
ಶಿವಮೊಗ್ಗ:ಕಾಶಿಪುರ ಗೇಟ್ ಬಳಿ ಪಿ&ಟಿ ಕಾಲೋನಿ ಹತ್ತಿರ ಮಹಾನಗರ ಪಾಲಿಕೆ ಹಾಗೂ ರೈಲ್ವೆ ಇಲಾಖೆಯ ನಿರ್ಲಕ್ಷ್ಯದಿಂದ ೪ ಹಸುಗಳ ಮಾರಣಹೋಮ ನಡೆದಿದೆ.

ರೈಲ್ವೆ ಇಲಾಖೆಯ ಅಂಡರ್ಪಾಸ್ ಬಳಿ ಕಸದ ರಾಶಿಯಿದ್ದು, ಅದನ್ನು ವಿಲೇವಾರಿ ಮಾಡದೇ ಇರುವುದರಿಂದ ಪ್ರತಿದಿನ ಹಸುಗಳು ಕಸದ ರಾಶಿಯಲ್ಲಿ ತಿನ್ನಲು ಬರುತ್ತಿದ್ದು, ರೈಲ್ವೆ ಇಲಾಖೆಯವರು ಸಹ ಒಂದು ಕಡೆ ಮಾತ್ರ ಬ್ಯಾರಿಕೇಡ್ ಹಾಕಿ ಇನ್ನೊಂದು ಕಡೆ ಖಾಲಿ ಬಿಟ್ಟಿರುವುದರಿಂದ ಕಸ ತಿನ್ನಲು ಬಂದ ೪ ಹಸುಗಳು ಇಂದು ರೈಲಿಗೆ ಬಲಿಯಾಗಿದೆ. ಕಸ ವಿಲೇವಾರಿ ಮಾಡದೇಇರುವುದು ಪಾಲಿಕೆಯವರ ನಿರ್ಲಕ್ಷ್ಯವಾಗಿದ್ದು, ಎರಡು ಭಾಗದಲ್ಲಿ ಬ್ಯಾರಿಕೇಡ್ಗಳು ನಿರ್ಮಾಣ ಮಾಡದೇ ಇರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಪಾಲಿಕೆ ವತಿಯಿಂದ ಹಸುಗಳ ಮಾಲೀಕರಿಗೆ ಪರಿಹಾರ ನೀಡಬೇಕು. ಇನ್ನೂ ಮುಂದೆ ಆ ಸ್ಥಳದಲ್ಲಿ ಗಾರ್ಬೇಜ್ ನಿರ್ಮಾಣ ಆಗದಂತೆ ನೋಡಿಕೊಳ್ಳಬೇಕು. ಮತ್ತು ರೈಲ್ವೆ ಇಲಾಖೆಯವರು ಕೂಡ ಬ್ಯಾರಿಕೇಡ್ ಹಾಕಬೇಕು ಎಂದು ಜಿ.ಪಂ. ಮಾಜಿ ಸದಸ್ಯ ಕೆ.ಈ.ಕಾಂತೇಶ್ ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಅವರು ಈ ಬಗ್ಗೆ ಸಂಬಂಧಪಟ್ಟವರಿಗೂ ದೂರವಾಣಿ ಮೂಲಕ ಮಾತನಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಈ.ವಿಶ್ವಾಸ್, ಶ್ರೀಕಾಂತ್, ಅರುಣ್ ಮೊದಲಾದವರು ಇದ್ದರು.