
ಎಸ್ ಎಸ್ ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಸೂಚನೆಗಳೊಂದಿಗೆ ಕೊನೆ ಕ್ಷಣದ ಟಿಪ್ಸ್
ಮಾರ್ಚ್ 21ರಿಂದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಲಿದೆ .
ವಿದ್ಯಾರ್ಥಿಗಳ ಬದುಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಒಂದು ಪ್ರಮುಖ ಘಟ್ಟವಾಗಿದೆ,
ಏಕೆಂದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ದಾರಿಗಳು ನಿರ್ಧರಿತವಾಗುವುದೇ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಹಾಗೂ ಅವುಗಳು ನೀಡುವ ಫಲಿತಾಂಶಗಳಿಂದ. ಹಾಗಾಗಿ ಪ್ರತಿಯೊಬ್ಬ ತಂದೆ ತಾಯಿಯಂದಿರು ತಮ್ಮ ಮಕ್ಕಳು ಚೆನ್ನಾಗಿ ಓದಿ ಅತ್ಯುನ್ನತ ಶ್ರೇಣಿ ಹಾಗೂ ಅತ್ಯಧಿಕ ಅಂಕಗಳನ್ನು ಗಳಿಸಬೇಕು, ಪ್ರತಿಷ್ಠಿತ ಪಿಯುಸಿ ಕಾಲೇಜಿನಲ್ಲಿ ಸೀಟ್ ಗಳಿಸಿ ಡಾಕ್ಟರ್,ಇಂಜಿನಿಯರ್, ಸೈಂಟಿಸ್ಟ್ ಅಥವಾ ದೊಡ್ಡ ಅಧಿಕಾರಿ ಆಗಬೇಕೆಂದು ಕನಸು ಕಾಣುತ್ತಾರೆ. ಈ ರೀತಿಯ ಕನಸುಗಳನ್ನು ನನಸು ಮಾಡಿಕೊಳ್ಳಲು ಪೋಷಕರು ಮತ್ತು ವಿದ್ಯಾರ್ಥಿಗಳು ಈ ಕೊನೆಯ ಹಂತದಲ್ಲಿ ವಹಿಸಬಹುದಾದ ಮುಂಜಾಗ್ರತಾ ಕ್ರಮಗಳನ್ನು ಇಲ್ಲಿ ಸೂಚಿಸಲಾಗಿದೆ.
*ಪೋಷಕರು ನಿರ್ವಹಿಸಬೇಕಾದ ಜವಾಬ್ದಾರಿಗಳು*


2. .



*ಪರೀಕ್ಷಾ ಹಿಂದಿನ ದಿನ ವಿದ್ಯಾರ್ಥಿಗಳು ಪಾಲಿಸಬೇಕಾದ ಅಂಶಗಳು*:
1. ನಿಗದಿಪಡಿಸಿದ ಪ್ರವೇಶ ಪತ್ರವನ್ನು ಶಾಲೆಯಿಂದ ಪಡೆದು ಸಿದ್ಧಪಡಿಸಿಕೊಳ್ಳುವುದು.
2. ಪರೀಕ್ಷೆಗೆ ಬೇಕಾದ ಪರಿಕರಗಳಾದ ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಮತ್ತು ಕುಡಿಯುವ ನೀರಿನ ಬಾಟಲ್ ಇವುಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವುದು.

*
1. ಓದುವಾಗ ಮಾಡಿಟ್ಟುಕೊಂಡಿರುವ ಟಿಪ್ಪಣಿಯನ್ನು ಪುನಾರವರ್ತನೆಗೆ ಬಳಕೆ ಮಾಡಿ.
2. ಪುಸ್ತಕ ಓದುವುದು ಮತ್ತು ತರಗತಿಯಲ್ಲಿ ಬರೆದುಕೊಂಡಿರುವ ಹೋಂ ವರ್ಕ್ ಮತ್ತು ಇತರೆ ನೋಟ್ಸ್ ಪುಸ್ತಕಗಳನ್ನು ಓದುವುದು ಹೆಚ್ಚು ಸಮಯ ವ್ಯರ್ಥ ಮಾಡುತ್ತದೆ .
3. ಪುನರಾವರ್ತನೆಗಾಗಿ ನೋಟ್ಸ್ ಮತ್ತು ಮೈಂಡ್ ಮ್ಯಾಪ್ ಗಳನ್ನು ಬಳಕೆ ಮಾಡುವುದು ಹೆಚ್ಚು ಉಪಯುಕ್ತವಾಗುತ್ತದೆ.
*ಪರೀಕ್ಷೆಯ ದಿನ ಪಾಲಿಸಬೇಕಾದ ಅಂಶಗಳು:*
1. ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮೊದಲು ನಿಗದಿತ ನಿಮ್ಮ ಪರೀಕ್ಷಾ ಕೇಂದ್ರವನ್ನು ತಲುಪಿರಿ.
2. ಪರೀಕ್ಷಾ ಕೇಂದ್ರದಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಯಾವ ಕೊಠಡಿಯಲ್ಲಿ ನಿಗದಿತವಾಗಿದೆ ಎಂಬುದನ್ನು ಗುರುತು ಮಾಡಿಕೊಳ್ಳಿ. ಅಂದರೆ ನೀವು ಪರೀಕ್ಷೆ ಬರೆಯಬೇಕಾದ ಕೊಠಡಿ ಸಂಖ್ಯೆ ಯಾವುದು ಎಂಬುದನ್ನು ಗುರುತು ಮಾಡಿಕೊಳ್ಳಿ.
3. ಪರೀಕ್ಷಾ ಪರಿಕರಗಳಾದ ಪ್ರವೇಶ ಪತ್ರ ಪೆನ್ ಪೆನ್ಸಿಲ್ ಜಾಮಿಟ್ರಿ ಬಾಕ್ಸ್ ಮತ್ತು ಕುಡಿಯುವ ನೀರಿನ ಬಾಟಲ್ ಇವುಗಳನ್ನು ತೆಗೆದುಕೊಂಡು ಇರುವುದಕ್ಕೆ ಖಾತ್ರಿ ಮಾಡಿಕೊಳ್ಳಿ.
4. ಪರೀಕ್ಷಾ ಕೇಂದ್ರ ತಲುಪಿದಾಗ ಸಹಪಾಠಿಗಳು ಸಿಕ್ಕರೆ ಅವರೊಂದಿಗೆ ಒಂದೆರಡು ಮಾತನಾಡಿ ನಿಲ್ಲಿಸಿ. ಅದು ಬಿಟ್ಟರೆ ನಿಮ್ಮ ಸಿದ್ಧತೆ ಬಗ್ಗೆ ಹೇಳಿಕೊಳ್ಳುವುದು ಅವರ ತಯಾರಿ ಬಗ್ಗೆ ಕುತೂಹಲ ವ್ಯಕ್ತಪಡಿಸುವುದು ಮತ್ತು ಅವರೊಂದಿಗೆ ನಿಮ್ಮ ಅನುಮಾನಗಳನ್ನು ಚರ್ಚಿಸಿ ಪರಿಹಾರ ಮಾಡಿಕೊಳ್ಳುವುದಕ್ಕೆ ಹೋಗುವುದು ಸರಿ ಅಲ್ಲ, ಅದು ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುತ್ತದೆ.

*ಪರೀಕ್ಷಾ ಕೊಠಡಿ ಪ್ರವೇಶಿಸಿದ ನಂತರ ಪಾಲಿಸಬೇಕಾದ ಅಂಶಗಳು :*
1. ಪರೀಕ್ಷೆಯ ಪ್ರಾರಂಭದಲ್ಲಿಯೇ ನಿಮಗೆ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆಯಾದರೂ 15 ನಿಮಿಷದ ನಂತರವೇ ನೀವು ಉತ್ತರಿಸಲು ಪ್ರಾರಂಭಿಸಬೇಕು.
2. ಪ್ರಶ್ನೆ ಪತ್ರಿಕೆ ಪಡೆದ ಕೂಡಲೇ ಅದರ ಮೇಲೆ ನಿಮ್ಮ ರಿಜಿಸ್ಟರ್ ನಂಬರನ್ನು ಬರೆಯಬೇಕು.
3. 15 ನಿಮಿಷಗಳ ಅವಧಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಪೂರ್ತಿ ಓದಿಕೊಳ್ಳಿ. ಉತ್ತರಿಸಬೇಕಾದ ಪ್ರಶ್ನೆಗಳ ಆದ್ಯತೆಯನ್ನು ನಿರ್ಧರಿಸಿಕೊಳ್ಳಲು ಇದು ನಿಮಗೆ ನೆರವಾಗುತ್ತದೆ.
4. ಉತ್ತರ ಪತ್ರಿಕೆಯನ್ನು ಪಡೆದುಕೊಂಡ ಕೂಡಲೇ ಸೂಚಿಸುವ ಜಾಗದಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಅನ್ನು ಬರೆಯಿರಿ.ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ.

5. ಸುಲಭ ಎನಿಸಿದ ಪ್ರಶ್ನೆಗಳನ್ನು ಮೊದಲು ಉತ್ತರಿಸಿ, ಯಾವ ಪ್ರಶ್ನೆಗಳನ್ನು ಉತ್ತರಿಸದೇ ಬಿಡಬೇಡಿ. ತಿಳಿದಿರುವಷ್ಟು ಉತ್ತರವನ್ನಾದರೂ ಬರೆಯಿರಿ.
6. ಪ್ರತಿ ಪ್ರಶ್ನೆಯನ್ನು ಉತ್ತರಿಸುವ ಮುನ್ನ ಆ ಪ್ರಶ್ನೆಯ ಕ್ರಮ ಸಂಖ್ಯೆಯನ್ನು ಕೂಡ (ಮಾರ್ಜಿನ್ ನಲ್ಲಿ) ನಿಗದಿತ ಜಾಗದಲ್ಲಿ ಸ್ಪಷ್ಟವಾಗಿ ಬರೆಯಿರಿ.
7. ಪ್ರತಿ ಪ್ರಶ್ನೆಯ ಉತ್ತರದ ನಂತರ ಕೊಂಚ ಜಾಗ ಬಿಟ್ಟು ಮುಂದಿನ ಪ್ರಶ್ನೆಯ.ಉತ್ತರವನ್ನು ಪ್ರಾರಂಭಿಸಿ. ಬೇಕಾದರೆ ನಿಮಗೆ ಹೆಚ್ಚುವರಿ ಉತ್ತರ ಪತ್ರಿಕೆಯನ್ನು
ಒದಲಾಯಿಸಲಾಗುತ್ತದೆ ಆದರೆ ಅನಗತ್ಯವಾಗಿ ಹೆಚ್ಚು ಹಾಳೆಗಳನ್ನು ಪಡೆದುಕೊಳ್ಳಬೇಡಿ.

8. ಕೇಳಿರೋ ಪ್ರಶ್ನೆಗೆ ಅಗತ್ಯವಿರುವಷ್ಟು ಉತ್ತರವನ್ನು ಬರೆಯಿರಿ. ನೀವು ಎಷ್ಟು ಪುಟಗಳಷ್ಟು ಉತ್ತರವನ್ನು ಬರೆದಿದ್ದೀರಿ ಎನ್ನುವುದಕ್ಕಿಂತ ನೀವು ಬರೆದಿರುವ ಉತ್ತರ ಎಷ್ಟು ಗುಣಾತ್ಮಕವಾಗಿದೆ ಎನ್ನುವುದು ಮುಖ್ಯವಾಗುತ್ತದೆ.
9. ಉತ್ತರ ಪತ್ರಿಕೆಯ ಕೊನೆಯ ಹಾಳೆಯನ್ನು ರಫ್ ವರ್ಕ್ ಗಾಗಿ ಬಳಸಿಕೊಳ್ಳಿ, ಆ ಪುಟದ ಮೇಲೆ ರಫ್ ವರ್ಕ್ ಎಂದು ಸೂಚಿಸಿ.
10. ಯಾವುದೇ ಕಾರಣಕ್ಕೂ ಪ್ರಶ್ನೆ ಪತ್ರಿಕೆಯ ಮೇಲೆ ರಿಜಿಸ್ಟರ್ ನಂಬರ್ ಹೊರತಾಗಿ ಬೇರೆ ಏನನ್ನು ಬರೆಯಬೇಡಿ.
11. ನೀವು ಉತ್ತರಿಸುತ್ತಿರುವಾಗ ಕೊಠಡಿಯ ಒಳಗೆ ಅಥವಾ ಹೊರಗೆ ನಡೆಯುತ್ತಿರುವ ಇತರೆ ಘಟನೆಗಳ ಕಡೆ ಗಮನ ಹರಿಸಬೇಡಿ. ಇದು ನಿಮ್ಮ ಬರೆಯುವ ಏಕಾಗ್ರತೆಗೆ ಭಂಗ ತರುತ್ತದೆ.
*ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬೇಕೇ? ಈ ಕೆಳಗಿನ ಪರಿಣಾಮಕಾರಿ ಅಂಶಗಳನ್ನು ಫಾಲೋ ಮಾಡಿ*:
1. ಮೊದಲು ಪ್ರಶ್ನೆ ಪತ್ರಿಕೆ ಓದಿರಿ.
2. ಮೊದಲು 15 ನಿಮಿಷ ಪರಿಣಾಮಕಾರಿಯಾಗಿ ಬಳಸಿಕೊಳ್ಳಿ
3. ಕಠಿಣ ಪ್ರಶ್ನೆಗಳ ಬಗ್ಗೆ ಚಿಂತಿಸಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ.
4. ಸರಿಉತ್ತರ ಬರೆಯಲು ಆದ್ನ್ಯತೆ ನೀಡಿ
,ಸೋಲು, ತಪ್ಪುಗಳು, ಮತ್ತು ಅನುತ್ತೀರ್ಣತೆಗಳನ್ನು ನೆನಪಿಸಿಕೊಳ್ಳುತ್ತಾ ಓದಿಗೆ ತೊಂದರೆ ಮಾಡಿಕೊಳ್ಳುವುದನ್ನು ಬಿಟ್ಟು ಮಾನಸಿಕವಾಗಿ ಉತ್ತೇಜನ ಆಗುವಂತಹ ಮಾತುಗಳನ್ನು ತಂದೆ-ತಾಯಿಯೊಂದಿಗೆ ಹಂಚಿಕೊಳ್ಳುವುದು. ಹೆಚ್ಚು ಆದ್ಯತೆ ನೀಡಿ.
5. ನಿಖರತೆ ಮತ್ತು ವೇಗ ಖಚಿತಪಡಿಸಿಕೊಳ್ಳಿ
6. ಸರಿಉತ್ತರ ಬರೆಯುವಾಗ ಸಮಯದ ಮೇಲೆ ಗಮನವಿರಲಿ
7. ಒಂದೇ ಪ್ರಶ್ನೆಗೆ ಮತ್ತು ಉತ್ತರ ಬರದಿರುವ ಪ್ರಶ್ನೆಗೆ ಹೆಚ್ಚು ಚಿಂತಿಸದಿರಿ.
8. ಬರೆದಿರುವ ಉತ್ತರವನ್ನು ಕೊನೆಯಲ್ಲಿ ಒಮ್ಮೆ ಪರಿಶೀಲನೆ ಮಾಡಿ.

ಎಸ್ ಎಸ್ ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭವಾಗಲಿ.
ರಂಗನಾಥಯ್ಯ.ಎಸ್
ಪ್ರಾಚಾರ್ಯರು
ವಿವೇಕಾನಂದ ಲಯನ್ಸ್ ಪದವಿಪೂರ್ವ ಕಾಲೇಜು
ಹೊಳೆ ಹೊನ್ನೂರು -577227