
ಶಿವಮೊಗ್ಗ: ಮಾರ್ಚ್ 19 \: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಜಿಲ್ಲಾ ಕ್ಷಯರೋಗ ವಿಭಾಗದ ವತಿಯಿಂದ ಮಾ. 24 ರಂದು ಬೆಳಗ್ಗೆ 7.00ಕ್ಕೆ ಸಾರ್ವಜನಿಕರಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸೈಕಲ್ ಹಾಗೂ ಕಾಲು ನಡಿಗೆ ಜಾಥಾ ಏರ್ಪಡಿಸಿದೆ.

ಈ ಜಾಥವು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊAಡು ಬಿ.ಹೆಚ್.ರಸ್ತೆ ಮುಖಾಂತರ ಬಸ್

ನಿಲ್ದಾಣ, ಪ್ರವಾಸಿ ಮಂದಿರ, ಕುವೆಂಪು ರಸ್ತೆ, ಶಿವಮೂರ್ತಿ ಸರ್ಕಲ್, ಡಿ.ವಿ.ಎಸ್. ಸರ್ಕಲ್, ಗೋಪಿ ಸರ್ಕಲ್ ಮೂಲಕ ಐ.ಎಂ.ಎ.

ಸಭಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
———————-