
ಶಿವಮೊಗ್ಗ, ಮಾರ್ಚ್ 25, : ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 3 ಅಪರಿಚಿತ ವ್ಯಕ್ತಿಗಳ ಶವ ಪತ್ತೆಯಾಗಿದ್ದು, ವಾರಸ್ಸುದಾರರ ಸುಳಿವು ನೀಡಲು ಮನವಿ ಮಾಡಿರುತ್ತಾರೆ.
ನಗರದ ನಗರ ಮತ್ತು ಹಳೆ ರೈಲ್ವೆ ನಿಲ್ದಾಣಗಳ ನಡುವೆ ವೇದಿಕೆ ನಂ.1 ರಲ್ಲಿ ಸುಮಾರು 30-35 ವರ್ಷ ವಯಸ್ಸಿನ ಗಂಡಸ್ಸಿನ ಮೃತದೇಹ ಪತ್ತೆಯಾಗಿದ್ದು, ಹೆಸರು, ವಿಳಾಸ ಇರುವುದಿಲ್ಲ. ಮೃತ ವ್ಯಕ್ತಿಯು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, 02 ಇಂಚು ಉದ್ದ ತಲೆಗೂದಲು, ಉದ್ದ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಮೈಮೇಲೆ ನೇರಳೆ ಬಣ್ಣದ ತುಂಬು ತೋಳಿನ ಅಂಗಿ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಮೃತನ ಬಲಗಾಲು ಅಂಗವಿಕಲನಾಗಿದ್ದಾನೆ.

ನಗರದ ಸವಳಂಗ ರೈಲ್ವೆ ಗೇಟ್ ಹತ್ತಿರವಿರುವ ರೈಲುಹಳಿಗಳ ಪಕ್ಕದಲ್ಲಿ ಸುಮಾರು 40-45 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದೆ. ಮೃತಳ ಚಹರೆ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ತಲೆಯಲ್ಲಿ 7 ಇಂಚು ಉದ್ದದ ಕಪ್ಪು ಮತ್ತು ಕಂದು ಮಿಶ್ರಿತ ಕೂದಲು ಇದೆ. ಮೈಮೇಲೆ ಕಪ್ಪು ಬಣ್ಣದ ಉದ್ದ ತೋಳಿನ ಸ್ವೇಟರ್, ಹೂವಿನ ಚಿತ್ರವಿರುವ ಸ್ಕಿನ್ ಕಲರ್ ಚೂಡಿದಾರ್ ಧರಿಸಿದ್ದು, ಕೊರಳಲ್ಲಿ ಕರಿಮಣಿ ತಾಳಿ ಸರವಿದೆ.

ಶಿವಮೊಗ್ಗ ಮತ್ತು ಭದ್ರಾವತಿ ರೈಲು ನಿಲ್ದಾಣಗಳ ಮಧ್ಯೆ ಬರುವ ರೈಲ್ವೆ ಕಿ.ಮೀ. 50/800-900 ರಲ್ಲಿ ಸುಮಾರು 25-30 ವರ್ಷ ವಯಸ್ಸಿನ ಗಂಡಸ್ಸಿನ ಮೃತ ದೇಹ ಪತ್ತೆಯಾಗಿದೆ. ಮೃತನ ಚಹರೆ 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಡುಗೋಧಿ ಮೈಬಣ್ಣ, ಮೃತನ ಬಲಗೈ ಭುಜದ ಹತ್ತಿರ ಅಮ್ಮ ಎಂಬ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ಕಡು ಗುಲಾಬಿ ಬಣ್ಣದ ರೆಡಿಮೇಡ್ ಟೀ ಶರ್ಟ್ ಕಪ್ಪು ಸೈಲೀಶ್ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.

ಈ ಮೇಲ್ಕಂಡ ಮೃತ ವ್ಯಕ್ತಿಗಳ ವಾರಸ್ಸುದಾರರು ಇದ್ದಲ್ಲಿ ರೈಲ್ವೆ ಪೊಲೀಸ್ ಠಾಣೆ ದೂ.ಸಂ.:08182-222974/ 948082124 ನ್ನು ಸಂಪರ್ಕಿಸುವAತೆ ರೈಲ್ವೆ ಪೊಲೀಸ್ ಪ್ರಕಟಣೆ ತಿಳಿಸಿದೆ.