ್ಚಿಮ ಮದ್ಯ ರೈಲ್ವೆ, ಉತ್ತರಾಖಂಡ ರಾಜ್ಯ ಸರ್ಕಾರಿ ಇಲಾಖೆ, ಇತ್ಯಾದಿ ಸರ್ಕಾರಿ ಮತ್ತು ಖಾಸಗಿ ಕಂಪನಿ ಗಳ ಜೊತೆ ಸ್ಯಾಲರಿ ಪ್ಯಾಕೇಜ್ ಒಪ್ಪಂದ ಮಾಡಿಕೊಂಡು ಅತ್ಯುತ್ತಮ ಸೇವೆಯನ್ನು ಬ್ಯಾಂಕ್ ಆಫ್ ಬರೋಡ ಒದಗಿಸುತ್ತಾ ಬರುತ್ತಿದೆ ಎಂದರು. ಚೆಕ್ ವಿತರಣಾ ಕಾರ್ಯಕ್ರಮದಲ್ಲಿ

ಕಮಾಂಡೆಂಟ್ ಕೆಎಸ್ ಐ ಎಸ್ ಎಫ್ ಶಿವಮೊಗ್ಗ ಶಿವಪ್ರಕಾಶ್ K R, ಮಂಜುನಾಥ್ ಎಸ್ ಅಣಜಿ, ಕ್ಷೇತ್ರೀಯ ಉಪ ಪ್ರಬಂಧಕರು ಯೋಗೇಶ್ ಎಸ್, ಮುಖ್ಯ ಪ್ರಬಂದಕರು ಜೀವನ್, ಶಾಖಾ ಪ್ರಬಂಧಕ ಧರ್ಮಲಿಂಗಂ, ಅರುಲ್ ಪ್ರಕಾಶ್, ಲವ ಕುಮಾರ್, ಹರೀಶ್ ಇತರೆ ಬ್ಯಾಂಕ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.