
ಶಿವಮೊಗ್ಗ, ಮಾ.27:
ಶಿವಮೊಗ್ಗ ಮಹಾನಗರ ಪಾಲಿಕೆಯ ಕಥೆಗಳನ್ನು ಹೇಳುವುದು ಒಂದೆರಡು ಸುದ್ದಿಗಳಲ್ಲಿ ಮುಗಿಯುವುದು ಕಷ್ಟ.

ರೆವೆನ್ಯೂ ಅಥವಾ ಇತರ ದಾಖಲಾತಿಗಳ ಮೂಲಕ ಹೊಂದಿರುವ ನಿವೇಶನಗಳನ್ನು ಬಿ ಖಾತೆ ಮಾಡಲು ಪಾಲಿಕೆ ವಿಶೇಷ ಅವಕಾಶವನ್ನು ನೀಡಿದೆ. ಅದಕ್ಕೆ ಸಮಯವನ್ನು ಸಹ ಮೀಸಲಾಗಿಟ್ಟಿದೆ. ಅರ್ಜಿ ಕೊಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತದೆ.

ಆದರೆ ಈ ಬಿ ಖಾತೆಯ ಅರ್ಜಿ ವಿತರಣೆ ಮಾಡುವ ಹಾಗೂ ಬಿ ಖಾತೆ ಆದನಂತರ ಆ ದಾಖಲಾತಿಯನ್ನು ಕೊಡಲು ತೆರೆಯಲಾದ ಕಚೇರಿಯ ನೌಕರರು ತಮಗಿಷ್ಟ ಬಂದಂತೆ ಬೇಕಾದಾಗ ಬರುತ್ತಾರೆ ಎಂಬ ಆರೋಪ ಕೇಳಿಬಂದಿದೆ.
ಬೆಳಿಗ್ಗೆ 10ಕ್ಕೆ ಬಂದು ಕಾಯುತ್ತಿದ್ದ ಜನ ಕಾಯುತ್ತಲೇ ಇರುತ್ತಾರೆ. ಹಾಸನದ ಹಾಸನಾಂಬೆ ದೇವಸ್ಥಾನದ ಬಾಗಿಲನ್ನಾದರೂ ತೆಗೆಸಬಹುದು. ಇದನ್ನು ತೆಗೆಯುವುದು ಕಷ್ಟ ಎಂಬಂತಹ ಸ್ಥಿತಿಯನ್ನು ಇಲ್ಲಿ ಮಾಡಿದ್ದಾರೆ.
ವಯಸ್ಸಾದವರು, ಅಂಗವಿಕಲರು ಅರ್ಜಿ ಪಡೆಯಲು ಅಥವಾ ಬಿ ಖಾತೆಯನ್ನು ಪಡೆಯಲು ಇಲ್ಲಿ ಬಂದು ಕಾಯುತ್ತಾ ಕುಳಿಯು ಕುಳಿತುಕೊಳ್ಳುವ ಅನಿವಾರ್ಯತೆ ಬಂದಿರುವುದು ದುರಂತವೇ ಹೌದು.

ಇಂದು ಬೆಳಗ್ಗೆ 11 ರವರೆಗೆ ಈ ಕಚೇರಿಯ ಬಾಗಿಲು ತೆಗೆಯದಿದ್ದಾಗ ಆ ವಿಷಯ ತಿಳಿದ ಕಂದಾಯ ಅಧಿಕಾರಿ ನಾಗೇಂದ್ರ ಅವರು ಅಲ್ಲಿಗೆ ಬಂದು ಸಂಬಂಧ ಪಟ್ಟ ನೌಕರರಿಗೆ ಹಿಗ್ಗಾಮುಗ್ಗ ಜಾಡಿಸಿ ಜನರು ಅವರ ಕೆಲಸವನ್ನು ಮಾಡಿಸಲು ಬರುತ್ತಾರೆ. ನೀವು ಬೇಕಾ ಬಿಟ್ಟಿ ಬರುವುದಾದರೆ ಇಲ್ಲಿ ಕೆಲಸ ಮಾಡುವುದು ಬೇಡ ಹೋಗು ಎಂದು ಗದಗಿಸಿದ್ದಾರೆ.

ಅವರು ಬಂದು ಹೇಳಿದ ನಂತರ ಬಾಗಿಲು ತೆಗೆದು ಕುಳಿತಿದ್ದಾರೆ. ಬಿ ಖಾತೆಯ ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕಾದ ವಿಷಯದಲ್ಲಿ ಕಂದಾಯ ವಿಭಾಗದ ಹಲವು ಅಧಿಕಾರಿಗಳು ನಿಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಬಹಳಷ್ಟು ನೌಕರರು ಅದರಲ್ಲೂ ಸಾರ್ವಜನಿಕರ ಜೊತೆ ಅತಿ ಹೆಚ್ಚು ಸಂಪರ್ಕ ಹೊಂದಿರುವವರು ಅಕ್ಕ ಗಮನ ಹರಿಸದಿರುವುದು ಮತ್ತು ಸಕಾಲಿಕವಾಗಿ ಕ್ರಮ ಕೈಗೊಳ್ಳದಿರುವುದು ಸಮಯಕ್ಕೆ ಸರಿಯಾಗಿ ಬರದಿರುವುದು ಘೋರ ದುರಂತವೇ ಹೌದು.
ಪಾಲಿಕೆಯ ಆಯುಕ್ತರು ಇತ್ತ ಗಮನಿಸಿ ಎಲ್ಲರ ಹಾಜರಾತಿಯನ್ನು ಹಾಗೂ ಸಮಯವನ್ನು ನೋಡಿ ಸೂಕ್ತ ಕ್ರಮ ಕೈಗೊಳ್ಳುವುದು ಒಳ್ಳೆಯದು ಎಂದು ನೊಂದವರ ಹಾಗೂ ಸಾರ್ವಜನಿಕರ ಒತ್ತಾಯ.